Saturday, November 16, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ: ತಾತ್ಕಾಲಿಕವಾಗಿ ಪುಂಜಾಲಕಟ್ಟೆ ಬಾಡಿಗೆ ಕಟ್ಟಡದಲ್ಲಿ ಆರಂಭವಾಗಲಿರುವ ದ.ಕ.ಜಿಲ್ಲೆಯ ನಾರಾಯಣ ಗುರು ವಸತಿ ಶಾಲೆ : ಕಟ್ಟಡ ಪರಿಶೀಲಿಸಿ, ನಿರ್ಮಾಣಗೊಳ್ಳಲಿರುವ ನಿವೇಶನವನ್ನು ವೀಕ್ಷಿಸಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು – ಕಹಳೆ ನ್ಯೂಸ್

ಬಂಟ್ವಾಳ : ಕಳೆದ ಬಜೆಟ್ ನಲ್ಲಿ ಘೋಷಣೆಯಾದ ದ.ಕ.ಜಿಲ್ಲೆಯ ನಾರಾಯಣ ಗುರು ವಸತಿ ಶಾಲೆಯು ತಾತ್ಕಾಲಿಕವಾಗಿ ಬಂಟ್ವಾಳದ ಪುಂಜಾಲಕಟ್ಟೆ ಬಾಡಿಗೆ ಕಟ್ಟಡದಲ್ಲಿ ಆರಂಭವಾಗಲಿದ್ದು, ಈ ನಿಟ್ಟಿನಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಕಟ್ಟಡ ಪರಿಶೀಲಿಸಿದರು. ಜೊತೆಗೆ ನಾರಾಯಣ ಗುರು ವಸತಿ ಶಾಲೆಯ ಕಟ್ಟಡ ನಿರ್ಮಾಣಗೊಳ್ಳಲಿರುವ ನಿವೇಶನವನ್ನು ವೀಕ್ಷಿಸಿದರು.

ಬಳಿಕ ಮಾತನಾಡಿದ ಶಾಸಕರು ಈ ಶೈಕ್ಷಣಿಕ ವರ್ಷದಿಂದಲೇ ವಸತಿ ಶಾಲೆ ಪ್ರಾರಂಭವಾಗಲಿದ್ದು, 50 ಮಕ್ಕಳನ್ನು ವಸತಿ ಶಾಲೆಗೆ ದಾಖಲಾತಿ ಮಾಡುತ್ತೇವೆ ಹೇಳಿದರು. ಪುಂಜಾಲಕಟ್ಟೆ ಬಾಡಿಗೆ ಕಟ್ಟಡದಲ್ಲಿ ಸಕಲ ವ್ಯವಸ್ಥೆಗಳೊಂದಿಗೆ ವಸತಿ ಶಾಲೆ ಪ್ರಾರಂಭ ಮಾಡುತ್ತೇವೆ. ವಸತಿ ಶಾಲೆಯ ಮಕ್ಕಳಿಗೆ ಎಲ್ಲಾ ರೀತಿಯ ಶಿಕ್ಷಣವನ್ನು ಜೊತೆಗೆ ಕ್ರೀಡೆಯ ಆಸಕ್ತಿ ಮೂಡಿಸುವ ಯೋಜನೆ ಯೋಚನೆ ಮಾಡಿದ್ದೇವೆ ಎಂದರು. ಆರೋಗ್ಯ ಮತ್ತು ಶಿಕ್ಷಣಕ್ಕೆ ಸರಕಾರ ಹೆಚ್ಚಿನ ಕಾಳಜಿ ವಹಿಸಿದೆ. ತುಂಗಪ್ಪ ಬಂಗೇರ ಅವರ ಬಹಳ ವರ್ಷಗಳ ಕನಸು ಇದಾಗಿದ್ದು, ಉತ್ತಮ ರೀತಿಯಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಎಂ ತುಂಗಪ್ಪ ಬಂಗೇರ, ಪಿಲಾತಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಹರ್ಷಿಣಿ, ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ರಶ್ಮಿ ಎಸ್ ಆರ್, ತಹಶೀಲ್ದಾರ್ ಸ್ಮಿತಾರಾಮು ಮಂಡ್ಯ, ಇಲಾಖೆಯ ಬಂಟ್ವಾಳ ಅಧಿಕಾರಿ ಬಿಂದಿಯಾ, ಕಟ್ಟಡದ ಮಾಲಕ ಪ್ರಶಾಂತ್ ಪುಂಜಾಲಕಟ್ಟೆ, ಕಾಂತಪ್ಪ ಕರ್ಕೇರ ಚಿದಾನಂದ ರೈ ಕಕ್ಯ, ಹರೀಶ್ ಪ್ರಭು, ಶೇಷಗಿರಿ, ಅಜಿತ್ ಶೆಟ್ಟಿ, ದಯಾನಂದ ನಾಯಕ್, ರಮನಾಥ ರಾಯಿ, ದಿನೇಶ್ ಶೆಟ್ಟಿ ದಂಬೆದಾರ್, ಯಶೋಧರ ಕರ್ಬೆಟ್ಟು, ಹರೀಂದ್ರ ಪೈ, ಶಂಕರ್ ಶೆಟ್ಟಿ ಬೆದ್ರಮಾರ್, ಚಂದ್ರಶೇಖರ್ ಶೆಟ್ಟಿ,ಪ್ರಭಾಕರ ಪಿ.ಎಂ. ಮತ್ತಿತರರು ಉಪಸ್ಥಿತರಿದ್ದರು.