ಮೇ. 29ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ವತಿಯಿಂದ ಯಕ್ಷಧ್ರುವ ಪಟ್ಲ ಸಂಭ್ರಮ – 2022 – ಕಹಳೆ ನ್ಯೂಸ್
ಮಂಗಳೂರು : ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ಮೇ. 29ರಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ವತಿಯಿಂದ ಯಕ್ಷಧ್ರುವ ಪಟ್ಲ ಸಂಭ್ರಮ – 2022 ನಡೆಯಲಿದೆ. ಗೌರವಾಧ್ಯಕ್ಷರಾದ ಶ್ರೀ ಸದಾಶಿವ ಶೆಟ್ಟಿ ಕನ್ಯಾನ ಇವರ ಸಮರ್ಥ ಮಾಗದರ್ಶನದಲ್ಲಿ ಹಾಗೂ ಶ್ರೀ ಶಶಿಧರ್ ಬಿ. ಶೆಟ್ಟಿ ಬರೋಡಾ ಇವರ ಸಂಭ್ರಮಾಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಬೆಳಿಗ್ಗೆ 8.00ಗಂಟೆಗೆ ಚೌಕಿ ಪೂಜೆ ನಡೆದು ಬಳಿಕ ರಾಕೇಶ್ ರೈ ಅಡ್ಕ ನಿರ್ದೇಶನದಲ್ಲಿ ಪೂರ್ವರಂಗ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಬೆಳಿಗ್ಗೆ 9.00ರಿಂದ ಚೆಂಡೆ ಜುಗಲ್ ಬಂದಿ ಬಳಿಕ ಉದ್ಘಾಟನಾ ಸಮಾರಂಭ ಜರುಗಲಿದೆ. ಉದ್ಘಾಟನಾ ಸಮಾರಂಭದಲ್ಲಿ ಕೊಂಡೆವೂರು ಕ್ಷೇತ್ರದ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ದಿವ್ಯ ಉಪಸ್ಥಿತಿ ಪಡೆಯಲಿದ್ದು, ಮುಂಬೈ ಹೇರಂಬ ಕೆಮಿಕಲ್ ಇಂಡಸ್ಟ್ರೀಸ್ ಲಿ. ನ ನಿರ್ದೇಶಕರಾದ ಕೂಳೂರು ಸದಾನಂದ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಲಿದ್ದಾರೆ. ಗುಜರಾತ್ ನ ಉದ್ಯಮಿ ಶಶಿಧರ ಬಿ. ಶೆಟ್ಟಿ ಬರೋಡ, ಸಂಭ್ರಮಾಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಇನ್ನು ಪಟ್ಲ ಸಂಭ್ರಮದ ಉದ್ಘಾಟನೆಯನ್ನು CA , ದಿವಾಕರ್ Director Finance & H.R.Exclusive Network Sales India Pvt.Ltd. ನೇರವೇರಿಸಲಿದ್ದು, ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕರಾದ ಡಾ| ಕೃಷ್ಣ ಪ್ರಸಾದ್ ಕೂಡ್ಲು ಆರೋಗ್ಯ ಶಿಬಿರ ಉದ್ಘಾಟಿಸಲಿದ್ದಾರೆ. ಪ್ರಧಾನ ಅಭ್ಯಾಗತರಾಗಿ ಮೂಡಬಿದ್ರೆ ಆಳ್ವಾಸ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಡಾ| ಎಂ.ಮೋಹನ್ ಆಳ್ವ , ಮೈಸೂರು ಜ್ಞಾನಸರೋವರ ಅಂತರಾಷ್ಟ್ರೀಯ ವಿದ್ಯಾಸಂಸ್ಥೆಯ ಚೆಯರ್ ಮೆನ್ ಡಾ| ಸುಧಾಕರ ಶೆಟ್ಟಿ, ಮಾಜಿ ಸಚಿವರಾದ ಕೃಷ್ಣ ಪಾಲೇಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಅನಿಲ್ ಕುಮಾರ್ ಎಸ್.ಎಸ್, ಯೋಗೀಂದ್ರ ಭಟ್ ಉಳಿ, ರವಿಶಂಕರ ಶೆಟ್ಟಿ ಬಡಾಜೆ, ಡಾ| ರವಿ ಶೆಟ್ಟಿ ಮೂಡಂಬೈಲು, ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರ ಪಾವಂಜೆಯ ಆಡಳಿತ ಮೊಕ್ತೇಸರರಾದ ಶಶೀಂದ್ರ ಕುಮಾರ್, ಜಯರಾಮ ಶೇಖ, ಬಂಟರ ಸಂಘ ಸುರತ್ಕಲ್‌ನ ಅಧ್ಯಕ್ಷರಾದ ಸುಧಾಕರ ಪೂಂಜಾ, ಅಡ್ಯಾರ್ ಮಾಧವ ನಾÊಕ್, ಉದ್ಯಮಿ ವಿಜಯಕುಮಾರ್ ಅಮೀನ್ ಭಾಗವಹಿಸಲಿದ್ದಾರೆ.
ಬೆಳಿಗ್ಗೆ 10ರಿಂದ 2ರವರೆಗೆ ಟ್ರಸ್ಟಿನ ಸದಸ್ಯರು ಹಾಗೂ ಯಕ್ಷಾಭಿಮಾನಿಗಳಿಂದ ರಕ್ತದಾನ ಶಿಬಿರ ನಡೆಯಲಿದ್ದು, ಕ್ಷೇಮ ಮಂಗಳೂರುನ ಕುಲಪತಿಗಳಾದ ಡಾ| ಸತೀಶ್ ಭಂಡಾರಿ ರಕ್ತದಾನ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಯಕ್ಷಗಾನ ಕಲಾವಿದರಿಗೆ ಹಾಗೂ ಅವರ ಮನೆಯವರಿಗೆ ಉಚಿತ ವೈದಕೀಯ ತಪಾಸಣೆ, ಉಚಿತ ಔಷಧ ವಿತರಣೆ ನಡೆಯಲಿದೆ.
ಬೆಳಿಗ್ಗೆ 11 ರಿಂದ 1.00ರವರೆಗೆ ಸಪ್ತಸ್ವರ ಯಕ್ಷಗಾನ ವೈಭವ ಹಾಗೂ ಮಧ್ಯಾಹ್ನ 1 ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಬಳಿಕ ಮಧ್ಯಾಹ್ನ 2 ರಿಂದ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ತಾಳಮದ್ದಳೆ ನಡೆಯಲಿದ್ದು, ಸಂಜೆ 4.00ರಿಂದ ಮುರಾಸುರ ವಧೆ ಎಂಬ ಮಹಿಳಾ ಯಕ್ಷಗಾನ ನಡೆಯಲಿದೆ. ತದನಂತರ ಸನಾತನ ನಾಟ್ಯಾಲಯ ಮಂಗಳೂರು ಪ್ರಸ್ತುತ ಪಡಿಸುವ “ಸನಾತನ ನೃತ್ಯಾಂಜಲಿ” ನಡೆಯಲಿದೆ.
ಬಳಿಕ ನಡೆಯುವ ಸಮಾರೋಪ ಸಮಾರಂಭದಲ್ಲಿ ಯಕ್ಷಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಗೆ ಪಟ್ಲ ಪ್ರಶಸ್ತಿ – 2022 ಪ್ರಶಸ್ತಿ ನೀಡಿ ಗೌರವಿಸಲಿದ್ದು, ಟ್ರಸ್ಟ್ ನ ಸಾಧಕ ಮಹಾಪೋಷಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಹಾಗೂ ಯಕ್ಷಧ್ರುವ ಕಲಾ ಗೌರವ 2022 ನೀಡಿ ಪ್ರೋತ್ಸಾಹಿಸಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹಾಗೂ ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದು, ಜಿಲ್ಲೆಯ ಎಲ್ಲಾ ಶಾಸಕರುಗಳಿ ವೇದಿಕೆ ಹಂಚಿಕೊಳ್ಳಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ರಾತ್ರಿ 8ರಿಂದ ತೆಂಕು ಹಾಗೂ ಬಡಗು ಸುಪ್ರಸಿದ್ಧ ಕಲಾವಿದರಿಂದ ಪ್ರಚಂಡ ಕೂಡಾಟ- ಶ್ರೀ ರಾಮಾಂಜನೇಯ ಹಾಗೂ ಅಗ್ರಪೂಜೆ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.