Sunday, January 19, 2025
ಪುತ್ತೂರುಸುದ್ದಿ

ಪುತ್ತೂರು: ರೈಲು ಬಡಿದು ಕಡಬ ಮೂಲದ ಕಾರ್ತಿಕ್ ಮೃತ್ಯು-ಕಹಳೆ ನ್ಯೂಸ್ 

ಪುತ್ತೂರು: ರೈಲು ಬಡಿದು ಯುವಕ ಸಾವನ್ನಪ್ಪಿರುವ ಘಟನೆ ಕಬಕ ಸಮೀಪದ ಮಿತ್ತೂರಿನಲ್ಲಿ ನಡೆದಿದೆ.
ಮೃತ ಯುವಕನನ್ನು ಕಡಬ ತಾಲೂಕಿನ ಕೊಯಿಲ ಗ್ರಾಮದ ಪುಣಿಕೆತ್ತಡಿ ನಿವಾಸಿ ಜಗದೀಶ ಹಾಗೂ ಹೇಮಾವತಿ ದಂಪತಿ ಪುತ್ರ ಕಾರ್ತಿಕ್ (24) ಎನ್ನಲಾಗಿದೆ.

ಕಾರ್ತಿಕ್ ಮಿತ್ತೂರಿನ ಕಿರುಸೇತುವೆಯಲ್ಲಿ ನಡೆದುಕೊಂಡು
ಹೋಗುತ್ತಿದ್ದ ವೇಳೆ ಮುಂಭಾಗದಿಂದ ಬರುತ್ತಿದ್ದ ರೈಲು ಬಡಿದು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ ಎಂದು ವರದಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೂರು ದಿನಗಳ ಹಿಂದೆ ಮಂಗಳೂರಿಗೆ ಕೆಲಸಕ್ಕೆ ಬಂದಿದ್ದ
ಅವರು ಮೇ.15 ರಂದು ರಾತ್ರಿ ಮನೆಗೆ ಫೋನ್ ಮಾಡಿದ್ದರು.
ಬಸ್ ಸಿಗದ ಹಿನ್ನೆಲೆಯಲ್ಲಿ ಮಿತ್ತೂರಿನಲ್ಲಿ ಸೇತುವೆ ಮೂಲಕ ಉಪ್ಪಿನಂಗಡಿ ಸಂಪರ್ಕಿಸುವ ಪ್ರಯತ್ನ ನಡೆಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿರಬಹುದು ಎಂದು ರೈಲ್ವೆ ಪೊಲೀಸರು ಶಂಕಿಸಿದ್ದಾರೆ.ಮಂಗಳೂರು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮೃತ ಕಾರ್ತಿಕ್ ರವರು ತಂದೆ ಜಗದೀಶ, ತಾಯಿ ಹೇಮಾವತಿ,ಸಹೋದರರಾದ ಕೌಶಿಕ್, ತೃಶಿಕ್ ರನ್ನು ಅಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು