Recent Posts

Sunday, January 19, 2025
ಸುದ್ದಿ

ಪ್ರಗತಿ ಸ್ಡಡಿ ಸೆಂಟರ್‍ನಲ್ಲಿ 11ನೇ ವರ್ಷದ ಜವಾಹರ್ ನವೋದಯ ತರಗತಿ ; ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಶತಕದ ಗಡಿಯಂಚಲ್ಲಿರುವ ಹೆಮ್ಮೆ- ಪಿ.ವಿ. ಗೋಕುಲ್‍ನಾಥ್

ಪುತ್ತೂರಿನ : ಧರ್ಮಸ್ಥಳ ಬಿಲ್ಡಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಎಜ್ಯುಕೇಶನಲ್ ಫೌಂಡೇಶನ್(ರಿ.) ಪುತ್ತೂರು ಇದರ ಅಧೀನಕ್ಕೆ ಒಳಪಟ್ಟಿರುವ ಪ್ರಗತಿ ಸ್ಡಡಿ ಸೆಂಟರ್‍ನಲ್ಲಿ 2019ನೇ ಸಾಲಿನ 11ನೇ ವರ್ಷದ ಜವಾಹರ್ ನವೋದಯ ತರಬೇತಿ ತರಗತಿಯು ಜುಲೈ 1 ರಿಂದ ಪ್ರಾರಂಭಗೊಳ್ಳಲಿದೆ. ವಾರಾಂತ್ಯದಲ್ಲಿ ಮತ್ತು ದಸರಾ ರಜಾ ದಿನಗಳಲ್ಲಿ ತರಗತಿಗಳು ನಡೆಯಲಿದ್ದು ದಾಖಲಾತಿ ಆರಂಭಗೊಂಡಿದೆ. ಪ್ರಸ್ತುತ 4ರಿಂದ 5ನೇ ತರಗತಿಗೆ ತೇರ್ಗಡೆ ಹೊಂದಲಿರುವ ವಿದ್ಯಾರ್ಥಿಗಳು ಕೂಡಲೇ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕಾಗಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಕೆ. ಹೇಮಲತಾ ಗೋಕುಲ್‍ನಾಥ್‍ರವರು ತಿಳಿಸಿರುತ್ತಾರೆ.

