Recent Posts

Monday, January 20, 2025
ಕ್ರೈಮ್ದಕ್ಷಿಣ ಕನ್ನಡಸುದ್ದಿ

ವಿವಾಹಿತೆಯ ಜೊತೆ ಅಕ್ರಮ ಸಂಬಂಧ ಬೆಳೆಸಿ ತನ್ನ ಭಾವನ ಜೊತೆ ಸೇರಿ ಅದೇ ಮಹಿಳೆಯಿಂದ ಒಂದೂವರೆ ಕೋಟಿ ಸುಲಿಗೆ ಮಾಡಿ ವಂಚಿಸಿದ ವಿಟ್ಲದ ಭಾವೀ ಮದುಮಗ.! ಉಂಡೂ ಹೋದ..ಕೊಂಡೂ ಹೋದ ಮಸೀದಿ ಅಧ್ಯಕ್ಷನ ಪುತ್ರ.! – ಕಹಳೆ ನ್ಯೂಸ್

ಮಂಗಳೂರು : ಮಹಿಳೆಯೊಬ್ಬರು ನೀಡಿದ ದೂರಿನನ್ವಯ ವಿಟ್ಲ ಸಮೀಪದ ಬೈರಿಕಟ್ಟೆ ನಿವಾಸಿ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಹಾಜಿ ಪುತ್ರ ಫಯಾದ್(30) ಮತ್ತಾತನ ಭಾವನ ವಿರುದ್ಧ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಅತ್ಯಾಚಾರ, ವಂಚನೆ ಪ್ರಕರಣ ದಾಖಲಾಗಿದೆ.

ಮಹಿಳೆ ನೀಡಿದ ದೂರಿನಂತೆ ಫಯಾದ್ ಎಂಬವನು ತನ್ನನ್ನು ಅತ್ಯಾಚಾರ ಮಾಡಿದ್ದಾನೆ. ಅಲ್ಲದೆ ಫಯಾದ್ ನ ಭಾವ ಮಂಗಳೂರಿನ ಬುರ್ಖಾ ಫಾರಡೈಸ್ ಮಾಲಕ ಉಂಬಾಯಿ ಯಾನೆ ಅಬ್ದುಲ್ ರಹಿಮಾನ್ ಸೇರಿ ಸುಮಾರು 1.50 ಕೋಟಿ ಹಣ ಪಡೆದು ವಂಚಿಸಿದ್ದಾರೆಂದು ದೂರು ನೀಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಕರಣ ದಾಖಲಿಸಿಕೊಂಡ ಪಾಂಡೇಶ್ವರ ಮಹಿಳಾ ಠಾಣಾ ಪೊಲೀಸರು IPC ಸೆಕ್ಷನ್ 376, 420, 506 (34IP) FIR ದಾಖಲಿಸಿ ಆರೋಪಿಗಳನ್ನು ವಶ ಪಡೆದುಕೊಂಡಿದ್ದಾರೆ.

ಆರೋಪಿ ಫಯಾದ್ ಎಂಬಾತನಿಗೆ ಮೇ 22 ರಂದು ಮದುವೆ ನಿಗದಿಯಾಗಿತ್ತು. ಆದರೆ ಹಸೆಮಣೆ ಏರಬೇಕಿದ್ದ ಫಯಾದ್ ಜೈಲು ಪಾಲಾಗಿದ್ದು ಕುಟುಂಬಸ್ಥರಲ್ಲಿ ಬೇಸರ ತಂದಿದೆ. ಮಸೀದಿ ಅಧ್ಯಕ್ಷರಾಗಿರುವ ಫಯಾದ್ ತಂದೆ ಸಂಸ್ಕಾರಯುತ ಜೀವನ ಸಾಗಿಸುತ್ತಿದ್ದು ಪುತ್ರ ಮತ್ತು ಅಳಿಯ(ಮಗಳ ಗಂಡ)ನ ಹುಚ್ಚಾಟದಿಂದಾಗಿ ಕುಟುಂಬದ ಮಾನ ಹರಾಜಾಗುವಂತಾಗಿದ್ದು ಸ್ವಜಾತಿ ಭಾಂಧವರಲ್ಲದೇ ಇತರ ಸಮುದಾಯದವರೂ ಧಿಗ್ರ್ಭಮೆ ವ್ಯಕ್ತಪಡಿಸಿದ್ದಾರೆ.