Thursday, January 23, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ವಿದ್ಯಾರ್ಥಿಗಳ ಕನಸು ನನಸಾಗಿಸಲು ಮೌಲ್ಯಾಧರಿತ ಶಿಕ್ಷಣ : ಹೊಸ ಅವಕಾಶಗಳ ಜೊತೆಗೆ ಪೂರಕ ಶಿಕ್ಷಣ : ವಿವೇಕಾನಂದ ಪದವಿಪೂರ್ವ ಕಾಲೇಜು – ಕಹಳೆ ನ್ಯೂಸ್

ಪುತ್ತೂರು: ಗ್ರಾಮೀಣ ಪ್ರದೇಶದ ಜನತೆಯ ಶೈಕ್ಷಣಿಕ ಕನಸುಗಳನ್ನು ಸಾಕಾರಗೊಳಿಸುವ ಉದ್ದೇಶದಿಂದ 1965ರಲ್ಲಿ ಪುತ್ತೂರಿನ ಜನತೆಯ ಪ್ರೋತ್ಸಾಹದಿಂದ ರೂಪುಗೊಂಡ ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು (ರಿ) ಇದರ ಮೊದಲ ಸಂಸ್ಥೆ ವಿವೇಕಾನಂದ ಪದವಿಪೂರ್ವ ಕಾಲೇಜು.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ಮತ್ತು ಆಸುಪಾಸಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಸ್ಥಾಪನೆಗೊಂಡ ವಿವೇಕಾನಂದ ಪದವಿಪೂರ್ವ ಕಾಲೇಜು ಮೌಲ್ಯಾಧರಿತ ಕಲಿಕೆ ಮತ್ತು ಉತ್ತಮ ಫಲಿತಾಂಶಗಳನ್ನು ನೀಡುವ ಪ್ರತಿಷ್ಠಿತ ಸಂಸ್ಥೆಗಳಲ್ಲೊಂದಾಗಿ ಕನ್ನಡ ನಾಡಿನಾದ್ಯಂತ ಗುರುತಿಸಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗುಣಮಟ್ಟದ ಶಿಕ್ಷಣ, ಅನುಭವಿ ಸೃಜನಶೀಲ ಉಪನ್ಯಾಸಕ ತಂಡ ವಿದ್ಯಾಸಂಸ್ಥೆಯ ಹೆಗ್ಗಳಿಕೆ. ಶಿಕ್ಷಣವೆಂದರೆ ಪಾಠವಷ್ಟೇ ಅಲ್ಲ ಎಂಬುದು ಈ ಕಾಲೇಜಿನ ದೃಢ ಸಿದ್ದಾಂತ. ಹಾಗಾಗಿಯೇ ಕಾಲೇಜಿನ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಂತಹ ಮಹತ್ತರವಾದ ಕಾರ್ಯವು ಇಲ್ಲಿ ನಿರಂತರವಾಗಿ ನಡೆಯುತ್ತಲೇ ಇದೆ.

ಫಲಿತಾಂಶ:

2020-21ನೇ ಶೈಕ್ಷಣಿಕ ವರ್ಷ
ದ್ವಿತೀಯ ಪಿಯುಸಿ ಫಲಿತಾಂಶ : 100%
600 ರಲ್ಲಿ 600 ಅಂಕ ಗಳಿಸಿದವರು-10
ಡಿಸ್ಟಿಂಕ್ಷನ್ – 303
ಪ್ರಥಮ ದರ್ಜೆ – 577

ಜೆಇಇ/ನೀಟ್/ಸಿಇಟಿ-2021 ಪರೀಕ್ಷೆ-ತಾಲೂಕಿನಲ್ಲೇ ಅತ್ಯುತ್ತಮ ಫಲಿತಾಂಶ
 ನೀಟ್-2021:

ರಾಷ್ಟ್ರಮಟ್ಟದ ಅತ್ಯುತ್ತಮ ಐತಿಹಾಸಿಕ ಸಾಧನೆ -ಸಿಂಚನಾಲಕ್ಷ್ಮಿಗೆ ದ್ವಿತೀಯ ರ‍್ಯಾಂಕ್:
ವೈದ್ಯಕೀಯ ಶಿಕ್ಷಣದ ಪ್ರವೇಶಕ್ಕಾಗಿ ಕೇಂದ್ರ ಸರಕಾರವು ನಡೆಸಿದ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಸಿಂಚನಾಲಕ್ಷ್ಮಿ ಪಿಡಬ್ಲ್ಯೂಡಿ ಕೆಟಗರಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಎರಡನೇ ರ‍್ಯಾಂಕ್ ಗಳಿಸುವುದರ ಮೂಲಕ ಜಿಲ್ಲೆಯಲ್ಲೇ ಅಮೋಘ ಸಾಧನೆಗೈದ ವಿದ್ಯಾರ್ಥಿನಿಯಾಗಿದ್ದಾಳೆ. ಗಳಿಸಿದ ಅಂಕಗಳು 658/720

ಸಿಇಟಿ:
ಸಿಂಚನಾಲಕ್ಷ್ಮಿ
ಎಗ್ರಿಕಲ್ಚರ್ ಬಿ.ಯಸ್ಸಿ.ಯಲ್ಲಿ 530 ನೇ ರ‍್ಯಾಂಕ್, ಇಂಜಿನಿಯರಿಂಗ್‌ನಲ್ಲಿ 1582ನೇ ರ‍್ಯಾಂಕ್, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 974 ನೇ ರ‍್ಯಾಂಕ್
ಅಮೃತಾ ಭಟ್
ಎಗ್ರಿಕಲ್ಚರ್ ಬಿ.ಯಸ್ಸಿ.ಯಲ್ಲಿ 579 ನೇ ರ‍್ಯಾಂಕ್ ,ಇಂಜಿನಿಯರಿಂಗ್ ನಲ್ಲಿ 1153ನೇ ರ‍್ಯಾಂಕ್
ಗಣೇಶ ಕೃಷ್ಣ
ಇಂಜಿನಿಯರಿಂಗ್ ವಿಭಾಗದಲ್ಲಿ 677ನೇ ರ‍್ಯಾಂಕ್ ,ಎಗ್ರಿಕಲ್ಚರ್ ಬಿ.ಯಸ್ಸಿ.ಯಲ್ಲಿ 1385 ನೇ ರ‍್ಯಾಂಕ್
ಚಿನ್ಮಯಿ
ಇಂಜಿನಿಯರಿಂಗ್ ವಿಭಾಗದಲ್ಲಿ 784ನೇ ರ‍್ಯಾಂಕ್
ಅವನೀಶ ಕೆ
ಇಂಜಿನಿಯರಿಂಗ್ ವಿಭಾಗದಲ್ಲಿ 1383ನೇ ರ‍್ಯಾಂಕ್
ಜೆಇಇ ಎಡ್ವಾನ್ಸ್- 2021 ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ ಅಮೋಘ ಸಾಧನೆ
ಸಿಂಚನಾಲಕ್ಷ್ಮೀ 106 ನೇ ರ‍್ಯಾಂಕ್ (ಪಿಡಬ್ಲ್ಯೂಡಿ ಕೆಟಗರಿ)

ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಉತ್ತಮ ಪರ್ಸಂಟೈಲ್:
ಚಿನ್ಮಯಿ – 96.63, ಗಣೇಶಕೃಷ್ಣ ಬಿ – 92.77, ಅವನೀಶ ಕೆ-89.80, ಶ್ರೀರಕ್ಷಾ ಬಿ-88.34, ಪ್ರತೀಕ ಗಣಪತಿ ಪಿ-85.2
ಸಿ ಎ ಫೌಂಡೇಶನ್ ಪರೀಕ್ಷೆ:
ಸಿ ಎ ಫೌಂಡೇಶನ್ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಶಿಲ್ಪ ಎಂ.ಕೆ, ಅಂಬಾತನಯ ಎ, ಸ್ವರೂಪ್‌ರೂಪೇಶ್, ಮೋಕ್ಷಿತ್‌ಕುಮಾರ್, ಅನುಶ್, ರಾಮಚಂದ್ರ ವಿದ್ಯಾಸಾಗರ್, ಸುಹಾಸ್ ಎಚ್ ನಾಯಕ್, ತೇಜಸ್ ಕೆ, ಧನುಶ್ ಬಿ, ಗ್ರೀಷ್ಮ ಆರ್ ಆಳ್ವ ತೇರ್ಗಡೆಯಾಗುವುದರ ಮೂಲಕ ಮುಂದಿನ ಹಂತದ ಸಿ ಎ ಇಂಟರ್‌ಮಿಡಿಯೆಟ್ ಪರೀಕ್ಷೆಯನ್ನು ಬರೆಯಲು ಅರ್ಹತೆ ಗಳಿಸಿದ್ದಾರೆ. ಪ್ರತಿ ವರ್ಷವೂ ಕಾಲೇಜಿನಿಂದ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ವಿವೇಕಾನಂದ ಕಾಲೇಜು ನಿಮ್ಮ ನೆಚ್ಚಿನ ಆಯ್ಕೆ ಏಕೆ?
• ಸುಸಂಸ್ಕೃತ ಭಾರತೀಯ ಶಿಕ್ಷಣ
• ಸುಮಾರು 2000 ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿರುವ ವಿವೇಕಾನಂದ ಕಾಲೇಜು ರಾಜ್ಯದಲ್ಲೇ ಪ್ರತಿಷ್ಠಿತ ಸಂಸ್ಥೆ
• ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 98% ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ
• 95% ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಶೇಷ ಶುಲ್ಕ ವಿನಾಯಿತಿ.
• ಸಿ.ಇ.ಟಿ , ಜೆ.ಇ.ಇ, ನೀಟ್ ಮತ್ತು ಸಿ.ಎ ಫೌಂಡೇಶನ್ ಕೋರ್ಸುಗಳ ತರಬೇತಿ.
• ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕ ಪರಂಪರೆ, ದೇಶಪ್ರೇಮ, ಶಿಸ್ತು, ಸಚ್ಚಾರಿತ್ರ್ಯ, ಉತ್ತಮ ಹವ್ಯಾಸ, ಸದಭಿರುಚಿಗಳನ್ನು ಪೋಷಿಸುವ ಶಿಕ್ಷಣ
• ಶೈಕ್ಷಣಿಕವಾಗಿ ಪೂರಕವಾದ, ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನಕ್ಕಾಗಿ, ಸಾಹಿತ್ಯಕ್ಕೆ ಸಂಬಂಧಿಸಿದ ಒಟ್ಟು 52,000 ಪುಸ್ತಕಗಳು, ಹಲವು ದಿನಪತ್ರಿಕೆ, ವಾರಪತ್ರಿಕೆಗಳನ್ನು ಹೊಂದಿದ ಸುಸಜ್ಜಿತ ಪ್ರಯೋಗಾಲಯ
• ಶಿಸ್ತು ಬದ್ಧ , ಜವಾಬ್ದಾರಿಯುತ ದೇಶ ಭಕ್ತ ವ್ಯಕ್ತಿಗಳ ನಿರ್ಮಾಣ ಮಾಡಬಲ್ಲ ಶಿಕ್ಷಣ
• ವಿಶಾಲವಾದ ಕೊಠಡಿಗಳು, ಸುಸಜ್ಜಿತವಾದ ಪ್ರಯೋಗಾಲಯಗಳು,
• ವಿದ್ಯಾಭ್ಯಾಸಕ್ಕೆ ಸೂಕ್ತ ಪರಿಸರ, ಕಾಲೇಜಿಗೆ ಸಮೀಪವಿರುವ ವಸತಿ ನಿಲಯಗಳು
• ವಿಸ್ತಾರವಾದ ಮೈದಾನ ಮತ್ತು ವ್ಯಾಯಾಮ ಶಾಲೆ
• ನುರಿತ ಅನುಭವಿ ಅಧ್ಯಾಪಕರ ತಂಡ
• ಪದವಿಪೂರ್ವ ಶಿಕ್ಷಣ ಇಲಾಖೆ ನಿಗದಿಪಡಿಸಿದ ಪರೀಕ್ಷೆಗಳಲ್ಲದೆ ಹೆಚ್ಚುವರಿ ಪರೀಕ್ಷೆಗಳು
• ಎಸ್.ಎಂ.ಎಸ್ ಮೂಲಕ ನೇರವಾಗಿ ಹೆತ್ತವರಿಗೆ ಅಂಕಗಳ ರವಾನೆ
• 700 ವಿದ್ಯಾರ್ಥಿಗಳು ಕುಳಿತುಕೊಳ್ಳಬಹುದಾದ ಸಭಾಭವನ
• ಎಲ್.ಸಿ.ಡಿ ಪ್ರೊಜೆಕ್ಟರ್ ಇರುವ ಇ- ಕ್ಲಾಸ್ ರೂಮ್

