Sunday, January 19, 2025
ಸಿನಿಮಾಸುದ್ದಿ

ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಟ್ರೈಲರ್ ರಿಲೀಸ್ : ಒಂದೇ ಗುಚ್ಚದಲ್ಲಿ ಪ್ರೀತಿ, ಕಂಬನಿ, ಭಾವನೆಗಳನ್ನ ಹೇಳ್ತಾನೆ ನಿಮ್ಮ ‘ಚಾರ್ಲಿ’ : ಬಹುಭಾಷಾ ನಟ-ನಟಿಯರಿಂದಲೂ ಚಾರ್ಲಿಗೆ ಸಕತ್ ರೆಸ್ಪಾನ್ಸ್ – ಕಹಳೆ ನ್ಯೂಸ್

ನಟ ರಕ್ಷಿತ್ ಶೆಟ್ಟಿ ಅಭಿನಯಿಸಿರುವ ಬಹುನೀರಿಕ್ಷಿತ ಸಿನಿಮಾ ‘777 ಚಾರ್ಲಿ’ ಸಿನೆಮಾ ರಿಲೀಸ್ ಆಗಲು ಸಜ್ಜಾಗಿದೆ. ಈಗಾಗಲೇ ಹಾಡು, ಹಾಗೂ ಪೋಸ್ಟರ್‌ಗಳಿಂದ ಜನರ ಗಮನ ಸೆಳೆದಿರುವ ಸಿನಿಮಾ, ಈಗ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿ ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲ ಹೆಚ್ಚಿಸುವಂತೆ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

‘777 ಚಾರ್ಲಿ’ ಟೈಟಲ್ ಮೂಲಕ ನೀರಿಕ್ಷೆಯನ್ನ ಹೆಚ್ಚಿಸಿದ್ದ ಸಿನೆಮಾದ ಟ್ರೈಲರ್ 5 ಭಾಷೆಗಳಲ್ಲಿ ರಿಲೀಸ್ ಆಗಿದೆ. ಏಕಕಾಲದಲ್ಲಿ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಿದೆ. ಇಂದು ಮಧ್ಯಾಹ್ನ ಐದು ಭಾಷೆಗಳಲ್ಲಿ ‘777 ಚಾರ್ಲಿ’ಯ ಟ್ರೈಲರ್ ರಿಲೀಸ್ ಆಗಿದ್ದು, ಕನ್ನಡ ಸೇರಿದಂತೆ ತೆಲುಗಿನಲ್ಲಿ ನಟಿ ಸಾಯಿ ಪಲ್ಲವಿ, ವೆಂಕಟೇಶ್, ಲಕ್ಷ್ಮೀ ಮಂಚು ರಿಲೀಸ್, ತಮಿಳಿನಲ್ಲಿ ಧನುಷ್, ಮಲಯಾಳಂನಲ್ಲಿ ನಿವಿನ್ ಪೌಲಿ, ಟೊವಿನೋ ಧಾಮಸ್ ಇತರರು ಬಿಡುಗಡೆ ಮಾಡಿದ್ದಾರೆ.

‘777 ಚಾರ್ಲಿ’ ಸಿನಿಮಾ ಮೇಲೆ ಪ್ರೇಕ್ಷಕರು ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಸಿನಿಮಾದಲ್ಲಿರುವ ಚಾರ್ಲಿ ಹಾಗೂ ಧರ್ಮ ಇಬ್ಬರ ನಡುವಿನ ಬಾಂಧವ್ಯ ಹೇಗೆ ಇರಲಿದೆ ಎಂಬ ನಿರೀಕ್ಷೆಗಳು ಈಗಾಗಲೇ ಟೀಸರ್, ಹಾಡುಗಳಲ್ಲಿ ತಿಳಿದಿದೆ. ಆದರೆ, ಟ್ರೈಲರ್‌ನಲ್ಲಿ ಮತ್ತಷ್ಟು ವಿಭಿನ್ನವಾಗಿ ಪಾತ್ರಗಳು ಕಾಣಿಸಲಿದ್ದು, ಸಿನಿಮಾ ಮೇಲಿನ ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಲಿದೆ.

