Recent Posts

Monday, January 20, 2025
ದಕ್ಷಿಣ ಕನ್ನಡಸಿನಿಮಾಸುದ್ದಿ

ಅಂತರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡ ‘49’ ಕಿರುಚಿತ್ರ : 22ಕ್ಕೂ ಅಧಿಕ ರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‍ನಲ್ಲಿ ವಿಭಿನ್ನ ವಿಭಾಗದ ಪ್ರಶಸ್ತಿ – ಕಹಳೆ ನ್ಯೂಸ್

ಪ್ರವೀಣ್ ರಾಜ್ ಅಡ್ಯನಡ್ಕ ಇವರ ‘49’ ಎಂಬ ಕನ್ನಡ ಕಿರುಚಿತ್ರಕ್ಕೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ದ ಸಿನಿಮಾ ಇಂಟರ್‍ನ್ಯಾಷನಲ್ ಶೋರ್ಟ್ ಫಿಲ್ಮ್ ಫೆಸ್ಟಿವಲ್‍ನಲ್ಲಿ ಅತ್ಯುತ್ತಮ ಕನ್ನಡ ಸಿನಿಮಾ ಎಂಬ ಪ್ರಶಸ್ತಿ ಲಬಿಸಿದೆ, ಮತ್ತು ಮ್ಯಾಕ್ ಫ್ರೇಮ್ ಇಂಡಿಯನ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲೂ ಅತ್ಯುತ್ತಮ ಕನ್ನಡ ಸಿನಿಮಾ ಎಂಬ ಪ್ರಶಸ್ತಿ ಲಭಿಸಿದೆ,. ಇದಲ್ಲದೆ ಒಟ್ಟು 22 ರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ ವಿಭಿನ್ನ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ, ಸಿನಿ ಫ್ಯಾರ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಬೆಸ್ಟ್ ಎಮೋಷನಲ್ ಶೋರ್ಟ್ ಫಿಲ್ಮ್, ಬಯೋಸ್ಕೋಪ್ ಸಿನಿ ಫಿಲ್ಮ್ ಫೆಸ್ಟಿವಲ್‍ನಲ್ಲಿ ಬೆಸ್ಟ್ ಡೈರೆಕ್ಟರ್- ಯೂತ್, ಬೆಸ್ಟ್ ಪ್ರೋಮಿಸಿಂಗ್ ಪಿಲ್ಮ್, ಬೆಸ್ಟ್ ಎಡಿಟರ್, ಬೆಸ್ಟ್ ಸಸ್ಪೆನ್ಸ್ ಥ್ರಿಲ್ಲರ್, ಬೆಸ್ಟ್ ಕನ್ನಡ ಪಿಲ್ಮ್, ಬೆಸ್ಟ್ ಸೋಸಿಯಲ್ ಆರ್ಟ್, ಮತ್ತು ವಿಂಟೇಜ್ ರೀಲ್ಸ್ ಪಿಲ್ಮ್ ಫೆಸ್ಟಿವಲ್ ನಲ್ಲಿ ಬೆಸ್ಟ್ ಆಕ್ಟರ್, ಬೆಸ್ಟ್ ಎಡಿಟರ್, ಬೆಸ್ಟ್ ಕನ್ನಡ ಪಿಲ್ಮ್, ಬೆಸ್ಟ್ ಕಾನ್ಸೆಪ್ಟ್ ಪಿಲ್ಮ್. ಮತ್ತು ಕಲ್ಟ್ ಸಿನಿಮಾ ಪಿಲ್ಮ್ ಫೆಸ್ಟಿವಲ್ ನಲ್ಲಿ ಬೆಸ್ಟ್ ಡೈರೆಕ್ಟರ್, ಬೆಸ್ಟ್ ಆಕ್ಟರ್, ಬೆಸ್ಟ್ ಎಡಿಟರ್, ಬೆಸ್ಟ್ ಥ್ರಿಲ್ಲರ್, ಬೆಸ್ಟ್ ಆರ್ಟ್ ಪಿಲ್ಮ್, ಬೆಸ್ಟ್ ಡ್ರಾಮ. ಮತ್ತು ದ ಇಂಡಿಯನ್ ಒನ್‍ಲೈನ್ ಫಿಲ್ಮ ಫೆಸ್ಟಿವಲ್ ನಲ್ಲಿ ಬೆಸ್ಟ್ ಸ್ಟೋರಿ, ಬೆಸ್ಟ್ ಎಕ್ಸಪರಿಮೆಂಟಲ್ ಪಿಲ್ಮ್, ಬೆಸ್ಟ್ ಪ್ರೋಡಕ್ಷನ್, ಮತ್ತು ಶೋರ್ಟ್ ಇಂಟರ್‍ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಬೆಸ್ಟ್ ಸ್ಕ್ರೀನ್‍ಪ್ಲೇ ಅವಾರ್ಡ ಲಭಿಸಿದೆ. 