Sunday, January 19, 2025
ಬೆಂಗಳೂರುಸಿನಿಮಾಹೆಚ್ಚಿನ ಸುದ್ದಿ

ಫ್ಯಾಟ್ ಸರ್ಜರಿ ವೇಳೆ ಕಿರುತೆರೆ ನಟಿ ಚೇತನಾ ರಾಜ್ ಸಾವು : ಮಗಳ ಶವದ ಮುಂದೆ ತಾಯಿ ಕಣ್ಣೀರು – ಕಹಳೆ ನ್ಯೂಸ್

ಬೆಂಗಳೂರು : ಫ್ಯಾಟ್ ಸರ್ಜರಿಯ ವೇಳೆ ಸಿನಿಮಾ ಹಾಗೂ ಕಿರುತೆರೆಯ ನಟಿ ಚೇತನಾ ರಾಜ್ (21 ವರ್ಷ) ಸಾವನ್ನಪ್ಪಿದ ಘಟನೆ ಬೆಂಗಳೂರಿನ ಡಾ.ಶೆಟ್ಟಿಸ್ ಕಾಸ್ಮೆಟಿಕ್ ಆಸ್ಪತ್ರೆಯಲ್ಲಿ ನಡೆದಿದೆ.

ಬೆಂಗಳೂರಿನ ಡಾ.ಶೆಟ್ಟಿಸ್ ಕಾಸ್ಮೆಟಿಕ್ ಆಸ್ಪತ್ರೆಯಲ್ಲಿ ನಟಿ ಚೇತನಾ ರಾಜ್ ಗೆ ಫ್ಯಾಟ್ ಸರ್ಜರಿ ಮಾಡಲಾಗಿದ್ದು, ಈ ವೇಳೆಯಲ್ಲಿ ಶ್ವಾಸಕೋಶದಲ್ಲಿ ನೀರು ಸಂಗ್ರಹವಾಗಿ ಅವರು ಸಾವನ್ನಪ್ಪಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಿರುತೆರೆಯ ಗೀತಾ, ದೊರೆಸಾನಿ ಸೇರಿದಂತೆ ಹಲವು ಧಾರವಾಹಿ ಹಾಗೂ ಸಿನಿಮಾಗಳಲ್ಲಿಯೂ ಚೇತನಾ ರಾಜ್ ನಟಿಸಿದ್ದರು. ಇನ್ನಷ್ಟೇ ತೆರೆ ಕಾಣಬೇಕಾಗಿದ್ದ ಹವಾಯಾಮಿ ಸಿನಿಮಾದಲ್ಲಿಯೂ ಚೇತನಾ ನಟಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಟಿ ಚೇತನಾ ರಾಜ್‍ಯ ಮನೆಯವರ ಅನುಮತಿಯನ್ನೇ ಪಡೆಯದೇ ಫ್ಯಾಟ್ ಸರ್ಜರಿಯನ್ನು ಮಾಡಿದ್ದು, ಮಗಳ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಚೇತನಾ ಸಂಬಂಧಿ ರಾಜಣ್ಣ ಆರೋಪಿಸಿದ್ದು, ಮಗಳ ಶವದ ಮುಂದೆ ತಾಯಿ ಕಣ್ಣೀರು ಸುರಿಸುತ್ತಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸುಬ್ರಹ್ಮಣ್ಯ ನಗರ ಠಾಣೆಯ ಪೆÇಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.