Recent Posts

Monday, January 20, 2025
ಸಿನಿಮಾಸುದ್ದಿ

ಮೂರೂ ಮಕ್ಕಳ ಸಮ್ಮುಖದಲ್ಲಿ ಎರಡನೇ ಬಾರಿ ಹಸೆಮಣೆ ಏರಿದ ಖ್ಯಾತ ಬಾಲಿವುಡ್ ಸಿಂಗರ್ ಕನ್ನಿಕಾ ಕಪೂರ್ – ಕಹಳೆ ನ್ಯೂಸ್

ಬಾಲಿವುಡ್ ನ ಖ್ಯಾತ ಗಾಯಕಿ ಸೂಪರ್ ಹಿಟ್ ಹಾಡುಗಳನ್ನೂ ಹಾಡಿದ ಕನ್ನಿಕಾ ಕಪೂರ್ ತನ್ನ ಮೊದಲ ಪತಿಗೆ ಡಿವೋರ್ಸ್ ನೀಡಿದ ಹತ್ತು ವರ್ಷಗಳ ನಂತರ ಮತ್ತೆ ತಮ್ಮ ಮಕ್ಕಳ ಸಮ್ಮುಖದಲ್ಲೇ ಹಸೆಮಣೆ ಏರಿದ್ದಾರೆ.

2012ರಲ್ಲಿ ಕನಿಕಾ, ರಾಜ್ ವಿಚ್ಛೇದನ ಪಡೆದ ಬಳಿಕ ಲಂಡನ್ ನಲ್ಲೆ ನೆಲೆಸಿದ್ದ ಕನ್ನಿಕಾ ಮೂವರು ಮಕ್ಕಳನ್ನು ತಾವೇ ಬೆಳೆಸಿದರು. ಆಗಾಗ ಲಕ್ನೋದಲ್ಲಿರುವ ತಮ್ಮ ತಂದೆ ತಾಯಿಯರನ್ನು ನೋಡಲು ಭಾರತಕ್ಕೆ ಬರುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಮಕ್ಕಳ ಸಮ್ಮತಿ ಪಡೆದು, ಗುರುಹಿರಿಯರ ಸಮ್ಮುಖದಲ್ಲಿ ಉದ್ಯಮಿ ಗೌತಮ್ ಹತಿರಮನಿನಿ ಜೊತೆ ಹಸೆಮಣೆ ಏರಿದ್ದಾರೆ. ಅಷ್ಟೇ ಅಲ್ಲ, ಕನ್ನಿಕಾ ಅವರ ಮದುವೆಯ ಪ್ರತಿಯೊಂದು ಶಾಸ್ತ್ರದಲ್ಲೂ ಕನ್ನಿಕಾ ಮಕ್ಕಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಇನ್ನು ಕನಿಕಾ ಸಪ್ತಪದಿ ತುಳಿಯುವ ವೇಳೆ ಕನ್ನಿಕಾ ಹೆಣ್ಣು ಮಕ್ಕಳು ತಾಯಿಯ ಲೆಹೆಂಗಾ ಅವರಿಗೆ ನಡೆಯಲು ಕಷ್ಟವಾಗದಂತೆ ನೋಡಿಕೊಂಡಿದ್ದರು. ಇನ್ನು ತಮ್ಮ ಪತಿ ಗೌತಮ್ ಬಗ್ಗೆ ಚೆಂದದ ಸಾಲುಗಳ ಜೊತೆ ಮದುವೆಯ ಫೋಟೋ ಪೋಸ್ಟ್ ಮಾಡಿದ್ದಾರೆ. “ನಿಮ್ಮ ಬದುಕಲ್ಲೂ ಮ್ಯಾಜಿಕ್ ನಡೆಯುತ್ತದೆ, ಅದನ್ನು ನಂಬೋದನ್ನು ನೀವು ನಿಲ್ಲಿಸಬೇಡಿ. ಒಂದು ದಿನ ಕನಸುಗಳು ಈಡೇರುತ್ತವೆ. ನನ್ನ ರಾಜನನ್ನು ನಾನು ಹುಡುಕಿಕೊಂಡೆ. ನಿನ್ನ ಜೊತೆ ಹೊಸ ಜರ್ನಿ ಮಾಡಲು, ನಿನ್ನ ಜೊತೆ ಜೊತೆ ಬೆಳೆಯಲು, ಕಲಿಯಲು, ನಿನ್ನ ಜೊತೆಗೆ ನಗಲು ಬಹಳ ಉತ್ಸುಕತೆಯಿಂದಿರುವೆ. ನಮ್ಮಿಬ್ಬರನ್ನು ಭೇಟಿ ಮಾಡಿಸಿದ ಜಗತ್ತಿಗೆ ಧನ್ಯವಾದಗಳು. ನನ್ನ ಸ್ನೇಹಿತ, ನನ್ನ ಸಂಗಾತಿ, ನನ್ನ ಹೀರೋ” ಎಂದು ಪತಿ ಗೌತಮ್ ಕುರಿತು ಕನ್ನಿಕಾ ಕಪೂರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಲಂಡನ್ ನ ಪಂಚತಾರಾ ಹೋಟೆಲ್ ನಲ್ಲಿ ನಡೆದ ಈ ಮದುವೆಗೆ ಖ್ಯಾತ ಸಿಂಗರ್ ಮನ್ಮಿತ್ ಸಿಂಗ್, ರಾಮ್ ಚರಣ್ ಪತ್ನಿ ಉಪಾಸನ ಸೇರಿ ಅನೇಕ ಗಣ್ಯರು ಆಗಮಿಸಿದ್ದರು.