‘ಮಳಲಿ ಮಸೀದಿಯ ಸ್ಥಳದಲ್ಲಿದೆ ಹಿಂದೂ ದೈವಿ ಶಕ್ತಿ’ : ತಾಂಬೂಲ ಪ್ರಶ್ನೆಯಲ್ಲಿ ದೇವ ಸಾನಿಧ್ಯದ ಸ್ಪೋಟಕ ಅಂಶ ಬಹಿರಂಗ – ಕಹಳೆ ನ್ಯೂಸ್
ಮಂಗಳೂರು : ಮಂಗಳೂರಿನ ಹೊರವಲಯದಲ್ಲಿರುವ ಮಳಲಿ ಮಸೀದಿಯಲ್ಲಿ ಹಿಂದೂ ದೇವಾಲಯ ಶೈಲಿಯಲ್ಲಿ ಕಟ್ಟಡ ಪತ್ತೆಯಾಗಿತ್ತು ಎಂಬ ವಿವಾದದ ಸಂಬAಧ ನಡೆಸಲಾದ ತಾಂಬೂಲ ಪ್ರಶ್ನೆಯಲ್ಲಿ ಈ ಸ್ಥಳದಲ್ಲಿ ಹಿಂದೂ ಧಾರ್ಮಿಕ ಸ್ಥಳವಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ.
ಶ್ರೀ ರಾಮಾಂಜನೇಯ ದೇಗುಲದಲ್ಲಿ ತಾಂಬೂಲ ಪ್ರಶ್ನೆ ನಡೆಸಿದ ಕೇರಳದ ಖ್ಯಾತ ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್, ಪೂರ್ವದಲ್ಲಿ ಇಲ್ಲೊಂದು ಗುರುಮಠವಿತ್ತು. ಮಳಲಿ ಮಸೀದಿ ಹಿಂದೆ ಒಂದು ಕಾಲದಲ್ಲಿ ಹಿಂದೂ ಧಾರ್ಮಿಕ ಸ್ಥಳವಾಗಿತ್ತು. ಆದರೆ ಯಾವದೋ ಒಂದು ವಿವಾದದಿಂದ ಇಲ್ಲಿದ್ದ ದೇಗುಲ ನಾಶವಾಗಿದ್ದು ಈ ಸ್ಥಳವನ್ನು ಜೀರ್ಣೋದ್ಧಾರಗೊಳಿಸುವುದು ಅವಶ್ಯಕ ಎಂದು ಹೇಳಿದ್ದಾರೆ. ಸದ್ಯಕ್ಕೆ ಈ ಭೂಮಿಯಲ್ಲಿರುವ ಯಾರಿಗೂ ನೆಮ್ಮದಿ ಇಲ್ಲದಾಗಿದೆ. ಆ ಸ್ಥಳ ಈಗ ದರ್ಗಾದಿಂದಾಗಿ ಅಶುದ್ಧವಾಗಿದ್ದರೂ ಈಗಲೂ ದೈವ ಕಲೆ ಇದೆ. ವಿವಾದಿತ ಜಗದ ಉತ್ತರಕ್ಕೆ ಮಹಾ ಪುರುಷ ಗುರುವೊಬ್ಬ ತಪಸ್ಸು ಮಾಡಿದ್ದಾನೆ. ಹಾಗಾಗಿ ಆ ಸ್ಥಳದ ಬಗ್ಗೆ ಮತ್ತಷ್ಟು ಹೆಚ್ಚಿನ ಮಾಹಿತಿ ತಿಳಿಯಲು ಅಷ್ಟಮಂಗಲ ಪ್ರಶ್ನೆ ನಡೆಸಬೇಕು ಎಂದು ತಂತ್ರಿಗಳು ಹೇಳಿದರು. ಈ ಮೂಲಕ ಹಿಂದೂಪರ ಸಂಘಟನೆಗಳ ವಾದಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಂತಾಗಿದೆ.