Recent Posts

Sunday, January 19, 2025
ದಕ್ಷಿಣ ಕನ್ನಡಸುದ್ದಿ

ಕುಂಜತ್ತೂರು ಉದ್ಯಾವರ ಮಾಡ ಶ್ರೀ ಅರಸು ಮಂಜಿಷ್ಣಾರ್ ಶ್ರೀ ದೈವಗಳ ಜಾತ್ರಾ ಮಹೋತ್ಸವದಲ್ಲಿ ಯುವಶಕ್ತಿ ಸೇವಾಪಥದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಉದ್ಯಾವರ ಸೇವಾಚಕ್ರ ಸಂಪನ್ನ – ಕಹಳೆ ನ್ಯೂಸ್

ಯುವಶಕ್ತಿ ಸೇವಾಪಥದ ನೇತೃತ್ವದಲ್ಲಿ ಕುಂಜತ್ತೂರು ಉದ್ಯಾವರ ಮಾಡ ಶ್ರೀ ಅರಸು ಮಂಜಿಷ್ಣಾರ್ ಶ್ರೀ ದೈವಗಳ ಜಾತ್ರಾ ಮಹೋತ್ಸವದಲ್ಲಿ ಹಮ್ಮಿಕೊಂಡಿದ್ದ ಉದ್ಯಾವರ ಸೇವಾಚಕ್ರ ಸಂಪನ್ನಗೊಂಡಿದ್ದು, ಸೇವಾಚಕ್ರದಲ್ಲಿ ಸಂಗ್ರಹಗೊಂಡಿದ್ದ 225,000 ಮೊತ್ತವನ್ನು ದೈವಸ್ಥಾನದ ಮುಂಭಾಗದಲ್ಲಿ ವ್ಯವಸ್ಥಾಪನಾ ಸಮಿತಿ ಹಾಗೂ ಸೇವಾಪಥದ ಕಾರ್ಯಕರ್ತರ ಸಮ್ಮುಖದಲ್ಲಿ ಬಡಕುಟುಂಬಗಳಿಗೆ ಹಸ್ತಾಂತರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ತೆಂಗಿನಮರದಿಂದ ಬಿದ್ದು ಮಂಗಳೂರಿನ ಪರ್ಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಂಜೇಶ್ವರದ ವಿಶ್ವನಾಥ ಅವರಿಗೆ ರೂ 1,00,000.00(ಒಂದು ಲಕ್ಷ), ಸಕ್ಕರೆ ಕಾಯಿಲೆಯಿಂದ ಕಾಲನ್ನು ಕಳೆದುಕೊಂಡಿರುವ ಮಕ್ಕಳಿಲ್ಲದ ವಿಜಯ ಕುಂಜತ್ತೂರುರವರಿಗೆ ರೂ 80,000(ಎಂಬತ್ತುಸಾವಿರ), ಬೈಕ್ ಅಪಘಾತದಿಂದ ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತೋಷ್ ಮುಡಿಪು, ಗಂಡನನ್ನು ಕಳೆದುಕೊಂಡು ಸ್ವಂತ ಮನೆಯೂ ಇಲ್ಲದೆ ಕಷ್ಟಪಡುತ್ತಿರುವ ಎರಡು ಮಕ್ಕಳ ತಾಯಿ ಮಂಜುಳಾ ಕರಿಯಂಗಳ, ಸಕ್ಕರೆ ಕಾಯಿಲೆಯಿಂದ ಕಾಲು ಗ್ಯಾಂಗ್ರೀನ್ ಆಗಿದ್ದು ಪ್ರತಿನಿತ್ಯದ ಚಿಕಿತ್ಸೆಗೆ ಪರದಾಡುವ ಪರಿಸ್ಥಿತಿಯಲ್ಲಿರುವ ಸಮಾಜಕಾರ್ಯಕ್ಕಾಗಿ ದುಡಿದ ಸಹೋದರಿಯ ಗಂಡ ತಿಲಕ್ ಸಾಲ್ಯಾನ್ ಮುಲ್ಕಿ ರವರಿಗೆ ತುರ್ತು ನಿಧಿ ಯೋಜನೆಯಡಿ ತಲಾ 10,000 ಗಳನ್ನು ಹಸ್ತಾಂತರಿಸಲಾಯಿತು.ಇನ್ನು ಉಳಿದಂತೆ ಸೇವಾಪಥ ಕಾರ್ಯಕರ್ತ ಕ್ಷೇಮನಿಧಿಗೆ ರೂ 15,000 ಗಳನ್ನು ಮೀಸಲಾಗಿಡಲಾಗಿದೆ.

 


ಸುಮಾರು 200 ಕ್ಕೂ ಅಧಿಕ ಸ್ವಯಂಸೇವಕರು ಈ ಸೇವಾಕಾರ್ಯದಲ್ಲಿ ಭಾಗವಹಿಸಿದ್ದು ದೈವಸ್ಥಾನದ ಆಡಳಿತ ವಿಭಾಗ ಹಾಗೂ ಊರ, ಪರವೂರ ಭಕ್ತಾದಿಗಳ ಸಹಕಾರದಿಂದ ಸೇವಾನಿಧಿ ಯೋಜನೆ ಯಶಸ್ವಿಯಾಗಿ ನೆರವೇರಿತು.