Saturday, January 25, 2025
ಸುದ್ದಿ

ಚಿಕ್ಕಬಳ್ಳಾಪುರ : ಜಲಾಶಯದ ಗೋಡೆ ಹತ್ತಲು ಹೋಗಿ ಬಿದ್ದ ಯುವಕ-ಕಹಳೆ ನ್ಯೂಸ್

ಚಿಕ್ಕಬಳ್ಳಾಪುರ : ತುಂಬಿ ತುಳುಕುತ್ತಿದ್ದ ಜಲಾಶಯದ ಗೋಡೆಯನ್ನು ಏರಲು ಹೋಗಿ ಯುವಕನೊಬ್ಬ ಕೆಳಗೆ ಬಿದ್ದು ಗಾಯ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ಜಲಾಶಯದಲ್ಲಿ ನಡೆದಿದೆ

ರಾಜ್ಯದಲ್ಲಿ ಸುರಿಯುತ್ತಿರುವ ಬಾರೀ ಮಳೆಯಿಂದಾಗಿ ಹಲವು ಜಲಾಶಯಗಳು ತುಂಬಿದೆ. ಇದೇ ರೀತಿ ಶ್ರೀನಿವಾಸ ಸಾಗರ ಜಲಾಶಯ ಈಗ ತುಂಬಿದೆ. ಕೋಡಿ ಹರಿಯುತ್ತಿದೆ. ಇಲ್ಲಿಗೆ ಅಪಾರ ಸಂಖ್ಯೆಯಲ್ಲಿ ಇಲ್ಲಿಗೆ ಜನರು ಭೇಟಿ ನೀಡುತ್ತಾರೆ. ಆದರೆ ನೀರಿನಲ್ಲಿ ಆಟಕ್ಕೆ ಬರುವವರ ‘ಹುಚ್ಚಾಟ’ಗಳು ಸಹ ಹೆಚ್ಚಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀನಿವಾಸ ಸಾಗರದ ಕೋಡಿಯ ತಡೆಗೋಡೆಯ ಮೇಲೆ ಏರಲು ಯುವಕರು ತಾ ಮುಂದು ನಾ ಮುಂದು ಎಂದು ಮುಗಿ ಬೀಳುತ್ತಿದ್ದಾರೆ. ಹೀಗೆ ತಡೆಗೋಡೆಯ ಮೇಲೆ ಹತ್ತಿದ ಗೌರಿಬಿದನೂರು ತಾಲ್ಲೂಕು ಮೂಲದ ಯುವಕನೊಬ್ಬ ಏಕಾಏಕಿ ಬಿದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಈ ಬಗ್ಗೆ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು