Recent Posts

Sunday, January 19, 2025
ಸುದ್ದಿ

ವಿಚಿತ್ರ ಮದುವೆ ಆಗಿವಿಶಿಷ್ಟ ದಾಖಲೆ ಬರೆದ ಪುತ್ತೂರಿನ ಸಂಟ್ಯಾರ್ ದಂಪತಿ – ಕಹಳೆ ನ್ಯೂಸ್

ಪುತ್ತೂರು: ಎಲ್ಲರಿಗೂ ತಮ್ಮ ಮದುವೆ ವಿಶಿಷ್ಟವಾಗಿರಬೇಕು ಎಂಬ ಬಯಕೆ ಇರುತ್ತದೆ. ಇದು ಮನುಷ್ಯ ಸಹಜ ಕೂಡ. ಕೆಲವರು ಅಂತರಿಕ್ಷದಲ್ಲಿ, ಇನ್ನು ಕೆಲವರು ಭೂಗರ್ಭದಲ್ಲಿ ಇನ್ನು ಕೆಲವರು ಮತ್ತೆಲ್ಲೋ ವಿಚಿತ್ರ ರೀತಿಯಲ್ಲಿ ಮದುವೆಯಾಗಿ ದಾಖಲೆ ಬರೆದಿದ್ದಾರೆ.


ಈಗ ಪುತ್ತೂರಿನ ಸಂಟ್ಯಾರ್‌ನಲ್ಲೂ ಒಂದು ವಿಶಿಷ್ಟ ಮದುವೆ ನೆರೆವೇರಿದೆ. ಪುತ್ತೂರಿನ ಸಂಟ್ಯಾರ್ ನಿವಾಸಿ ಚೇತನ್ ತನ್ನ ವಿವಾಹವನ್ನು ಜೆಸಿಬಿಯಲ್ಲಿ ನೆರವೇರಿಸಿ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚೇತನ್ ಹಲವು ವರ್ಷಗಳಿಂದ ಜೆಸಿಬಿ ಆಪರೇಟರ್. ತನ್ನ ವಿವಾಹ ವಿಶಿಷ್ಟವಾಗಿ ನೆರವೇರಬೇಕು ಎಂಬ ಕನಸು ಕಂಡಿದ್ದ. ಇದನ್ನು ಜೆಸಿಬಿಯಲ್ಲೇ ನಡೆಸಿ ತನ್ನ ಕನಸನ್ನು ನನಸಾಗಿಸಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿವಾಹದ ಬಳಿಕ ಸುಮಾರು ಎರಡು ಕಿ ಮೀ ಜೆಸಿಬಿ ಯಂತ್ರದಲ್ಲೆ ದಿಬ್ಬಣದಲ್ಲಿ ತೆರಳಿ ಸುದ್ದಿ ಮಾಡಿದ್ದಾನೆ. ಮಾಣಿ – ಮೈಸೂರು ರಾ.ಹೆದ್ದಾರಿಯಲ್ಲೆ ದಿಬ್ಬಣ ಸಂಚಾರ ನಡೆದಿದ್ದು, ನೋಡಿದವರು ಅಚ್ಚರಿಯಿಂದ ಮೂಗಿಗೆ ಬೆರಳಿಟ್ಟಿದ್ದಾರೆ.

ಅಂತೂ ನಮ್ಮ ಪುತ್ತೂರಿನ ಪೋರನೂ ವಿಶಿಷ್ಟ ಮದುವೆಯಾಗುವ ಮೂಲಕ ದಾಖಲೆ ಬರೆದು ಅಚ್ಚರಿ ಮೂಡಿಸಿದ್ದಾನೆ.