ಶ್ರೀ ಶಾರದಾಂಭ ಸಮಾಜ ನಿವೃತ್ತ ಉದ್ಯೋಗಿಗಳ ಸಂಘ ಬಪ್ಪಳಿಗೆ ಮತ್ತು ಜಸ್ಟೀಸ್ ಕೆ. ಎಸ್. ಹೆಗ್ಡೆ ಆಸ್ಪತ್ರೆ ದೇರಳ ಕಟ್ಟೆ ಸಹಯೋಗದೊಂದಿಗೆ ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ – ಕಹಳೆ ನ್ಯೂಸ್
ಪುತ್ತೂರು : ಬಪ್ಪಳಿಗೆ ಶ್ರೀ ಶಾರದಾಂಭ ಸಮಾಜ ನಿವೃತ್ತ ಉದ್ಯೋಗಿಗಳ ಸಂಘ ಮತ್ತು ಮಂಗಳೂರಿನ ಜಸ್ಟೀಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಇದರ ಸಹಯೋಗದೊಂದಿಗೆ ಮೆ.29 ರಂದು ಪುತ್ತೂರಿನ ಲಯನ್ಸ್ ಸೇವಾ ಮಂದಿರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಯಶಸ್ವಿಯಾಗಿ ನೇರವೇರಿತು.
ಶ್ರೀ ಶಾರದಾಂಭ ಸಮಾಜ ನಿವೃತ್ತ ಉದ್ಯೋಗಿಗಳ ಸಂಘದ ಅಧ್ಯಕ್ಷರಾದ ಶ್ರೀ ಆನಂದ ನಾಯ್ಕ್ ಪಜೀರ್ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯು ಶ್ರೀಮತಿ ಆಶಾಲತಾ ಪುತ್ತೂರು ಇವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು.
ಸಂಘವು ನಡೆದು ಬಂದ ದಾರಿ ಚಟುವಟಿಕೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಶಿವಣ್ಣ ನಾಯ್ಕ ಖಜಾಂಚಿಯವರು ಮಾತನಾಡಿದರು.
ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯ ಅತಿಥಿಗಳಾದ ಡಾ| ಶ್ರೀ ಪ್ರಭಾಕರ ನಾಯಕ್ ರವರು ಇಂದಿನ ದಿನಗಳಲ್ಲಿ ಆರೋಗ್ಯ ತಪಾಸಣೆಯ ಅಗತ್ಯತೆ ಬಗ್ಗೆ ವಿವರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಜಸ್ಟೀಸ್ ಕೆ. ಎಸ್. ಹೆಗ್ಡೆ ಆಸ್ಪತ್ರೆ ದೇರಳ ಕಟ್ಟೆ ಇದರ ಸಾರ್ವಜನಿಕ ಸಂಪರ್ಕ ವಿಭಾಗದ ವ್ಯವಸ್ಥಾಪಕರಾದ ಶ್ರೀ ಹೇಮಂತ ಶೆಟ್ಟಿ ಅವರು ಆರೋಗ್ಯ ಶಿಬಿರದ ಪ್ರಯೋಜನಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ಕೇಶವ ನಾಯಕ್ ಸಾಲ್ಮರರವರು ಉಪಸ್ಥಿತರಿದ್ದರು. ಸಂಘದ ಜೊತೆ ಕಾರ್ಯದರ್ಶಿ ಶ್ರೀ ರವೀಂದ್ರನಾಥ ನಾಯ್ಕ ಪಡೀಲು ಪುತ್ತೂರು ಇವರು ಧನ್ಯವಾದಗಳನ್ನು ಸಮರ್ಪಿಸಿ, ಪ್ರಧಾನ ಕಾರ್ಯದರ್ಶಿಯವರಾದ ಶ್ರೀ. ಕೆ. ಪುರುಷೋತ್ತಮ ನಾಯ್ಕರವರು ಕಾರ್ಯಕ್ರಮ ನಿರೂಪಿಸಿದರು.