ಸಂಸ್ಥೆಯಲ್ಲಿ 2008 ಅಕ್ಟೋಬರ್ ತಿಂಗಳಿನಲ್ಲಿ ನವೋದಯ ಪ್ರವೇಶ ಪರೀಕ್ಷೆಗಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಪ್ರಾರಂಭಿಸಲಾಯಿತು. 2008ರಲ್ಲಿ 12 ಸೀಟು, 2009ರಲ್ಲಿ 12 ಸೀಟು, 2010ರಲ್ಲಿ 10 ಸೀಟು, 2011ರಲ್ಲಿ 10 ಸೀಟು, 2012ರಲ್ಲಿ 12 ಸೀಟು, 2013ರಲ್ಲಿ 3 ಸೀಟು, 2014ರಲ್ಲಿ 14 ಸೀಟು, 2015ರಲ್ಲಿ 14 ಸೀಟು, 2016ರಲ್ಲಿ 13 ಸೀಟು ಹಾಗೂ 2017ರಲ್ಲಿ 3 ಸೀಟು ಹೀಗೆ 10 ವರ್ಷಗಳಲ್ಲಿ ಒಟ್ಟು 98 ವಿದ್ಯಾರ್ಥಿಗಳು ನವೋದಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ನಮ್ಮ ವಿದ್ಯಾಸಂಸ್ಥೆಯಲ್ಲಿ ಅನುಭವಸ್ಥ ಹಾಗೂ ನುರಿತ ಪ್ರತಿಭಾವಂತ ಉಪನ್ಯಾಸಕರಿಂದ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ವಿಶಾಲವಾದ ಪ್ರತ್ಯೇಕ ತರಗತಿಗಳನ್ನು ಹೊಂದಿದ ಅತ್ಯಾಧುನಿಕ ಸೌಕರ್ಯಗಳನ್ನೊಳಗೊಂಡ ಸುಸಜ್ಜಿತ ಕಟ್ಟಡವನ್ನು ಹೊಂದಿದೆ. ಕಲಿಕಾ ನ್ಯೂನತೆಗಳಿರುವ ವಿದ್ಯಾರ್ಥಿಗಳ ಬಗ್ಗೆ ವಿಶೇಷ ನಿಗಾವಹಿಸಿ, ಬೇರೆ-ಬೇರೆ ರೀತಿಯ ಕಲಿಕಾ ವಿಧಾನಗಳನ್ನು ಅನುಸರಿಸಿ ಭೋದಿಸಲಾಗುತ್ತದೆ. ಪ್ರಶಾಂತವಾದ ವಾತಾವರಣದೊಂದಿಗೆ ಶಿಸ್ತಿಗೆ ಪ್ರಥಮ ಆದ್ಯತೆಯನ್ನು ನೀಡಲಾಗುತ್ತಿದೆ. SಒS ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಯ ಮಾಹಿತಿಯನ್ನು ವಿದ್ಯಾರ್ಥಿಗಳ ಪೋಷಕರಿಗೆ ನೀಡುತ್ತಿದ್ದೇವೆ ಹಾಗೂ ನವೋದಯ ಪ್ರವೇಶ ಪರೀಕ್ಷೆಯ ಮಾದರಿಯ 5 ಪೂರ್ವ ಸಿದ್ಧತಾ ಪರೀಕ್ಷೆಗಳು ನಮ್ಮಲ್ಲಿ ನಡೆಯುತ್ತದೆ. ಈ ಪರೀಕ್ಷೆಗಳ ಅಂಕಗಳ ವಿವರಗಳನ್ನು ಹೆತ್ತವರಿಗೆ SಒS ಮೂಲಕ ಕಳುಹಿಸಿಕೊಡಲಾಗುತ್ತದೆ. ನಮ್ಮ ಸಂಸ್ಥೆಯು ಮಕ್ಕಳ ಭದ್ರತೆಗೆ ಪ್ರಾಮುಖ್ಯತೆ ನೀಡಿದ್ದು ಸಂಸ್ಥೆಯ ಪ್ರವೇಶದ್ವಾರದಿಂದ ಪ್ರಾರಂಭಿಸಿ, ಪ್ರತೀ ತರಗತಿಗಳಿಗೂ ಸಿ.ಸಿ. ಕ್ಯಾಮೆರಾ ಅಳವಡಿಸಲಾಗಿದೆ. ಹೇಗೆ ನದಿಯೊಂದರ ಹುಟ್ಟು ಚಿಕ್ಕದಾಗಿರುತ್ತದೆಯೋ ಅದೇ ರೀತಿ ಪುಟ್ಟದಾಗಿ ಪ್ರಾರಂಭಗೊಂಡು ಬೆಳೆಯುತ್ತಾ, ಚಿಕ್ಕದೊಂದು ಮೈಲಿಗಲ್ಲನ್ನು ಸಾಧಿಸಿ ಪ್ರಗತಿಯ ಪಥದಲ್ಲಿ ಸಾಗುತ್ತಿರುವ ಸಂಸ್ಥೆ ಇಂದು ದಶ ವರ್ಷವನ್ನು ಪೂರೈಸುತ್ತಿದೆ. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶ ವಿದ್ಯಾರ್ಥಿಗಳ ಜೀವನದ ಆಶಾಕಿರಣವಾಗಿರುವ ಪ್ರಗತಿ ಹಲವಾರು ರೀತಿಯಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆಗಳನ್ನು ಕೊಡುವಲ್ಲಿ ಅಣಿಯಾಗುತ್ತಿದೆ. ಹೊಸ ಬದುಕು, ಹೊಸ ಭರವಸೆಗೆ ನಾಂದಿಹಾಡುತ್ತಿದೆ. ದಶಕ ಸಂಭ್ರಮವನ್ನು ಪೂರೈಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ಹಲವು ಪ್ರಥಮಗಳಿಗೆ ಭಾಜನವಾಗಿದೆ. ಎಂದು ಪ್ರಕಟಣೆಯಲ್ಲಿ ಸಂಸ್ಥೆಯ ಸಂಚಾಲಕರಾದ ಪಿ.ವಿ. ಗೋಕುಲ್‍ನಾಥ್‍ರವರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು