Recent Posts

Monday, January 20, 2025
ಪುತ್ತೂರುಸುದ್ದಿ

ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ಜಿಲ್ಲೆ ವತಿಯಿಂದ ಸಂಗ್ರಹಿಸಿದ ಗೋರಕ್ಷಾ ನಿಧಿಯನ್ನು ಗೋಶಾಲೆಗಳಿಗೆ ವಿತರಣೆ-ಕಹಳೆ ನ್ಯೂಸ್

ಗೋವುಗಳನ್ನು, ಗೋವಂಶವನ್ನು ರಕ್ಷಿಸುವ ಸಲುವಾಗಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಲವಾರು ವರ್ಷಗಳಿಂದ ಹೋರಾಟಾತ್ಮಕ ಹಾಗೂ ಕ್ರಿಯಾತ್ಮಕ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದೆ.

ಇತ್ತೀಚಿನ ದಿನಗಳಲ್ಲಿ ಗೋವುಗಳನ್ನು ರಕ್ಷಿಸುವ ಗೋಶಾಲೆಗಳಿಗೆ ಮೇವು ಹಾಗೂ ಇನ್ನಿತರ ಅರ್ಥಿಕ ಕೊರತೆಯಿಂದ ಗೋಶಾಲೆಗಳನ್ನು ನಡೆಸುವುದು ತೀವ್ರ ಕಷ್ಟಕರವಾಗಿದ್ದು.
ಇದನ್ನು ಮನಗಂಡ ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ಜಿಲ್ಲೆ ಹಾಗೂ ಪುತ್ತೂರು ಪ್ರಖಂಡದ ವತಿಯಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಜಾತ್ರೋತ್ಸವ ಸಂದರ್ಭದಲ್ಲಿ ಗೋರಕ್ಷಾ ನಿಧಿ ಅಭಿಯಾನ ಮಾಡಲಾಯಿತು.
ಇದರಲ್ಲಿ ಹಿಂದೂ ಬಾಂಧವರಿಂದ,ಗೋ ಪ್ರೇಮಿಗಳ ಸಹಕಾರದಿಂದ ಒಟ್ಟು 1,16,100 ರೂಪಾಯಿ ಸಂಗ್ರಹವಾಗಿತ್ತು.
ಇದನ್ನು ಗೋವುಗಳನ್ನು ರಕ್ಷಿಸುತ್ತಿರುವ ಚೆನ್ನರಾಯಪಟ್ಟಣದ ಶ್ರೇಯಶ್ ಇಂಟರ್ನ್ಯಾಶ್ನಲ್ ಗೋಶಾಲೆ,ಮಂಗಳೂರಿನ ಪಜೀರು ಗೋವನಿತಾಶ್ರಯ ಗೋಶಾಲೆ,ಬೆಳ್ತಂಗಡಿಯ ಕಳೆಂಜ ನಂದಗೋಕುಲ ಗೋಶಾಲೆಗೆ ಹಾಗೂ ಗೋಶಾಲಾ ನಿರ್ಮಾಣ ಆರಂಭಿಕ ಮೊತ್ತದ ರೂಪದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಸಮಿತಿಗೆ ನೀಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು