Friday, April 11, 2025
ದಕ್ಷಿಣ ಕನ್ನಡಪುತ್ತೂರುಸಂತಾಪಸುದ್ದಿ

ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀ.ಬಿ ಶ್ರೀಧರ್ ಭಟ್ ನಿಧನ – ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀ.ಬಿ ಶ್ರೀಧರ್ ಭಟ್ ಇಂದು ನಿಧನರಾಗಿದ್ದಾರೆ. ವಿವೇಕಾನಂದ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಅತ್ಯಂತ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು, ರಸಾಯನ ಶಾಶ್ತ್ರ ವಿಭಾಗದ ಮುಖ್ಯಸ್ಧರಾಗಿಯು ಕಾರ್ಯನಿರ್ವಹಿಸಿದ್ದರು.

ಸರಳ ಹಾಗೂ ಉತ್ತಮ ವ್ಯಕ್ತಿತ್ವವನ್ನ ಹೊಂದಿದ ಶ್ರೀಧರ್ ಭಟ್ ಅವರ ನಿಧನ ಇವರ ಕುಟುಂಬದವರಿಗೆ ಹಾಗೂ ಬಂಧು ಮಿತ್ರರಿಗೆ ಆಘಾತವನ್ನ ಉಂಟುಮಾಡಿದ್ದು, ಕಂಬನಿ ಮಿಡಿದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತರು ಪತ್ನಿ ಸಾವಿತ್ರಿ ಭಟ್, ಪುತ್ರಿಯರಾದ ಸ್ಮಿತಾ ಭಟ್ ಹಾಗೂ ಸ್ವಾತಿ ಭಟ್ ಅವರನ್ನು ಆಗಲಿದ್ದಾರೆ.
ನಿವೃತ್ತ ಜೀವನ ಸಾಗಿಸುತ್ತಿದ್ದ ಅವರು ನಿಧನದ ಕೊನೆಯ ಕ್ಷಣದವರೆಗೂ ಲವಲವಿಕೆಯಿಂದಲೇ ಇದ್ದರು . ಅವರು ಸಂಪಾದಿತ ಕೃತಿಯೊಂದು ಈ ತಿಂಗಳ ಆರಂಭದಲ್ಲಿ ಬಿಡುಗಡೆಗೊಂಡಿತ್ತು. ನಿನ್ನೆ ಕೂಡ ಅವರು ಉಪನಯನವೊಂದರಲ್ಲಿ ಭಾಗವಹಿಸಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇಂದು ನಸುಕಿನ ವೇಳೆ ಅವರು ಇಹಲೋಕ ತ್ಯಜಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