‘ರಜೆಯ ವಿಹಾರ – ಚಿಣ್ಣರ ವಿಚಾರ’ : ಮುಳಿಯ ಜ್ಯುವೆಲ್ಸ್ ನಿಂದ ಮಕ್ಕಳಿಗಾಗಿ ಪ್ರಬಂಧ ಸ್ಪರ್ಧೆ- ಕಹಳೆ ನ್ಯೂಸ್
ಪುತ್ತೂರು : ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡಲು ಪುತ್ತೂರಿನ ಖ್ಯಾತ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್ 10 ರಿಂದ 15 ವರ್ಷದೊಳಗಿನ ಮಕ್ಕಳಿಗಾಗಿ ‘ರಜೆಯ ವಿಹಾರ – ಚಿಣ್ಣರ ವಿಚಾರ’ ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ತಮ್ಮ ಬೇಸಿಗೆ ರಜೆಯನ್ನು ಹೇಗೆ ಕಳೆದರು ಎಂಬುದರ ಬಗ್ಗೆ ಕನ್ನಡದಲ್ಲಿ ಪ್ರಬಂಧಗಳನ್ನು ಬರೆದು 9353030916 ಗೆ ಮೇ 31 ರ ಒಳಗೆ ಕಳುಹಿಸಿಕೊಡಬೇಕು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರು ಆಕರ್ಷಕ ಬಹುಮಾನಗಳನ್ನೂ ಗೆಲ್ಲಬಹುದು.
ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ 9353030916 ಸಂಖ್ಯೆಗೆ ವಾಟ್ಸಪ್ ಮೂಲಕ ಸಂಪರ್ಕಿಸಬಹುದು ಎಂದು ಮುಳಿಯ ಜ್ಯುವೆಲ್ಸ್ ಪ್ರಕಟಣೆ ತಿಳಿಸಿದೆ.
ಸ್ಪರ್ಧೆಯ ನಿಬಂಧನೆಗಳು ಹೀಗಿವೆ :
• ಪ್ರಬಂಧವು 1500 ಪದಗಳ ಒಳಗಿರಬೇಕು.
• ಪ್ರಬಂಧವನ್ನು ಪೆನ್ನಿನಿಂದ ಬಿಳಿ ಹಾಳೆಯ ಮೇಲೆ ಬರೆಯಬೇಕು.
• ಸ್ಪರ್ಧಿಯು ತಮ್ಮ ಹೆಸರು, ತರಗತಿ ಮತ್ತು ಶಾಲೆಯ ಹೆಸರನ್ನು ಕಾಗದದ ಮೇಲಿನ ಬಲ ತುದಿಯಲ್ಲಿ ಬರೆಯಬೇಕು.
• ಸ್ಪರ್ಧಿಯು ಪ್ರಬಂಧವನ್ನು ಮತ್ತು ಶಾಲಾ ಗುರುತಿನ ಚೀಟಿಯ ಸ್ಪಷ್ಟ ಛಾಯಾಚಿತ್ರವನ್ನು ಮೇಲೆ ಸೂಚಿಸಿದ ವಾಟ್ಸಪ್ ಸಂಖ್ಯೆಗೆ ಕಳುಹಿಸಬೇಕು.
• ತೀರ್ಪುಗಾರರು ಸ್ಪರ್ಧಿಯ ಪ್ರಬಂಧವನ್ನು ಅದರ ವಾಕ್ಯ ರಚನೆ ಮತ್ತು ಸೃಜನಶೀಲತೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡುತ್ತಾರೆ.
ಚಿನ್ನರು ಕೂಡಲೇ ಸೂಚಿಸಿದ ವಿಷಯದಲ್ಲಿ ಪ್ರಬಂಧವನ್ನು ಬರೆದ ಕಳುಹಿಸಿ ತಮ್ಮ ಪ್ರತಿಭೆಯ ಅನಾವರಣಕ್ಕೆ ಅವಕಾಶವನ್ನು ಪಡೆದುಕೊಳ್ಳಬಹುದು. ಜತೆಗೆ ಬಹುಮಾನ ಗೆಲ್ಲುವ ಅವಕಾಶವನ್ನೂ ಸದುಪಯೋಗ ಮಾಡಿಕೊಳ್ಳಬಹುದು.