Tuesday, March 11, 2025
ಸುದ್ದಿ

ಜುಲೈ 6,7ರಂದು ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳ – ಕಹಳೆ ನ್ಯೂಸ್

ಮೂಡುಬಿದಿರೆ: ಸಾಮಾಜಿಕ, ಶೈಕ್ಷಣಿಕ, ಕ್ರೀಡಾ ಹಾಗೂ ಸಾಂಸ್ಕøತಿಕ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ದಶಕದ ಸಂಭ್ರಮದೊಂದಿಗೆ “ಆಳ್ವಾಸ್ ಪ್ರಗತಿ- ಬೃಹತ್ ಉದ್ಯೋಗ ಮೇಳ”ಕ್ಕೆ ಸಜ್ಜಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಜುಲೈ06 ಕ್ಕೆ ಮೊದಲ ಸುತ್ತಿನ ಹಾಗೂ ಜುಲೈ 07 ಕ್ಕೇ ಕೊನೆಯ ಸುತ್ತಿನ ಆಯ್ಕೆ ಪ್ರಕ್ರಿಯೆಗಳು ಮೂಡಬಿದಿರೆಯ ವಿದ್ಯಾಗಿರಿಯ ಕ್ಯಾಂಪಸ್ನಲ್ಲಿ ನಡೆಯಲಿದೆ. ಸತತ 09 ವರ್ಷಗಳಿಂದ “ಆಳ್ವಾಸ್ ಪ್ರಗತಿ” ಯಶಸ್ವಿಯಾಗಿ ನಡೆಸುತ್ತಿದ್ದು ಕೇವಲ ನಗರದಲ್ಲದೆ, ಗ್ರಾಮೀಣ ಸ್ಥರದ ಉದ್ಯೋಗಾಸಕ್ತರನ್ನೂ ತಲುಪಿ ಸೈ ಎನಿಸಿಕೊಂಡಿದೆ. ಆಳ್ವಾಸ್ ಪ್ರಗತಿ-2018ರ ಹತ್ತರ ಆವೃತ್ತಿಯಲ್ಲಿ ಐಟಿ, ಐಟಿಎಸ್, ಮ್ಯಾನುಪ್ಯಾಕ್ಚರಿಂಗ್, ಹೆಲ್ತ್ಕೇರ್ ಮತ್ತು ಫಾರ್ಮಾ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಆಟೋಮೂಬೈಲ್, ಬ್ಯಾಕಿಂಗ್ ಮತ್ತು ಹಣಕಾಸು, ಹಾಸ್ಪಿಟ್ಯಾಲಿಟಿ, ಶಿಕ್ಷಣ ಮತ್ತು ಎನ್ ಜಿಓ ಗಳನ್ನು ಪ್ರತಿನಿಧಿಸುವ ಉನ್ನತ ನೇಮಕಾತಿ ಕಂಪೆನಿಗಳು ಪಾಲ್ಗೊಳ್ಳುತ್ತಿವೆ. ಈ ಕಂಪೆನಿಗಳು ಪದವಿ ಮತ್ತು ಪದವೀಧರರು, ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್, ಇಂಜಿನಿಯರಿಂಗ್, ಆಟ್ರ್ಸ, ಕಾಮಾರ್ಸ ಹಾಗೂ ಮ್ಯಾನೇಜ್ಮೆಂಟ್, ಬೇಸಿಕ್ ಸೈನ್ಸ್, ನರ್ಸಿಂಗ್, ಐಟಿಐ, ಡಿಪ್ಲೊಮಾ, ಪಿಯುಸಿ ಮತ್ತು ಎಸ್‍ಎಸ್‍ಎಲ್‍ಎಸ್ಸಿಯಲ್ಲಿ ಮತ್ತು ಇತರ ವಿದ್ಯಾರ್ಹತೆಗಳುಳ್ಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಿವೆ. ನುರಿತ ತರಬೇತಿ ಸಂಸ್ಥೆಗಳು ಇಲ್ಲಿ ಬಾಗವಹಿಸಲಿವೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ದೇಶದ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ಭಾರತದ್ಯಾಂತ ಉದ್ಯೋಗಾವಕಾಶ ಕಲ್ಪಿಸುವುದು ಮೂಲೋದ್ದೇಶ ವಾಗಿದ್ದು, ಆಳ್ವಾಸ್ ಪ್ರಗತಿಯಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ ,ವೈದ್ಯಕೀಯ, ಪ್ಯಾರಾ ಮೆಡಿಕಲ್, ಇಂಜಿನಿಯರಿಂಗ್, ವಾಣಿಜ್ಯ ಮತ್ತು ನಿರ್ವಹಣೆ, ಬೇಸಿಕ್ ಸೈನ್ಸ್, ನರ್ಸಿಂಗ್, ಐಟಿಐ ಮತ್ತು ಡಿಪ್ಲೋಮ ಹಾಗೂ ಸ್ನಾತಕೋತ್ತರ ಪದವೀಧರ ಉದ್ಯೋಗಾಕಾಂಕ್ಷಿಗಳು ಭಾಗವಹಿಸಲು ಅರ್ಹರಾಗಿರುತ್ತಾರೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆಳ್ವಾಸ್ ಪ್ರಗತಿ 2018ರ ವಿಶೇಷತೆಗಳು:

•ನೋಂದಾವಣೆ ಪ್ರಕ್ರಿಯಿಯು ಎಲ್ಲಾ ಅಭ್ಯರ್ಥಿಗಳಿಗೆ ಮುಕ್ತವಾಗಿದ್ದು ಜುಲೈ 06 ರವರೆಗೆ ಮಾತ್ರ ಲಭ್ಯವಿರುತ್ತದೆ.

•ಉತ್ಪಾದನವಲಯದ ಪ್ರಮುಖ ಕಂಪೆನಿಗಳಾದ ಕೀರ್ಲೋಸ್ಕರ್ ಟೊಯೊಟೋ ಟೆಕ್ಸಟೈಲ್ ಮೆಷಿನರಿ ಪ್ರೈಲಿ., ಟೊಯೊಟೋ ಇಂಡಸ್ಟ್ರೀಸ್ ಇಂಜಿನ್ ಇಂಡಿಯಾ, ಅಜೇಕ್ಸ್ ಫೀಯೋರಿ, ತೋಷಿಬಾ, ಮಿಟ್ಸುಬಿಷಿ-ಇಲೆಕ್ಟ್ರಿಕ್ ಇಂಡಸ್ಟ್ರೀಯಲ್ ಸಿಸ್ಟ್‍ಮ್ಸ್ ಕಾಪೋರೇಷನ್, ಅಲ್ ಕಾರ್ಗೋ ಲೋಜಿಸ್ಟಿಕ್ಸ್, ಇಂಡೋ ಯುಸ್ ಎಂಐಎಂ ಟೆಕ್, ಕೆನೀಸ್ ಟೆಕ್ನೋಜೀಸ್‍ಗಳಲ್ಲಿ ಬಿಇ ಮೆಕ್ಯಾನಿಕಲ್, ಡಿಪ್ಲೋಮಾ ಹಾಗೂ ಐಟಿಐ ಪದವೀಧರರಿಗೆ ಈ ವರ್ಷ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಿವೆ.

•ಎಲ್ ಎಂ ವಿಂಡ್ ಪವರ್ ಹಾಗೂ ಭಾರತ್ ಫ್ರಿಟ್ಸ್ ವರ್ನರ್ ಕಂಪೆನಿಗಳು ಬಿಇ ಮೆಕ್ಯಾನಿಕಲ್, ಡಿಪ್ಲೋಮಾ ಮೆಕ್ಯಾನಿಕಲ್/ ಇಲೆಕ್ಟ್ರಿಕಲ್ ಆದ ಮಹಿಳಾ ಪದವೀದರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾವಕಾಶವನ್ನು ನೀಡಲಿದೆ.

