Saturday, November 23, 2024
ಬೆಂಗಳೂರುಸುದ್ದಿ

ಮತ್ತೆ ಗಗನಕ್ಕೇರಿದ ಟೊಮೆಟೋ ಬೆಲೆ..! ಪ್ರತೀ ಕಿಲೋ ಗೆ 90 ರೂ ಏರಿಕೆ – ಕಹಳೆ ನ್ಯೂಸ್

ಬೆಂಗಳೂರು: ಅಡುಗೆ ಮನೆಯಲ್ಲಿನ ಅತ್ಯಗತ್ಯ ವಸ್ತುಗಳಲ್ಲೊಂದಾಗಿರುವ ಟೊಮೆಟೋ ದರ ಗಗನಕ್ಕೇರಿದ್ದು, ಪ್ರತೀ ಕಿಲೋ ಟೊಮೆಟೋ ಬೆಲೆ ರೂ.90ಕ್ಕೆ ಏರಿಕೆಯಾಗಿದೆ. ಹಾಪ್‍ಕಾಮ್ಸ್ ಮಳಿಗೆಗಳಲ್ಲಿ ಪ್ರತಿ ಕಿಲೋ ಟೊಮೆಟೋ ದರವು 75 ರೂ. ಆಗಿದ್ದರೂ, ಚಿಲ್ಲರೆ ವ್ಯಾಪಾರದಲ್ಲಿ, ನಾಟಿ ಮತ್ತು ಫಾರ್ಮ್ ಟೊಮೊಟೋ ಬೆಲೆ ಗಾತ್ರವನ್ನು ಅವಲಂಬಿಸಿ 80-90 ರೂ.ಗೆ ಏರಿಕೆ ಮಾಡಲಾಗಿದೆ.

ಬೆಲೆ ಏರಿಕೆಯಿಂದ ಆತಂಕಗೊಂಡಿರುವ ಚಿಲ್ಲರೆ ವ್ಯಾಪಾರಿಗಳು ನಮಗೂ ಹೆಚ್ಚಿನ ಬೆಲೆಗೆ ಟೊಮೆಟೋ ಸಿಗುತ್ತಿದ್ದು, ಖರೀದಿ ಕಷ್ಟಸಾಧ್ಯವಾಗುತ್ತಿದೆ. ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಬೆಲೆ ಏರಿಕೆ ಮತ್ತು ಬೇಡಿಕೆಯ ಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ ತಳ್ಳ್ಳುಗಾಡಿ ವ್ಯಾಪಾರಿಗಳು ಟೊಮೆಟೋ ಮಾರಾಟವನ್ನೇ ಸ್ಥಗಿತಗೊಳಿಸಿದ್ದಾರೆ. ಅತಿವೃಷ್ಟಿಯಿಂದ ಬೆಳೆಗಳು ಹಾನಿಗೊಳಗಾಗಿವೆ. ಹೀಗಾಗಿ ದರ ಏರಿಕೆಯಾಗಿದೆ ಎಂದು ರೈತರು ಹಾಗೂ ವಿತರಕರು ಹೇಳುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು