Recent Posts

Sunday, January 19, 2025
ಸುದ್ದಿ

ತುಳು ಚಲನಚಿತ್ರ ನಿರ್ಮಾಪಕ ಸಂಘ ಅಧ್ಯಕ್ಷರಾಗಿ ರಾಜೇಶ್ ಬ್ರಹ್ಮಾವರ್ – ಕಹಳೆ ನ್ಯೂಸ್

ಮಂಗಳೂರು: ತುಳು ಚಿಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿ ರಾಜೇಶ್ ಬ್ರಹ್ಮಾವರ್ ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಚುನಾವಣೆಯಲ್ಲಿ ಅವರು ಪ್ರತಿಸ್ಪರ್ಧಿ ಅಭ್ಯರ್ಥಿ ಧನ್‌ರಾಜ್ ಅವರನ್ನು ಸೋಲಿಸಿ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಶರತ್ ಕದ್ರಿ, ಚಂದ್ರಹಾಸ್ ಸುವರ್ಣ, ಸುದೇಶ್ ಭಂಡಾರಿ, ಕಾರ್ಯದರ್ಶಿಯಾಗಿ ಶರ್ಮಿಳಾ ಡಿ. ಕಾಪಿಕಾಡ್ ಆಯ್ಕೆಯಾದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜೊತೆ ಕಾರ್ಯದರ್ಶಿಯಾಗಿ ಸಚಿನ್ ಉಪ್ಪಿನಂಗಡಿ, ಶ್ರವಣ್ ಕದ್ರಿ ಮತ್ತು ಪ್ರಣವ್ ಹೆಗ್ಡೆ ಆಯ್ಕೆಯಾದರು. ಖಜಾಂಚಿಯಾಗಿ ಕಿಶೋರ್ ಕೊಟ್ಟಾರಿ ಅವಿರೋಧವಾಗಿ ಆಯ್ಕೆಯಾದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಜೋತಿ ಜೈನ್, ಮುಖೇಶ್ ಹೆಗ್ಡೆ, ಗಂಗಾಧರ್ ಶೆಟ್ಟಿ, ಸವಿತಾ ಚೌಟ, ರಂಜಿತ್ ಶೆಟ್ಟಿ, ಸಚಿಂದ್ರ ಶೆಟ್ಟಿ, ಸುಕೇಶ್ ಭಂಡಾರಿ, ಆಶಿಕಾ ಸುವರ್ಣ, ಗುರುದತ್ ಕಿಣಿ ಆಯ್ಕೆಯಾದರು.