• ಗಲ್ಫ್‍ನ ಮಲ್ಟಿನ್ಯಾಷ್‍ನಲ್ ಕಂಪೆನಿಗಳಾದ ಎನ್‍ಎಂಸಿ ಹೆಲ್ತ್‍ಕೇರ್, ಯುಎಈ ಎಕ್ಸಚೇಂಜ್, ಫಾರ್ಚೂನ್ ಗ್ರೂಪ್ ಆಫ್ ಹೊಟೇಲ್ಸ್ ಮುಂತಾದ ದಿಗ್ಗಜ ಕಂಪೆನಿಗಳು ಪಾಲ್ಗೊಳ್ಳುವ ಭರವಸೆಯನ್ನು ನೀಡಿವೆ.

• ಪ್ರತಿಷ್ಠಿತ ಬ್ಯಾಂಕ್‍ಗಳಾದ ಹೆಚ್‍ಡಿಎಫ್‍ಸಿ, ಐಸಿಐಸಿಐ ಹಾಗೂ ಆ್ಯಕ್ಸಿಸ್ ಬ್ಯಾಂಕ್‍ಗಳು ಪದವೀಧರ ಹಾಗೂ ಸ್ನಾತಕೋತ್ತರ ಪದವಿಯ ಆಕಾಂಕ್ಷಿಗಳಿಗೆ ಉದ್ಯೋಗವನ್ನು ನೀಡುವ ವೇದಿಕೆಯನ್ನು ಕಲ್ಪಿಸಲಿವೆ.

• ಪ್ರತಿಷ್ಟಿತ ಕಂಪೆನಿಗಳಾದ ಒರೇಕಲ್, ಕೆಫೆ ಕಾಫಿ ಡೇ, ನಿಂಜಾ ಕಾರ್ಟ್, ಇನೋವಾ ಡಿಸೇಲ್ ಜನೆರೇಟರ್ಸ್ ಪ್ರೈ ಲಿ., ಮನಿರಂಜನ್ ಡಿಸೇಲ್ ಸೇಲ್ಸ್ & ಸರ್ವಿಸ್ ಲಿಮಿಟೆಡ್, ರೆಮಂಡ್ಸ್, ಸಿಲ್ವರ್ ಸ್ಪಾರ್ಕ್ ಅಫೇರಲ್ ಲಿಮಿಟೆಡ್ ಕಂಪೆನಿಗಳು ಎಂಬಿಎ ಪದವೀದರರನ್ನು ಆಯ್ಕೆ ಮಾಡಲಿದೆ

• ಒರೇಕಲ್ ತನ್ನ ಕಂಪೆನಿ ಕಾರ್ಯನಿರ್ವಹಿಸುವ ವಿವಿಧ ಪ್ರದೇಶಗಳಾದ ಮುಂಬೈ, ಬೆಂಗಳೂರುಗಳಲ್ಲಿ ಎಂಬಿಎ, ಬಿಕಾಮ್, ಬಿಬಿಎಮ್, ಬಿಎಸ್ಸಿ ಪದವೀದರರನ್ನು ನಿರೀಕ್ಷಿಸುತ್ತಿದೆ.

• ಆರೋಗ್ಯ ಕ್ಷೇತ್ರದ ಪ್ರತಿಷ್ಟಿತ ಆಸ್ಪತ್ರೆಗಳಾದ ಓಕ್‍ಹಾರ್ಟ, ಅಪೋಲೋ ಹೆಲ್ತ್ ಕೇರ್, ಕೋಲಂಬಿಯಾ ಏಷ್ಯಾ ಆಸ್ಪತ್ರೆಗಳು ನರ್ಸಿಂಗ್, ಬಿಪಿಟಿ, ಎಂಎಲ್‍ಟಿ ಅಭ್ಯರ್ಥಿಗಳನ್ನು ನಿರೀಕ್ಷಿಸುತ್ತಿದೆ.

• ಕೇನ್ಸ್ ಟೆಕ್ನಾಲಜಿ, ಆಟೋಲೀವ್, ಟಿವಿಎಸ್ ಮೋಟರ್ ಸೈಕಲ್, ಈಕ್ವಲೈಜ್, ಆರ್‍ಸಿಎಂ ಸೇವೆಗಳು, ಎಸ್ 3ವಿ, ವಾಸ್ಕುಲರ್ ಟೆಕ್ನಾಲಜೀಸ್ ಪ್ರೈವೇಟ್(ಲಿ), ಐಟಿಸಿ (ಲಿ), ಸೇರಿದಂತೆಮೈಸೂರು ಪ್ರದೇಶದ 20 ಕಂಪೆನಿಗಳು ಪಾಲ್ಗೊಳ್ಳುವವು.

• ಅಜೀಂ ಪ್ರೇಂಜೀ ಫೌಂಡೇಶನ್, ಗೋವಾ ಇನ್‍ಸ್ಟಿಟ್ಯೂಟ್ , ದೇಶಪಾಂಡೆ ಫೌಂಡೇಶನ್ ಮುಂತಾದ ಕಂಪೆನಿಗಳು ಬಿ,ಎಡ್ ಪ್ರೊಫೈಲ್‍ನೊಂದಿಗಿನ ಅಭ್ಯರ್ಥಿಗಳನ್ನು ಆಹ್ವಾನಿಸಿವೆ.

• ಕಿಂ/ಕಿಅ ನಲ್ಲಿ ಪಾಶ್ರ್ವ ನೇಮಕಾತಿಗೆ ಬಿಇ (ಮೆಕ್), ಎಂಬಿಎ ಆಕಾಂಕ್ಷಿ ಪ್ರೊಫೈಲ್‍ಗಳಿಗೆ ಅವಕಾಶಗಳಿವೆ.

ಭಾಗವಹಿಸುವ ವಿದ್ಯಾರ್ಥಿಗಳಿಗೆ ಅನುಕೂಲಗಳು

• ಆನ್‍ಲೈನ್ ದಾಖಲಾತಿಯ ಮೂಲಕ ಸಂಗ್ರಹಿಸಿಲಾದ ಮಾಹಿತಿಗಳನ್ನು ಇನ್ನಿತರ ಕಂಪೆನಿಗಳಿಗೆ ವಿಸ್ತರಿಸಿ ವರ್ಷವಿಡೀ ಪೂರೈಸಲಾಗುತ್ತದೆ

• ಉದ್ಯೋಗ ಮೇಳಗಳಲ್ಲಿ ಆಳ್ವಾಸ್ ಪ್ರಗತಿ ದೊಡ್ಡ ಬ್ರ್ಯಾಂಡ್ ಆಗಿ ಮಾರ್ಪಟ್ಟಿದೆ. ಇದೀಗ ಪ್ರೀಮಿಯಂ ಕಂಪೆನಿಗಳನ್ನು ಆಕರ್ಷಿಸುತ್ತಿದೆ

ಭಾಗವಹಿಸುವ ಕಂಪೆನಿಗಳಿಗಿರುವ ಅನುಕೂಲಗಳು

• ನಿಮ್ಮ ಅವಶ್ಯಕತೆಗಳ ಉದ್ಯೋಗಿಗಳನ್ನು ಅರಸಬಹುದು

• ಬ್ರ್ಯಾಂಡ್ ಇಮೇಜ್ ನಿರ್ಮಿಸಬಹುದು

• ನೇಮಕಾತಿ ಪ್ರಕ್ರಿಯೆಯನ್ನು ಒಂದೇ ಸ್ಥಳದಲ್ಲಿ ನಡೆಸುವ ಸೌಲಭ್ಯ( 1000 ಚದರ ಅಡಿ, 800 ಕೊಠಡಿಗಳು)

• ಬಣ್ಣದ ಕಾರ್ಡಆಧಾರದ ಮೇಲೆ ಸಮಯ ವಂಚನೆಯಿಂದ ಮುಕ್ತಿ

• ವಸತಿ ಮತ್ತು ಸತ್ಕಾರದ ಸೌಕರ್ಯ

• ಆಯ್ಕೆಯಾದ ಅಭ್ಯರ್ಥಿಗಳು ಕೆಲಸಕ್ಕೆ ಸೇರುವ ವರೆಗೂ ಅನುಸರಣೆ

ಕಂಪನಿಗಳಿಗೆ ನೊಂದಣಿ ಪ್ರಕ್ರಿಯೆ

ಉದ್ಯೋಗಾಸಕ್ತರಿಗೆ ಮಾಹಿತಿಯನ್ನು ಮುಟ್ಟಿಸಲು ನಿಮ್ಮ ತ್ವರಿತ ದಾಖಲಾತಿ ಸಹಾಯ ಮಾಡುತ್ತದೆ. ಜೊತೆಗೆ ನಿಮ್ಮ ಅವಶ್ಯಕತೆಗಳ ಪ್ರಕಾರ ಮೂಲ ಸೌಕರ್ಯವನ್ನು ವ್ಯವಸ್ಥೆಮಾಡಲು ಮತ್ತು ನಿರ್ವಹಿಸಲು ಇದು ಉಪಕಾರಿ.

ನೋಂದಣಿ

• ಕಂಪೆನಿ ಹಾಗೂ ಅಭ್ಯರ್ಥಿಗಳಿಗೆ ದಾಖಲಾತಿ ಉಚಿತ

• ಆನ್‍ಲೈನ್ ನೊಂದಣಿಗೆ hಣಣಠಿ://ಚಿಟvಚಿsಠಿಡಿಚಿgಚಿಣhi.ಛಿom ಭೇಟಿ ನೀಡಿ

• ಕಂಪೆನಿಗಳು http://alvaspragathi.com/CompanyRegistrationPage  ಹಾಗೂ ಅಭ್ಯರ್ಥಿಗಳು http://alvaspragathi.com/CandidateRegistrationPage ಇಲ್ಲಿ ನೋಂದಾಯಿಸಬಹುದು.

ಅಗತ್ಯ ದಾಖಲೆಗಳು

• 5-10 ಪಾಸ್‍ಪೋರ್ಟ್ ಗಾತ್ರದ ಫೊಟೊಗಳು, ಅಭ್ಯರ್ಥಿಯ ಇತ್ತೀಚಿನ ರೆಸ್ಯೂಮೆ

• ಧೃಡೀಕರಿಸಲ್ಪಟ್ಟ ಎಲ್ಲಾ ಮಾಕ್ರ್ಸ್ ಕಾರ್ಡ್‍ಗಳು ( ಜೆರಾಕ್ಸ್ ಪ್ರತಿಗಳು ಮಾತ್ರ)

ಸಂಪರ್ಕಕ್ಕೆ 9611686148/9663190590/7892880902/8494934852/9008907716ನ್ನು ಸಂಪರ್ಕಿಸಬಹುದು ಎಂದು ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಪ್ರಗತಿ ಮೀಡಿಯಾ ಸಂಯೋಜಕಿ,ಡಾ. ಮೌಲ್ಯ ಜೀವನ್‍ರಾಂ, ಸಹಾಯಕ ಟಿಪಿಒ ಸುಶಾಂತ್ ಅನಿಲ್ ಲೋಬೋ, ಆಳ್ವಾಸ್ ಪ್ರಗತಿ ಸಂಯೋಜಕರಾದ ಮುದ್ದುಕೃಷ್ಣ ಸಿ ಶೆಟ್ಟಿ, ದೀಪಕ್ ರಾಜ್ ಉಪಸ್ಥಿತರಿದ್ದರು.