ಬಂಟ್ವಾಳ : ಬಾಡಬೆಟ್ಟು ಎಂಬಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ದೈವ ಸಾನಿಧ್ಯಕ್ಕೆ ಭೂಮಿಪೂಜೆ ನೆರವೇರಿಸಿದ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು – ಕಹಳೆ ನ್ಯೂಸ್
ಬಂಟ್ವಾಳ: ಕೊಯಿಲ ಗ್ರಾಮದ ಬಾಡಬೆಟ್ಟು ಎಂಬಲ್ಲಿ ಪಾಳುಬಿದ್ದ ಪುರಾತನ ಹಿನ್ನೆಲೆ ಹೊಂದಿರುವ ದೈವ ಸಾನಿಧ್ಯ ಪುನರ್ ನಿರ್ಮಾಣಕ್ಕೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಶಿಲಾನ್ಯಾಸ ನೆರವೇರಿಸಿದರು.
ವೇದಮೂರ್ತಿ ರಾಜಾರಾಮ ಭಟ್ ವಿವಿಧ ಪೂಜಾ ವಿಧಿ ವಿಧಾನ ನೆರವೇರಿಸಿದರು. ಇಲ್ಲಿನ ಗ್ರಾಮಸ್ಥರು ಈಚೆಗೆ ನಡೆಸಿದ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ‘ಶ್ರೀ ಧೂಮಾವತಿ ಸಹಿತ ಮೈಸಂದಾಯ, ಕೊಡಮಣಿತ್ತಾಯ ಮತ್ತು ರಕ್ತೇಶ್ವರಿ ದೈವ ಸಾನಿಧ್ಯ’ ಪುನರ್ ನಿರ್ಮಾಣಗೊಳ್ಳಲಿದೆ ಎಂದರು.
ಟ್ರಸ್ಟಿ ಸುಂದರ ಭಂಡಾರಿ ರಾಯಿ, ರಾಜೇಶ ಜೈನ್ ಪಡ್ರಾಯಿ, ರಮಾನಾಥ ರಾಯಿ, ಗುಮ್ಮಣ್ಣ ಮೂಲ್ಯ, ಮೋಹನ ಮೂಲ್ಯ, ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಕಾರ್ಯದರ್ಶಿ ಡೊಂಬಯ ಬಿ.ಅರಳ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ, ಮಾಜಿ ಅಧ್ಯಕ್ಷ ಹರೀಶ ಆಚಾರ್ಯ, ಸದಸ್ಯರಾದ ಸಂತೋμï ಕುಮಾರ್ ಬೆಟ್ಟು, ಸಂತೋμï ಗೌಡ ಗೋಳಿದಬೆಟ್ಟು, ಬಿಲ್ಲವ ಸಂಘದ ವಲಯಾಧ್ಯಕ್ಷ ಶೇಖರ ಅಂಚನ್, ಪ್ರಮುಖರಾದ ಜಿ.ರಾಮಸುಂದರ ಗೌಡ, ವಸಂತ ಗೌಡ ಮುದ್ದಾಜೆ, ಉಮೇಶ ಅರಳ, ಕೆ.ಪರಮೇಶ್ವರ ಪೂಜಾರಿ, ರಾಜೇಶ ಗೋವಿಂದಬೆಟ್ಟು, ಶರತ್ ಕುಮಾರ್ ಕೊಯಿಲ ಮತ್ತಿತರರು ಇದ್ದರು.