Thursday, January 23, 2025
ಸುದ್ದಿ

ಭಾವಿ ಪತಿಯನ್ನೇ ಬಂಧಿಸಿದ ಮಹಿಳಾ ಪೊಲೀಸ್ ಸಬ್ ಇನ್‍ಸ್ಪೆಕ್ಟರ್- ಕಹಳೆ ನ್ಯೂಸ್

ಮದುವೆಯಾಗಬೇಕಿದ್ದ ತನ್ನ ಭಾವಿ ಪತಿಯನ್ನೇ ಮಹಿಳಾ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಬಂಧಿಸಿರುವ ಘಟನೆ ಆಸ್ಸಾಂನಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿ ರಾಣಾ ಪಾಗ್ ಎಂಬಾತನನ್ನು ನಾಗಾವ್‍ನ ಪೊಲೀಸ್ ಠಾಣೆಯ ಪ್ರಭಾರಿ ಸಬ್ ಇನ್‍ಸ್ಪೆಕ್ಟರ್ ಜೋನ್ಮಣಿ ರಾಭಾ ಬಂಧಿಸಿದ್ದಾರೆ. ಈತ ನಕಲಿ ಗುರುತಿನ ಚೀಟಿಯನ್ನು ಬಳಕೆ ಮಾಡಿ ಈತ ಮದುವೆಯಾಗಲು ಯತ್ನಿಸುತ್ತಿದ್ದ ಎನ್ನಲಾಗಿದೆ. ಆರೋಪಿಯನ್ನು ನಾಗಾಂವ್ ನ್ಯಾಯಾಲಯವು 2 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.

ಕಳೆದ ವರ್ಷ ಸೋಶಿಯಲ್ ಮೀಡಿಯಾದಲ್ಲಿ ಪರಿಚಿತರಾದ ರಾಣಾ ಪಾಗ್ ತನ್ನನ್ನು ತಾನು ಒಎನ್‍ಜಿಸಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂದು ಸುಳ್ಳು ಹೇಳಿಕೊಂಡಿದ್ದ ಎನ್ನಲಾಗಿದೆ. ಇಬ್ಬರು ಇದೇ ವರ್ಷದ ನವೆಂಬರ್ ತಿಂಗಳಲ್ಲಿ ವಿವಾಹವಾಗುವವರಿದ್ದರು.