ನಾಳೆ ರಿಲೀಸ್ ಆಗಲಿದೆ ಬಹು ನಿರೀಕ್ಷಿತ ಕೊರಗಜ್ಜನ ತುಳು ಆಲ್ಬಮ್ ಸಾಂಗ್ : ‘ಧರ್ಮೋದ ಮಣ್ಣ್ ಡ್ ಮೈಮೆಡ್ ಮೆರಪಿ ಸ್ವಾಮಿ ಎನ್ನಜ್ಜಾ’ : ತುಳುನಾಡ ಗಾನಗಂಧರ್ವ ಜಗದೀಶ್ ಆಚಾರ್ಯ ಕಂಠದಲ್ಲಿ ಕರಿಯಜ್ಜನ ಸುಮಧುರ ಹಾಡು – ತುಳುನಾಡನ್ನು ಭಕ್ತಿಯ ಕಡಲಲ್ಲಿ ತೇಲಿಸಲಿದೆ ಕೊರಗಜ್ಜನ ಸುಗಿಪು – ಕಹಳೆ ನ್ಯೂಸ್
ತುಳುನಾಡ ಗಾನ ಗಂಧರ್ವ ಸಂಗೀತ ಸೇವಾ ಪ್ರತಿಷ್ಠಾನ.ರಿ. ಅರ್ಪಿಸುವ, ಪಂಚವರ್ಣದ ಪುಂಚದ ಕೊರಗಜ್ಜ ಹಾಡಿನ ನಂತರ ಪ್ರಥಮ ಬಾರಿಗೆ ಅಜ್ಜನ ಎಲ್ಲಾ ಭಕ್ತರಿಗಾಗಿ ಮತ್ತೊಂದು ವಿಶೇಷ ಅಣ್ಣನ ಭಕ್ತಿಗೀತೆ ಮೇ 15ರಂದು ಬಿಡುಗಡೆಗೊಳ್ಳಲಿದೆ. ಧರ್ಮೋದ ಮಣ್ಡ್ ಮೈಮೆಡ್ ಮೆರಪಿ ಸ್ವಾಮಿ ಎನ್ನಜ್ಜಾ ತುಳು ಆಲ್ಬಮ್ ಸಾಂಗ್ ತೆರೆ ಕಾಣಲಿದೆ. ತುಳುನಾಡ ಗಾನಗಂಧರ್ವ ಬಿರುದಾಂಕಿತ ಜಗದೀಶ್ ಆಚಾರ್ಯ ಪುತ್ತೂರು ಇವರ ಸಾಹಿತ್ಯ, ಸಂಗೀತ, ನಿರ್ದೇಶನ ಮತ್ತು ಗಾಯನ ಈ ಹಾಡಿನಲ್ಲಿ ಇದ್ದು, ಸಹ ಗಾಯಕಿಯರಾಗಿ ಸಮನ್ವಿ ರೈ, ವೈಭವಿ ಅಚಾರ್ಯ, ಗಾಯತ್ರಿ ಅಚಾರ್ಯ, ಸಾಹಿತ್ಯ ಆಚಾರ್ಯ ಹಾಡಿದ್ದರೆ. ಇನ್ನು ಅರುಣ್ ರೈ ಪುತ್ತೂರು ಇವರ ಕೈಚಳಕದ ಮೂಲಕ ವಿಡಿಯೋ ಸುಂದರವಾಗಿ ಮೂಡಿ ಬಂದಿದೆ. ಇದರ ಸಂಕಲನವನ್ನ ಚರಣ್ ಆಚಾರ್ಯ ಪುತ್ತೂರು ಹಾಗೂ ಶಿಶಿರ್ ರೈ ಚಲ್ಯಕ್ಕೆ ಮಾಡಿದ್ದಾರೆ. ಸಂದೀಪ್ ಕುಮಾರ್ ಮತ್ತು ನಮಿತಾ ಶೇರಿಗಾರ್ ಇವರ ನಿರ್ಮಾಣದಲ್ಲಿ ಈ ತುಳು ಭಕ್ತಿ ಗೀತೆ ಮೂಡಿ ಬಂದಿದೆ.