
ಪುತ್ತೂರು : ಸಂಪ್ಯ ಶ್ರೀ ಅನ್ನಪೂಣೇಶ್ವರಿ ಕ್ಷೇತ್ರ ಉದಯಗಿರಿಯಲ್ಲಿ ಮೇ ೧೦ ರಂದು ನಾಗಮಂಡಲೋತ್ಸವ ನಡಯಲಿದ್ದು, ಅದರ ಪ್ರಯುಕ್ತ ಇಂದು ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಹೊರೆಕಾಣಿಕೆ ಮೆರವಣಿಗೆಗೆ ರಾಜೇಶ್ ಬನ್ನೂರು ಅವರು ತೆಂಗಿನಕಾಯಿ ಹೊಡೆಯುವ ಮೂಲಕ ಚಾಲನೆ ನೀಡಿದ್ರು. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಿಂದ, ಪುತ್ತೂರು ಮುಖ್ಯ ರಸ್ತೆಯಾಗಿ ಸಂಪ್ಯ ಶ್ರೀ ಅನ್ನಪೂಣೇಶ್ವರಿ ಕ್ಷೇತ್ರ ಉದಯಗಿರಿಗೆ ಹೊರೆಕಾಣಿಕೆ ಸಾಗಿದೆ. ಪ್ರತಿ ಗ್ರಾಮದ ಜನರು ಹೊರೆಕಾಣಿಕೆಯಲ್ಲಿ, ನಾಗಮಂಡದ ಹಿಂಗಾರ ಸೇವೆಗೆ ಹಿಂಗಾರವನ್ನ ನೀಡಿದ್ದಾರೆ. ಈ ಸಂರ‍್ಭದಲ್ಲಿ ಅನೇಕ ಗಣ್ಯರು ಬಾಗಿಯಾಗಿದ್ರು.