Sunday, January 26, 2025
ಸುದ್ದಿಸುಳ್ಯ

ಸುಳ್ಯ: ಬೇಂಗಮಲೆ ರಕ್ಷಿತಾರಣ್ಯದಲ್ಲಿ ನೇಣು ಬಿಗಿದು ವೃದ್ದ ಆತ್ಮಹತ್ಯೆ : ಪೊಲೀಸರಿಂದ ಸ್ಥಳ ಪರಿಶೀಲನೆ – ಕಹಳೆ ನ್ಯೂಸ್

ಸುಳ್ಯ: ಕಳಂಜದ ವೃದ್ಧರೊಬ್ಬರು ಬೇಂಗಮಲೆ ಕಾಡಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ 26 ರಂದು ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಾರಣೆ ಕೆಲಸ ಮಾಡುತ್ತಿದ್ದ ಕಳಂಜ ಗ್ರಾಮದ ನಾಗಪ್ಪ ಅಸೌಖ್ಯದಿಂದ ಬಳಲುತ್ತಿದ್ದು, ಕೆಲವು ದಿನಗಳ ಹಿಂದೆ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬೇಂಗಮಲೆ ರಸ್ತೆ ಬದಿಯ ರಕ್ಷಿತಾರಣ್ಯದಲ್ಲಿ ನೈಲಾನ್ ಹಗ್ಗದಿಂದ ಕುತ್ತಿಗೆಗೆ ಬಿಗಿದು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಮೃತ ವ್ಯಕ್ತಿಯ ಚಪ್ಪಲಿಗಳು, ತಾಂಬೂಲ ಪತ್ತೆಯಾಗಿದೆ.

ವಿಷಯ ತಿಳಿದು ಜನ ಸ್ಥಳಕ್ಕೆ ಜಮಾಯಿಸಿದ್ದು, ಬಳಿಕ ಪೆÇಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸುಳ್ಯದಿಂದ ಹಗ್ಗ ಖರೀದಿಸಿ ನಡೆದುಕೊಂಡೆ ಬೆಂಗಮಲೆಯತ್ತ ಹೋಗಿ ಅಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.