Recent Posts

Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಮೇ 29ರಂದು “ಶ್ರೀ ಗುರು ಸುಧೀಂದ್ರ ಕಲಾಮಂದಿರದಲ್ಲಿ” ಡಾ| ಎಂ.ಆರ್. ಶೆಣೈಯವರಿಗೆ ಸನ್ಮಾನ ಕಾರ್ಯಕ್ರಮ- ಕಹಳೆ ನ್ಯೂಸ್

ಉಪ್ಪಿನಂಗಡಿ: ಜಿ.ಎಸ್.ಬಿ. ಸಮಾಜ ಬಾಂಧವರು ಉಪ್ಪಿನಂಗಡಿ ಇವರ ವತಿಯಿಂದ ಮೇ.29ರಂದು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ “ಶ್ರೀ ಗುರು ಸುಧೀಂದ್ರ ಕಲಾಮಂದಿರ”ದಲ್ಲಿ ದಕ್ಷಿಣಕಾಶಿ ಬಿರುದಾಂಕಿತ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮತ್ತು ಶ್ರೀ ಲಕ್ಷ್ಮೀ ವೆಂಕಟರಮಣ ದೇವರ ಪವಿತ್ರ ಸಾನಿಧ್ಯವಿರುವ ಪುಣ್ಯ ಪಾವನ ಸಂಗಮ ಕ್ಷೇತ್ರದಲ್ಲಿ ಕಳೆದ 50 ಸಂವತ್ಸರಗಳಿ0ದ ಜನಾನುರಾಗಿ ವೈದ್ಯರಾಗಿ ಜನಸೇವೆ ಸಲ್ಲಿಸುತ್ತಾ, “ವೈದ್ಯೋ ನಾರಾಯಣೋ ಹರಿ” ಎಂಬAತೆ ಸರ್ವರನ್ನೂ ಗೌರವದಿಂದ ಆದರಿಸಿ, ನಾರಾಯಣನಂತೆ ಧನ್ವಂತರಿಯನ್ನು ಧಾರೆ ಎರೆದು ಸರ್ವರಿಗೂ ಅತ್ಯಂತ ಪ್ರಿಯರಾಗಿದ್ದು ಇದೀಗ 75ರ ಜನುಮದಿನ ಸಂಭ್ರಮದಲ್ಲಿರುವ ಡಾ. ಎಂ.ಆರ್. ಶೆಣೈ (MBBS, D.G.0.) ಇವರಿಗೆ ಹೃದಯಸ್ಪರ್ಶಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಉಪ್ಪಿನಂಗಡಿಯ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬಿ. ಗಣೇಶ್ ಶೆಣೈ ಅಧ್ಯಕ್ಷತೆಯನ್ನು ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವ ಸಾಹಿತಿ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಟಿ. ನಾರಾಯಣ ಭಟ್ ರಾಮಕುಂಜ ಇವರು ಅಭಿನಂದನಾ ಭಾಷಣ ಮಾಡಲಿದ್ದಾರೆ. ಅತಿಥಿಗಳಾಗಿ ಉಜಿರೆ ಪ್ರಭಾತ್ ಗ್ರೂಪ್‌ನ ಮಾಲಕರಾದ ಪ್ರಭಾತ್ ಭಟ್ ಇವರು ಭಾಗವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು