Recent Posts

Monday, April 14, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕಲ್ಲಡ್ಕದಲ್ಲಿ ಹೆದ್ದಾರಿ ಕಾಮಗಾರಿ ಆವಾಂತರ: ದಿನವಿಡೀ ಸುರಿದ ಮಳೆಗೆ ರಸ್ತೆ ಅಯೋಮಯ- ಕಹಳೆ ನ್ಯೂಸ್

ಬಂಟ್ವಾಳ: ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿದ ಮಳೆಯ ಪರಿಣಾಮ ಬಿ.ಸಿ.ರೋಡು-ಅಡ್ಡಹೊಳೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಅಗೆದಿರುವ ಹೆದ್ದಾರಿಯುದ್ದಕ್ಕೂ ನೀರು ನಿಂತಿರುವ ಜತೆಗೆ ಕೆಲವೆಡೆ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗುವ ಆತಂಕ ಸೃಷ್ಟಿಯಾಗಿದೆ.

ದ್ವಿಪಥ ಹೆದ್ದಾರಿಯನ್ನು ಚತುಷ್ಪಥಗೊಳಿಸುವ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನಿಂದಲೇ ಹೆದ್ದಾರಿ ಬದಿಯ ಗುಡ್ಡಗಳನ್ನು ಅಗೆದು ಮಣ್ಣು ತೆಗೆಯಲಾಗಿದ್ದು, ತಗ್ಗು ಪ್ರದೇಶಗಳಿಗೆ ಮಣ್ಣು ತುಂಬಿ ಎತ್ತರ ಮಾಡಲಾಗಿದೆ. ಇನ್ನು ಕೆಲವೆಡೆ ಭೂಸ್ವಾಽÃನ ಪಡಿಸಿ ಕಟ್ಟಡಗಳನ್ನು ತೆರವು ಮಾಡಲಾಗಿದೆ. ಈ ಕಾರಣಕ್ಕೆ ಹೆಚ್ಚಿನ ಭಾಗಗಳಲ್ಲಿ ಪರ್ಯಾಯ ರಸ್ತೆಗಳನ್ನು ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೀಗಾಗಿ ಬಹುತೇಕ ಭಾಗಗಳಲ್ಲಿ ಅಗೆದು ಹಿಂದೆ ಇದ್ದ ಚರಂಡಿ, ತೋಡುಗಳು ಮುಚ್ಚಿ ಹೋಗಿವೆ. ಹೀಗಾಗಿ ನೀರು ಸಾಗಲು ಸರಿಯಾದ ವ್ಯವಸ್ಥೆಗಳಲ್ಲದೆ ಹೆದ್ದಾರಿಯಲ್ಲೇ ನೀರು ತುಂಬಿರುವುದರಿAದ ವಾಹನ ಚಾಲಕರು/ ಸವಾರರಿಗೆ ಗೊಂದಲದ ಸ್ಥಿತಿ ನಿರ್ಮಾಣವಾಗಿದೆ. ನೀರು ತುಂಬಿರುವ ಪರಿಣಾಮ ಹೊಂಡ ಇದೆಯೇ ಎಂಬ ಆತಂಕವೂ ವಾಹನದವರನ್ನು ಕಾಡುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಲವು ಭಾಗಗಳಲ್ಲಿ ಮಣ್ಣು ತುಂಬಿಸಿ ತಾತ್ಕಾಲಿಕ ಪರ್ಯಾಯ ರಸ್ತೆಗಳನ್ನು ಮಾಡಿರುವ ಪರಿಣಾಮ ಕೆಸರಿನಿಂದ ವಾಹನಗಳು ಹೂತು ಹೋಗುವ ಭಯವೂ ಉಂಟಾಗಿದೆ. ಕಲ್ಲಡ್ಕ ಭಾಗದಲ್ಲಿ ಫ್ಲೈ- ಓವರ್ ನಿರ್ಮಾಣದ ದೃಷ್ಟಿಯಿಂದ ಕೊಂಚ ಹೆಚ್ಚೇ ಅಗೆಯಲಾಗಿದ್ದು, ಹೀಗಾಗಿ ಅಲ್ಲಿನ ಸ್ಥಿತಿ ಅಯೋಮಯವಾಗಿದೆ.

ಕಲ್ಲಡ್ಕ ಪೇಟೆಯಲ್ಲೇ ನೀರು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುವ ಭೀತಿ ಎದುರಾಗಿದ್ದು, ಹೀಗೆ ಮುಂದುವರಿದರೆ ಇನ್ನಷ್ಟು ಅಪಾಯ ಉಂಟಾಗಬಹುದು ಎಂದು ಜನರು ಭಯಭೀತರಾಗಿದ್ದಾರೆ. ನೀರಿನ ಜತೆಗೆ ಮಣ್ಣು ಕೂಡ ಮನೆಯ ಅಂಗಳ, ಕೃಷಿ ಭೂಮಿಗಳಿಗೂ ನುಗ್ಗುತ್ತಿವೆ.

ಮೆಲ್ಕಾರ್, ಪಾಣೆಮಂಗಳೂರು ಭಾಗದಲ್ಲಿ ಅಂಡರ್‌ಪಾಸ್ ನಿರ್ಮಾಣದ ದೃಷ್ಟಿಯಿಂದ ಅಗೆಯಲಾಗಿದ್ದು, ಅಲ್ಲೂ ಕೂಡ ನೀರು ತುಂಬುವ ಆತಂಕ ಉಂಟಾಗಿದೆ. ಏಕಾಏಕಿ ನಿರೀಕ್ಷೆಗೂ ಮೀರಿ ನಿರಂತರವಾಗಿ ಮಳೆಯಾಗುತ್ತಿರುವ ಕಾರಣದಿಂದ ಇಂತಹ ಸ್ಥಿತಿ ನಿರ್ಮಾಣವಾಗಿದ್ದು, ಗುತ್ತಿಗೆ ಸಂಸ್ಥೆಗೂ ಕಾಮಗಾರಿ ಮುಂದುವರಿಸಲು ತೊಡಕಾಗಿತ್ತು.

 

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