Thursday, January 23, 2025
ದಕ್ಷಿಣ ಕನ್ನಡಸಿನಿಮಾಸುದ್ದಿ

ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ತುಳು ಸಿನಿಮಾ ನಟ ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ – ಕಹಳೆ ನ್ಯೂಸ್

ತುಳು ಸಿನಿಮಾರಂಗದ ರಾಕ್‌ಸ್ಟಾರ್ ನಟ ನಿರ್ದೇಶಕ ರೂಪೇಶ್ ಶೆಟ್ಟಿ ಮತ್ತೆ ಸುದ್ದಿಯಲ್ಲಿದ್ದಾರೆ. ತುಳು, ಕನ್ನಡ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡಿ ಸುದ್ದಿಯಾಗಿದ್ದ ಇವರು ಇದೀಗ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಮೂಲಕ ಮತ್ತಷ್ಟು ಅಭಿಮಾನಿಗಳಿಗೆ ನಟನೆ ಮೂಲಕ ಮನರಂಜನೆ ನೀಡಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚೇತನ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ತೆಲುಗು ಚಲನಚಿತ್ರದಲ್ಲಿ ನಟನೆ ಮಾಡಲಿದ್ದು, ಈ ಮೂಲಕ ತೆಲುಗು ಚಿತ್ರರಂಗದತ್ತ ಮುಖ ಮಾಡಿದ್ದಾರೆ ರೂಪೇಶ್ ಶೆಟ್ಟಿ. ಆಂಟನಿ ಎಂ ನಿರ್ದೇಶನದ ಈ ಚಿತ್ರಕ್ಕೆ ಚೇತನ್ ಮೈಸೂರ್ಯ ಕಥೆ ಬರೆದಿದ್ದು, ಇವರೇ ಚಿತ್ರವನ್ನ ನಿರ್ಮಾಣಮಾಡಲಿದ್ದಾರೆ. ಇನ್ನು ರೂಪೇಶ್ ಶೆಟ್ಟಿ ತೆಲುಗು ಚಿತ್ರದಲ್ಲಿ ನಟನೆ ಮಾಡುತ್ತಿರುವ ಚಿತ್ರಕ್ಕೆ ಇನ್ನೂ ಹೆಸರು ಫಿಕ್ಸ್ ಆಗಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

‘ಅಶೆಂ ಜಲೆಂ ಕಶೆಂ’. ಕೊಂಕಣಿ ತುಳು ಸಿನೇಮಾದಲ್ಲಿ ಮೊದಲ ಬಾಡಿಗೆ ನಟಿಸಿದ ರೂಪೇಶ್ ಬಳಿಕ ಕನ್ನಡದ ‘ನಿಶಬ್ಧ 2’ ಸಿನೇಮಾದಲ್ಲಿ ನಟನೆ ಮಾಡಿದ್ರು. ಬಳಿಕ ಇವರಿಗೆ ಅವಕಾಶಗಳು ಒಂದರ ಹಿಂದೊAದರAತೆ ಬಾಚಿ ಬಿಗಿದಪ್ಪಿತ್ತು. ಹೀಗೆ ಮುಂದುವರಿದ ರೂಪೇಶ್ ಶೆಟ್ಟಿ, ತುಳು ‘ಗಿರಿಗಿಟ್’ ಸಿನೆಮಾದಲ್ಲಿ ನಟನೆ ಮಾಡಿ ಜೊತೆ ಜೊತೆಗೆ ನಿರ್ದೇಶನವನ್ನು ಮಾಡಿ ಸೈ ಎನಿಸಿಕೊಂಡು, ಕರಾವಳಿ ಮಾತ್ರ ಅಲ್ಲದೆ ದೇಶ-ವಿದೇಶದಲ್ಲಿ ತಮ್ಮ ಗಿರಿಗಿಟ್ ತಿರುಗಿಸಿದ್ರು. ಈ ಮೂಲಕ ಮತ್ತೆ ಬಹು ಬೇಡಿಕೆ ನಟನಾಗಿ ಹೊರಹೊಮ್ಮಿ ಎಲ್ಲರಿಂದ ಶಹಬ್ಬಾಶ್‌ಗಿರಿ ಪಡೆದುಕೊಂಡರು. ಈ ಮಧ್ಯೆ ಕನ್ನಡದಲ್ಲಿ ‘ಗೋವಿಂದಾ ಗೋವಿಂದಾ’ ಸಿನೇಮಾದಲ್ಲಿ ಭಾವನಾ ಮೆನನ್ ಜೊತೆಗೆ ನಟನೆ ಮಾಡಿದ್ರು., ಕನ್ನಡ ಪ್ರೇಕ್ಷಕರು ರೂಪೇಶ್ ಶೆಟ್ಟಿ ನಟನೆಯನ್ನ ಮೆಚ್ಚಿ ಕೊಂಡಾಡಿದ್ರು.

ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಸತತ ಪ್ರಯತ್ನದ ಮೂಲಕ ಇದೇ ತಂಡದ ಜೊತೆ ‘ಗಮ್ಜಾಲ್’ ಚಿತ್ರ ತೆರೆ ಕಾಣುವಂತೆ ಮಾಡಿ, ಗಮ್ಜಾಲ್ ಚಿತ್ರದಲ್ಲಿ ನಿರ್ದೇಶಕನಾಗಿ ನಟನಾಗಿ ಕಾಣಿಸಿಕೊಂಡು ಮತ್ತಷ್ಟು ಚಿತ್ರಪ್ರಿಯರ ಮನಗೆದ್ದವರು ಇದೆ ರೂಪೇಶ್..

ಹೊಸತನದೊಂದಿಗೆ ಹೊಸಬರಿಗೆ ಅವಕಾಶಗಳನ್ನ ನೀಡಿ ಒಂದೊಳ್ಳ ಜನ ಮೆಚ್ಚುವ ಸಿನೇಮಾ ನೀಡುವ ರೂಪೇಶ್ ಇದೀಗ ‘ಸರ್ಕಸ್’ ಸಿನಿಮಾ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದು, ಈಗಾಗಲೇ ಚಿತ್ರದ ಚಿತ್ರೀಕರಣ ಪೂರೈಸಿದ್ದು ಮುಂದಿನ ಕಾರ್ಯಗಳು ನಡೆಯುತ್ತಿದೆ.

ತುಳು ಸಿನೆಮದಲ್ಲಿ ನಟನೆ ಮಾಡಿ ಕರಾವಳಿ ಜನರ ಮನದಲ್ಲಿ ರಂಗು ಮೂಡಿಸಿದ ರೂಪೇಶ್ ಕನ್ನಡ ಸಿನೆಮಾಕ್ಕೆ ಎಂಟ್ರಿಕೊಟ್ಟು ಬಹುಬೇಡಿಕೆಯ ನಟನಾಗಿ ಬೆಳೆದ್ರು, ಇದೀಗ ತೆಲುಗು ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿರುವ ರೂಪೇಶ್ ಇನ್ನಷ್ಟು ಸಿನೆಮಾಗಳಲ್ಲಿ ನಟನೆ ಮಾಡಿ ಮತ್ತಷ್ಟು ಮಗದಷ್ಟು ಅಭಿಮಾನಗಳ ಮನಗೆಲ್ಲುವಂತಾಗಿ….