 ಕೋಚಿಂಗ್ ತರಗತಿಗಳು:
ಜೆಇಇ/ನೀಟ್/ಸಿಇಟಿ -ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿವಿಧ ರೀತಿಯಲ್ಲಿ ತರಬೇತಿ ನೀಡಲಾಗುತ್ತದೆ
• ಇವಿನಿಂಗ್ ಬ್ಯಾಚ್-ಪ್ರತಿದಿನ ಸಂಜೆ 3.30 ರಿಂದ 5.00 ಘಂಟೆಯವರೆಗೆ ತರಬೇತಿ
• ವೀಕೆಂಡ್ ಬ್ಯಾಚ್ -ಪ್ರತಿ ಶನಿವಾರ ಮತ್ತು ಆದಿತ್ಯವಾರದ ತರಬೇತಿ
• ಸ್ಪೆಷಲ್ ಬ್ಯಾಚ್ -ಪದವಿ ಪೂರ್ವ ಪಠ್ಯದ ಜೊತೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ
ಸಿ ಎ ಫೌಂಡೇಶನ್ ಕೋರ್ಸ್
ಇವಿನಿಂಗ್ ಬ್ಯಾಚ್ -ಪ್ರತಿದಿನ ಸಂಜೆ 3.00 ರಿಂದ 4.30 ರವರೆಗೆ ಮತ್ತು ರಜಾ ದಿನಗಳಲ್ಲಿ ತರಬೇತಿ

ಉಚಿತ ಕಂಪ್ಯೂಟರ್ ಶಿಕ್ಷಣ :
ವಾಣಿಜ್ಯ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಕಂಪ್ಯೂಟರ್ ಶಿಕ್ಷಣವನ್ನು ಉಚಿತವಾಗಿ
ನೀಡಲಾಗುತ್ತದೆ.
ನಿಧಾನಕಲಿಕೆಯ ವಿದ್ಯಾರ್ಥಿಗಳಿಗೆ ಪ್ರತಿ ದಿನ ಸಂಜೆ 3 ರಿಂದ 5 ರವರೆಗೆ ಆಯಾ ವಿಷಯಗಳಲ್ಲಿ ಪೂರಕ ತರಗತಿಗಳು ನಡೆಯುತ್ತವೆ.

ಯಶಸ್:
ಯುಪಿಎಸ್‌ಸಿ , ಐಪಿಎಸ್, ಐಆರ್‌ಎಸ್, ಕೆಎಎಸ್ ಪರೀಕ್ಷೆಗಳನ್ನು ಬರೆಯುವ ಸ್ಪಷ್ಟವಾದ ಉದ್ದೇಶವನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಪೂರ್ಣ ಮತು ದೀರ್ಘವಾದ ತರಬೇತಿ ನೀಡುವುದಕ್ಕಾಗಿ ಯಶಸ್ ಕಾರ್ಯನಿರ್ವಹಿಸುತ್ತಿದೆ. ಪ್ರತಿದಿನ ಸಂಜೆ ಮತ್ತು ರಜಾದಿನಗಳಲ್ಲಿ ನುರಿತ ತರಬೇತುದಾರರಿಂದ ವಿದ್ಯಾರ್ಥಿಗಳಿಗೆ ನಿರಂತರವಾಗಿ ಯಶಸ್ ಮೂಲಕ ಪಬ್ಲಿಕ್ ಸರ್ವೀಸ್ ಪರೀಕ್ಷೆಗಳ ಶಿಕ್ಷಣ ನೀಡಲಾಗುತ್ತದೆ.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕ ವ್ಯವಸ್ಥೆಗಳು
• ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳಿಗೆ ಸೂಕ್ತ ಅವಕಾಶಗಳನ್ನು ನೀಡುವ ಅವರ ಸೃಜನಶೀಲತೆಯನ್ನು ಪ್ರೋತ್ಸಾಹಿಸುವ ‘ಚಿಗುರು’ ಭಿತ್ತಿಪತ್ರಿಕೆ
• ವಿದ್ಯಾರ್ಥಿಗಳ ಪ್ರತಿಭೆಗೆ ತಕ್ಕಂತೆ ಪೂರಕವಾಗಿ ತರಬೇತಿ ನೀಡುವ ಲಲಿತಾಕಲಾ ಸಂಘ, ವಿಜ್ಞಾನ ಸಂಘ, ವಾಣಿಜ್ಯ ಸಂಘ, ಮಾನವಿಕ ಸಂಘ\\

ರೇಡಿಯೋ ಪಾಂಚಜನ್ಯ:

ರೇಡಿಯೋ ಪಾಂಚಜನ್ಯ 90.8 ಸಮುದಾಯ ಬಾನುಲಿ ಕೇಂದ್ರದಲ್ಲಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ನೇತೃತ್ವದಲ್ಲಿ ಪುಸ್ತಕ ಪರಿಚಯ, ಸಣ್ಣಕಥೆ, ಕವಿತೆ, ಪ್ರಬಂಧ, ಲೇಖನ, ಭಾಷಣ, ಹಾಡು, ಜಾನಪದ ಗೀತೆ, ಭಕ್ತಿಗೀತೆ, ಕಗ್ಗ ಮತ್ತು ವ್ಯಾಖ್ಯಾನ, ಅಡುಗೆ ವಿಶೇಷ, ಯಕ್ಷಗಾನ ತಾಳ ಮದ್ದಳೆ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
• ಎನ್.ಸಿ.ಸಿ ವಿಭಾಗ:
ದೇಶಭಕ್ತರನ್ನು ನಿರ್ಮಾಣ ಮಾಡಬಲ್ಲ ದೇಶಸೇವೆಯನ್ನು ಉದ್ದೀಪಿಸಬಲ್ಲ ಎನ್.ಸಿ.ಸಿ.ಯ ಅತ್ಯುತ್ತಮ ಘಟಕವು ಕಾಲೇಜಿನಲ್ಲಿದೆ. ಪ್ರತಿ ಶನಿವಾರ ಮಧ್ಯಾಹ್ನ ಎನ್.ಸಿ.ಸಿ. ತರಗತಿಗಳು ನಡೆಯುವುದಲ್ಲದೆ ಪ್ರತಿಭಾವಂತ ವಿದ್ಯಾಥಿಗಳಿಗೆ ವಿಶೇಷ ಶಿಬಿರಗಳಲ್ಲಿ ಬಾಗವಹಿಸುವ ಅವಕಾಶವಿದೆ. ಈಗಾಗಲೇ ಕಾಲೇಜಿನ ಅನೇಕ ವಿದ್ಯಾಥಿಗಳು ದೆಹಲಿಯಲ್ಲಿ ಗಣರಾಜ್ಯ ದಿನದ ವಿಶೇಷ ಪೆರೇಡ್ ನಲ್ಲಿ ಭಾಗವಹಿಸಿ ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ.
• ಕ್ರೀಡಾ ವಿಭಾಗ :
ಅತ್ಯುತ್ತಮ ತರಬೇತಿ ನೀಡಬಲ್ಲ 3 ನುರಿತ, ಅನುಭವಿ ದೈಹಿಕ ಶಿಕ್ಷಕರನ್ನೊಳಗೊಂಡ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಪಟುಗಳನ್ನು ತರಬೇತುಗೊಳಿಸಿ ನಿರ್ಮಿಸಿದ ಅತ್ಯುತ್ತಮ ಕ್ರೀಡಾ ವಿಭಾಗವು ಕಾಲೇಜಿನಲ್ಲಿದೆ. ವಿಶಾಲ ಕ್ರೀಡಾಂಗಣ ಮತ್ತು ಅತ್ಯುತ್ತಮ ಜಿಮ್ನೇಷಿಯಂ ವಿದ್ಯಾರ್ಥಿಗಳಿಗೆ ಸದಾ ಲಭ್ಯವಿದೆ.
ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಅದ್ಭುತ ಸಾಧನೆಗೈದು ಸಂಸ್ಥೆಯ ಕೀರ್ತಿಯನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಪಸರಿಸಿದ್ದಾರೆ.

