ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ : ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಐದನೇ ದಿನದ ಸಾರ್ವಜನಿಕ ಸಭಾ ಕಾರ್ಯಕ್ರಮ : ಎನ್ ಎಸ್ ಎಸ್ ಶಿಬಿರ ಸಂಸ್ಕಾರ ಬೆಳೆಸುವ ವೇದಿಕೆ: ವಿನಾಯಕ ಭಟ್ ಗಾಳಿಮನೆ- ಕಹಳೆ ನ್ಯೂಸ್
ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮೂಡಂಬೈಲು ಇಲ್ಲಿ ನಡೆಯುತ್ತಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಐದನೇ ದಿನದ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿದ್ದು, ಯುವಜನತೆ ಮತ್ತು ಸಂಸ್ಕಾರ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಪುತ್ತೂರು, ಬಪ್ಪಳಿಗೆ ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀ ವಿನಾಯಕ ಭಟ್ ಗಾಳಿಮನೆ ಇವರು ವಿದ್ಯಾರ್ಥಿಗಳಿಗೆ ಎನ್ ಎಸ್ ಎಸ್ ಶಿಬಿರ ಶಿಸ್ತುಬದ್ಧ ಜೀವನವನ್ನು ಪರಿಚಯಿಸುತ್ತದೆ. ಸಮಯಪಾಲನೆ, ಸಹಕಾರ, ತ್ಯಾಗ, ವಿನಮ್ರತೆ, ಸೌಹಾರ್ದ, ಅತಿಥಿಗಳ ಸತ್ಕಾರ ಮೊದಲಾದ ಗುಣಗಳನ್ನು ಬೆಳೆಸುತ್ತಾ ಕ್ರಮಬದ್ಧವಾದ ಜೀವನವನ್ನು ನಡೆಸಲು ತರಬೇತಿ ನೀಡುತ್ತದೆ ಎಂದು ಹೇಳಿದರು.
ವೈಭವಿ ಕಲಾ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಪುಣಚ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮತಿ ಶಾರದಾ, ಮುಖ್ಯ ಅತಿಥಿಗಳಾಗಿ ಶ್ರೀ ಸತ್ಯನಾರಾಯಣ ಅಡಿಗ, ಕಾಲೇಜಿನ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ, ಶಿಬಿರಾಧಿಕಾರಿಗಳು, ಸಹ-ಶಿಬಿರಾಧಿಕಾರಿಗಳು, ಶಿಕ್ಷಕರು, ಊರಿನ ಗಣ್ಯರು, ವಿದ್ಯಾರ್ಥಿಗಳು ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಶಿಬಿರಾರ್ಥಿಗಳಾದ ನಿತ್ಯಾನಂದ ಸ್ವಾಗತಿಸಿ, ಮೃದುಲಾ ಬಿ ಅತಿಥಿಗಳ ಪರಿಚಯ ನೀಡಿದರು. ಅನುಪಮ ಕೆ ದಾನಿಗಳ ವಿವರ ವಾಚಿಸಿ, ಯಶೋದ ವಂದಿಸಿದರು, ಶೈಲಜಾ ಎನ್ ಕಾರ್ಯಕ್ರಮ ನಿರೂಪಿಸಿದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಶಿಬಿರಾರ್ಥಿಯಾದ ಅನನ್ಯ ಎಸ್ ಇವರಿಂದ ಸುದರ್ಶನ ವಿಜಯದ ಆಯ್ದ ಭಾಗದ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನ ಜರುಗಿತು. ಈ ಸಂದರ್ಭದಲ್ಲಿ ಶಿಬಿರಾರ್ಥಿಯಾದ ಅಂಕಿತ್ ಕೆ ಆರ್ ಚಕ್ರತಾಳ, ಶ್ರೀಮತಿ ಅಮೃತ ಅಡಿಗ ಇವರು ಭಾಗವತರಾಗಿ ಉಪಸ್ಥಿತರಿದ್ದರು.