49 ಎಂಬುವುದು ಕನ್ನಡದ ಒಟ್ಟು ಅಕ್ಷರಮಾಲೆ, ಇದು ಒಬ್ಬ ಯುವಕನ ಕತೆ. ಭಾಷಾ ದಬ್ಬಾಳಿಕೆಯಿಂದ ಬೇಸತ್ತು ಸರ್ಕಾರಿ ಕೆಲಸಕ್ಕೆ ರಾಜಿನಾಮೆ ಕೊಟ್ಟು ಕೃಷಿಯಲ್ಲಿ ತೊಡಗಿಸಿಕೊಂಡ. ಹಿಂದಿ ಹೇರಿಕೆಯಿಂದ ಅವನ ಜೀವನದಲ್ಲಿ ನೆಡದ ಫಟನೆಗಳು, ಅದರಿಂದ ಅವ ಅನುಭವಿಸಿದ ನೋವನ್ನು ಮಾರ್ಮಿಕವಾಗಿ ಹೇಳುವ ಸಿನಿಮಾವೆ 49. (ಇದು 2051 ರಲ್ಲಿ ನಡೆಯಬಹುದಾದ ಕಾಲ್ಪನಿಕ ಕತೆ) ದಕ್ಷಿಣ ಕನ್ನಡ ಜಿಲ್ಲೆಯ ಗಡಿನಾಡಿನ ಅಡ್ಯನಡ್ಕ ದ ಪ್ರವೀಣ್ ರಾಜ್ 49 ಸಿನಿಮಾದ ಕತೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ ಮಾಡುವುದರ ಜೊತೆಗೆ ನಾಯಕನಾಗಿ ನಟಿಸಿದ್ದಾರೆ. ಮತ್ತು ಪ್ರವೀಣ್ ರಾಜ್ ಅವರ ಪ್ರವೀಣ್ ರಾಜ್ ಪಿಲ್ಮ್ಸ್ ಬ್ಯಾನರ್ ನಲ್ಲಿ ನಿರ್ಮಿಸಿದ್ದಾರೆ. ಇವರು ಹಲವಾರು ಕಿರುಚಿತ್ರ ನಿರ್ದೇಶನ ಮಾಡಿದ್ದಾರೆ ಮತ್ತು ‘ಮಹಾಬಲಿ’ ಎಂಬ ಕನ್ನಡ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿ ಚಿತ್ರದುದ್ದಕ್ಕೂ ಕಾಣಿಸಲಿದ್ದಾರೆ, ಮಹಾಬಲಿ ಜೂನ್ ತಿಂಗಳಲ್ಲಿ ರಾಜ್ಯದಾದ್ಯಂತ ಚಿತ್ರಮಂದಿರದಲ್ಲಿ ಬಿಡುಗಡೆಯಾಗಳಿದೆ. ಇದೀಗ ಪ್ರವೀಣ್ ರಾಜ್ ಅವರು ಬಿಗ್ ಬಜೆಟ್ ಕನ್ನಡ ಸಿನಿಮಾ ಮಾಡಲು ಹೊರಟಿದ್ದಾರೆ, ಚಿತ್ರದ ಕತೆ ಮುಕ್ತಾಯವಾಗಿದ್ದು ಅತೀ ಶೀಫ್ರದಲ್ಲೇ ಪ್ರೀ ಪ್ರೊಡಕ್ಷಣ್ ಕೆಲಸ ಆರಂಭವಾಗಳಿದೆ. 49 ಸಿನಿಮಾದ ಕಲಾವಿದರು ರಾಜಶೇಖರ ಮರಕ್ಕಿಣಿ, ದಾಮೋದರ ಕುಲಾಲ್ ಅಮೈ, ದಿವ್ಯಾ ಆಚಾರ್ಯ, ಛಾಯಾಗ್ರಹಣ ಭವಿತ್ ರಾಜ್ ಪೋರ್ಕೋಡಿ, ಪ್ರೋಡಕ್ಷನ್ ಮ್ಯಾನೇಜರ್ ಗೋಪಾಲಕೃಷ್ಣ ಮತ್ತು ಸಂಕಲನವನ್ನು ಮೈತ್ರಿ ಸ್ಟುಡಿಯೋ ಅಡ್ಯನಡ್ಕ ಮಾಡಿದ್ದಾರೆ. ಕಿರಣ್ ರಾಜ್ ಈ ಸಿನಿಮಾಗೆ ಇಂಗ್ಲೀಷ್ ಸಬ್ ಟೈಟಲ್ ಮಾಡಿದ್ದಾರೆ.  News Update : ಎಂದ್ರೆಲ್ಲಾ ಬಾವ ಇದ್..! 

ಜಾಹೀರಾತು
ಜಾಹೀರಾತು
ಜಾಹೀರಾತು


(ಭಾಷೆ ಮನಸ್ಸುಗಳನ್ನ ಬೆಸೆಯುವ ಕೆಲಸ ಮಾಡಬೇಕೆ ಹೊರತು ಹೃದಯಗಳನ್ನ ಒಡೆಯುವ ಕೆಲಸಕ್ಕಿಳಿಯಬಾರದು. ಪ್ರತಿಯೊಂದು ಭಾಷೆಯೂ ಅದರದ್ದೇ ಆದ ಸಾಂಸ್ಕøತಿಕ ಶ್ರೀಮಂತಿಕೆಯನ್ನ ಹೊಂದಿದೆ. ಈ ಕಿರುಚಿತ್ರದಲ್ಲೂ ಪ್ರವೀಣ್ ರಾಜ್ ಒಂದು ಸೂಕ್ಷ್ಮ ವಿಷಯವನ್ನ ಭವಿಷ್ಯದ ಕಣ್ಣುಗಳಲ್ಲಿ ಅತ್ಯಂತ ಮಾರ್ಮಿಕವಾಗಿ ಸೆರೆಹಿಡಿಯುವ ಪ್ರಯತ್ನ ಮಾಡಿದ್ದಾನೆ. ಚಿತ್ರದ ಪ್ರತಿಯೊಂದು ವಿಭಾಗದಲ್ಲೂ ಒಬ್ಬ ಅನುಭವಿ ನಿರ್ದೇಶಕನ ಛಾಪು
ಕಾಣುತ್ತೆ. ಕನ್ನಡದ ಮನಸ್ಸುಗಳು ನೋಡಲೇ ಬೇಕಾದ ಕಿರುಚಿತ್ರ.)

ಜಾಹೀರಾತು
ಜಾಹೀರಾತು
ಜಾಹೀರಾತು

(49 ಎಂಬ ಕಿರುಚಿತ್ರವು ಹುಟ್ಟುವುದಕ್ಕೆ ಮೊದಲ ಕಾರಣ ನಿರ್ದೇಶಕ ಪವನ್ ಕುಮಾರ್ ಸರ್ ಅವರು, ಪುನಿತ್ ರಾಜ್ ಕುಮಾರ್ ಸರ್ ನಟಿಸಬೇಕಾದ ದ್ವಿತ್ವ ಎಂಬ ಚಿತ್ರದಲ್ಲಿ ಕೆಲಸ ಮಾಡಲು ಒಂದು ಕಿರು ಚಿತ್ರದ ಟಾಸ್ಕ್ ಕೊಟ್ಟಿದ್ದರು ಅದರಲ್ಲಿ (ಕನ್ನಡಕ್ಕಾಗಿ) ಎಂಬ ವಿಷಯದ ಬಗ್ಗೆ ಕಿರುಚಿತ್ರ ಮಾಡಲು ಹೇಳಿದ್ದರು ಆದರೆ ಅಪ್ಪು ಸರ್ ನಮ್ಮನು ಅಗಲಿದ ಕಾರಣ ಆ ಸಿನಿಮಾ ನಿಂತು ಹೋಯಿತು, ಮತ್ತೆ ನಾನು ಕನ್ನಡ ಎಂಬ ವಿಷಯವನ್ನು ಇಟ್ಟುಕೊಂಡು 49 ಎಂಬ ಸಿನಿಮಾ ಮಾಡಿದೆ. ಇದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದು ಮುಂದೆ ಇನ್ನಷ್ಟು ಸಿನಿಮಾ ಮಾಡಲು ಸ್ಪೂರ್ತಿ ನೀಡಿದೆ.
_ ಪ್ರವೀಣ್ ರಾಜ್ (ನಟ, ನಿರ್ದೇಶಕ)