• ಲಭ್ಯವಿರುವ ವಿಷಯಗಳು
ವಿಜ್ಞಾನ ವಿಭಾಗ : (ಪಿ.ಸಿ.ಎಂ.ಬಿ /ಪಿ.ಸಿ.ಎಂ.ಸಿ /ಪಿ.ಸಿ.ಎಂ.ಎಸ್ /ಪಿ.ಸಿ.ಎಂ.ಇ )
(ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಬಯೋಲಜಿ, ಕಂಪ್ಯೂಟರ್ ವಿಜ್ಞಾನ , ಇಲೆಕ್ಟ್ರಾನಿಕ್ಸ್)
ವಾಣಿಜ್ಯ ವಿಭಾಗ: (ಎಸ್.ಇ.ಬಿ.ಎ / ಎಸ್.ಸಿ.ಬಿ.ಎ /ಇ.ಸಿ.ಬಿ.ಎ )
(ಇತಿಹಾಸ, ಆರ್ಥಿಕ ಗಣಿತಶಾಸ್ತ್ರ, ವ್ಯಾಪರ ಶಿಕ್ಷಣ, ಕಂಪ್ಯೂಟರ್)
ಕಲಾ ವಿಭಾಗ : (ಎಚ್.ಇ.ಪಿ.ಎಸ್ )
(ಇತಿಹಾಸ, ಅರ್ಥಶಾಸ್ತ್ರ, ರಾಜಕೀಯ ವಿಜ್ಞಾನ, ಸಮಾಜಶಾಸ್ತ್ರ)
ಭಾಷೆಗಳು: ಇಂಗ್ಲೀಷ್, ಕನ್ನಡ, ಹಿಂದಿ, ಸಂಸ್ಕೃತ

ಕಲಿಕೆ, ಕ್ರೀಡೆ, ಸಾಹಿತ್ಯಕ-ಸಾಂಸ್ಕೃತಿಕ ರಂಗಗಳಲ್ಲಿ ನಿರಂತರ ಮುಂಚೂಣಿಯಲ್ಲಿರುವ ವಿವೇಕಾನಂದ ಪದವಿಪೂರ್ವ ಕಾಲೇಜು ಕಾಲದ ಅಗತ್ಯಗಳಿಗೆ ತಕ್ಕ ಶಿಕ್ಷಣ ನೀಡುವ ಸಮಗ್ರ ಚಿಂತನೆಯ ಪರಿಪೂರ್ಣ ತಾಣ. ಪಾಠ, ಪ್ರವಚನ, ರ‍್ಯಾಂಕ್ ಗಳಿಕೆಗೆ ಸೀಮಿತವಾಗದೆ ಬದುಕಿನ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಲು ಬೇಕಾದ ಕೌಶಲವನ್ನು ರೂಢಿಸುವ, ವ್ಯಕ್ತಿತ್ವವನ್ನು ಅರಳಿಸುವ, ಸ್ವಾಭಿಮಾನಿ ಬದುಕನ್ನು ಕಟ್ಟಿಕೊಳ್ಳುವ ಸುಭದ್ರ ಪಂಚಾಗ ಇಲ್ಲಿನ ಶಿಕ್ಷಣ ಸ್ವರೂಪದಲ್ಲಿದೆ. ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ವೆಬ್‌ಸೈಟ್ www.vcpuc.vivekanandaedu.org ಅಥವಾ ss016puc@gmai.com ಅಥವಾ ಮೊಬೈಲ್ ಸಂಖ್ಯೆ: 9449259330 ,9483146330 ನ್ನು ಸಂರ್ಪಕಿಸಬಹುದು.

*ವಿವೇಕಾನಂದ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ.ನೈತಿಕ ವಿಚಾರಗಳನ್ನು ಮೈಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳಲ್ಲಿ ಆದರ್ಶ, ಸಂಸ್ಕಾರ ಮತ್ತು ರಾಷ್ಟ್ರಭಕ್ತಿಯನ್ನು ಪ್ರೇರೇಪಿಸುವ ಮೂಲಕ ವಿದ್ಯಾರ್ಥಿಗಳ ಉನ್ನತಿಗೆ ಸಹಾಯ ಮಾಡುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಹೇಳಿದ್ದಾರೆ

“ವಿವೇಕಾನಂದ ಪದವಿಪೂರ್ವ ಕಾಲೇಜು ಕಲಿಕೆಯ ದೇವಾಲಯವಿದ್ದಂತೆ. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಪ್ರೋತ್ಸಾಹಿಸಿ ಕಲಿಕೆಗೆ ಮತ್ತು ಪಠ್ಯೇತರ ಚಟುವಟಿಕೆಗೆ ಮನ್ನಣೆ ನೀಡುವ ಸಂಸ್ಥೆ” –  ಸಿಂಚನಾ ಲಕ್ಷ್ಮಿ, 2020-21 ನೇ ಸಾಲಿನ ನೀಟ್ ಸಾಧಕಿ