ಕಿರಣ್ ರಾಜು ನಿರ್ದೇಶನ ಮಾಡಿರುವ ‘777 ಚಾರ್ಲಿ’ ಸಿನಿಮಾ ಜೂನ್ 10 ಕ್ಕೆ ಎಲ್ಲಾ ಥಿಯೇಟರ್‌ಗಳಲ್ಲಿ ಅಬ್ಬರಿಸಲು ಸಜ್ಜಾಗಿದೆ. ಕೆಜಿಎಫ್ 2 ಬಳಿಕ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಸದ್ಯ ಕೆಜಿಎಫ್-2 ಈಗಲೂ ಕೂಡ ಥಿಯೇಟರ್‌ಗಳಲ್ಲಿ ತನ್ನ ಆರ್ಭಟ ಮುಂದುವರೆಸಿದೆ. ಈಗ ‘777 ಚಾರ್ಲಿ’ ಸಿನಿಮಾ ಕೂಡ ವಿಶ್ವದಾದ್ಯಂತ ಅಬ್ಬರಿಸಲು ಸಜ್ಜಾಗಿದ್ದು, ಕೆಜಿಎಫ್ 2 ನಂತೆ ದಕ್ಷಿಣ ಭಾರತದ ಮತ್ತೊಂದು ಸಿನಿಮಾ ಸದ್ದ ಮಾಡಲು ತಯಾರಿ ಮಾಡಿಕೊಳ್ಳುತ್ತಿದೆ. ಪ್ರೇಕ್ಷಕರಿಗೆ ಸಿನಿಮಾ ಮೇಲಿನ ನೀರಿಕ್ಷೇ ಹೆಚ್ಚಾಗಿದ್ದು, ಚಾರ್ಲಿ ಹಾಗೂ ಧರ್ಮ ಪಾತ್ರಗಳನ್ನ ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.

ನಟ ‘ಸಿಂಪಲ್ ಸ್ಟಾರ್’ ರಕ್ಷಿತ್ ಶೆಟ್ಟಿ ಅವರು ಅಭಿನಯಿಸಿರುವ ‘777 ಚಾರ್ಲಿ’ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಆ ನಿರೀಕ್ಷೆಯನ್ನು ದುಪ್ಪಟ್ಟು ಮಾಡುವ ರೀತಿಯಲ್ಲಿ ಈಗ ಟ್ರೇಲರ್ ರಿಲೀಸ್ ಆಗಿದೆ. ಪರಭಾಷೆಯ ಹಲವು ಸ್ಟಾರ್ ನಟ-ನಟಿಯರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ‘777 ಚಾರ್ಲಿ’ ಸಿನಿಮಾದ ಟ್ರೇಲರ್ ಶೇರ್ ಮಾಡಿಕೊಳ್ಳುವ ಮೂಲಕ ರಕ್ಷಿತ್ ಶೆಟ್ಟಿ ಮತ್ತು ಅವರ ತಂಡಕ್ಕೆ ಬೆಂಬಲ ನೀಡಿದ್ದಾರೆ. ಈ ಚಿತ್ರಕ್ಕೆ ಕಿರಣ್ ರಾಜ್ ನಿರ್ದೇಶನ ಮಾಡಿದ್ದು, ಟ್ರೇಲರ್ ಗಮನ ಸೆಳೆಯುತ್ತಿದೆ. ಶ್ವಾನ ಮತ್ತು ಮನುಷ್ಯನ ನಡುವಿನ ಬಾಂಧವ್ಯದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ ಎಂಬುದು ಈಗಾಗಲೇ ತಿಳಿದಿರುವ ವಿಚಾರ. ಆದರೆ ಈ ಕಥೆ ಸಖತ್ ಎಮೋಷನಲ್ ಆಗಿರಲಿದೆ ಎಂಬುದಕ್ಕೆ ಟ್ರೇಲರ್‌ನಲ್ಲಿ ಸುಳಿವು ಸಿಕ್ಕಿದೆ. ರಕ್ಷಿತ್ ಶೆಟ್ಟಿ ಜೊತೆ ಸಂಗೀತಾ ಶೃಂಗೇರಿ, ರಾಜ್ ಬಿ. ಶೆಟ್ಟಿ, ದಾನಿಶ್ ಸೇಠ್ ಮುಂತಾದವರು ‘777 ಚಾರ್ಲಿ’ ಚಿತ್ರದಲ್ಲಿ ನಟಿಸಿದ್ದಾರೆ.

ನಾಯಿ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದೆ. ಆ ಶ್ವಾನದ ಮೂಡ್‌ಗೆ ತಕ್ಕಂತೆ ಚಿತ್ರೀಕರಣವನ್ನು ಮಾಡಬೇಕಿತ್ತು. ಆದ್ದರಿಂದ ಈ ಚಿತ್ರದ ಶೂಟಿಂಗ್‌ಗೆ ಹೆಚ್ಚು ಸಮಯ ಹಿಡಿದಿದೆ. ಅದರ ನಡುವೆ ಕೊರೊನಾ ಲಾಕ್‌ಡೌನ್ ಕೂಡ ಬಂದಿದ್ದರಿAದ ಇನ್ನಷ್ಟ ತಡವಾಗಿತ್ತು. ಈಗ ಅಂತೂ ಈ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ಜೂನ್ 10ರಂದು ‘777 ಚಾರ್ಲಿ’ ಬಿಡುಗಡೆ ಆಗಲಿದೆ.