Recent Posts

Sunday, January 19, 2025
ದಕ್ಷಿಣ ಕನ್ನಡಸುದ್ದಿ

ಉಳ್ಳಾಲ : ಭಾರೀ ಮಳೆಗೆ ನೆಲಕ್ಕುರುಳಿದ ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕಟ್ಟಡ – ಕಹಳೆ ನ್ಯೂಸ್

ಉಳ್ಳಾಲ : ರಾತ್ರಿ ಸುರಿದ ಭಾರೀ ಮಳೆಗೆ ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕಟ್ಟಡ ಕುಸಿದುಬಿದ್ದಿರುವ ಘಟನೆ ಉಳ್ಳಾಲದ ಕಿನ್ಯಾ ಬೆಳರಿಂಗೆಯಲ್ಲಿ ನಡೆದಿದೆ.

ವಿಪರೀತ ಮಳೆಗೆ ಮೊದಲೇ ಶಿಥಿಲಾವಸ್ಥೆಯಲ್ಲಿದ್ದ ಕಿನ್ಯಾ ಬೆಳರಿಂಗೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಳೇ ಕಟ್ಟಡ ಕುಸಿದುಬಿದ್ದಿದೆ. ಸಮೀಪದಲ್ಲೇ ಹೊಸತಾದ ಕಟ್ಟಡ ನಿರ್ಮಿಸಲಾಗಿದ್ದು, ಅದರಲ್ಲಿ ತರಗತಿಗಳು ನಡೆಯುತ್ತಿದ್ದುದರಿಂದ ತರಗತಿ ನಡೆಸಲು ಯಾವುದೇ ತೊಂದರೆಯಾಗಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾತ್ರಿ ವೇಳೆ ಕಟ್ಟಡ ಕುಸಿದುಬಿದ್ದಿರುವುದರಿಂದ ಸಂಭಾವ್ಯ ಅನಾಹುತ ತಪ್ಪಿದೆ. ಹಳೇ ಕಟ್ಟಡ ಕೆಡವಲು ಗ್ರಾ.ಪಂ ನಿಂದ ಶಿಕ್ಷಣ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಅನುಮತಿ ನೀಡದ ಹಿನ್ನೆಲೆಯಲ್ಲಿ ಕೆಡವಲು ಸಾಧ್ಯವಾಗಿಲ್ಲ ಎಂದು ಗ್ರಾ.ಪಂ ಸದಸ್ಯ ಸಿರಾಜ್ ಕಿನ್ಯಾ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು