Monday, January 20, 2025
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ (ರಿ.) ವತಿಯಿಂದ ಅಲೆಕ್ಕಿ-ಮುಗೇರಡ್ಕದಲ್ಲಿ ಇಂದು ನಡೆದ ಶ್ರೀ ರಾಮ ಶಿಶುಮಂದಿರದ ಪ್ರವೇಶೋತ್ಸವ ಕಾರ್ಯಕ್ರಮ – ಕಹಳೆ ನ್ಯೂಸ್

ಬೆಳ್ತಂಗಡಿ: ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ (ರಿ.) ವತಿಯಿಂದ ಅಲೆಕ್ಕಿ-ಮುಗೇರಡ್ಕದಲ್ಲಿ ಇಂದು ಶ್ರೀ ರಾಮ ಶಿಶುಮಂದಿರದ ಪ್ರವೇಶೋತ್ಸವ ಕಾರ್ಯಕ್ರಮ ನಡೆಯಿತು.

ಅಲೆಕ್ಕಿ ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ (ರಿ.)ನ ಗೌರವಾಧ್ಯಕ್ಷರಾದ ಉದಯ ಭಟ್ ಕೊಳಬ್ಬೆ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಶ್ರೀ ರಾಮ ಶಾಲೆಯ ಸಂಚಾಲಕರಾದ ಯು. ಜಿ. ರಾಧಾ ದೀಪ ಪ್ರಜ್ವಲಿಸುವುದರ ಮೂಲಕ ಉದ್ಘಾಟಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ಅಧ್ಯಕ್ಷರಾದ ರವೀಂದ್ರ, ವಿದ್ಯಾಭಾರತಿ ಕ್ಷತ್ರಿಯ ನೈತಿಕ ಆಧ್ಯಾತ್ಮಿಕ ಶಿಕ್ಷಣ ಪ್ರಮುಖ್ ವೆಂಕಟರಮಣ್ ರಾವ್ ಮನ್ಕುಡೆ, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ ಜನಾರ್ದನ ಗೌಡ, ಬಂದಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿರುವ ಮೋಹನ್ ಬಂಗೇರ, ಮುರ ಶ್ರೀ ರಾಮ ಸೇವಾ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಯಾಗಿರುವ ಜಯಪ್ರಸಾದ್ ಗೌಡ ಕಡಮ್ಮಾಜೆ, ಮನೋಹರ ಗೌಡ ಅಂತರ ಆಡಳಿತ ಮೊಕ್ತೇಸರರು, ಮುಗೇರಡ್ಕ, ಇಳಂತಿಲ ಶ್ರೀ ಕೇಶವ ಶಿಶುಮಂದಿರದ ಕಾರ್ಯದರ್ಶಿಯಾದ ರವಿ ಇಳಂತಿಲ, ಅಲೆಕ್ಕಿ ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ (ರಿ.)ನ ಅಧ್ಯಕ್ಷರಾದ ಪ್ರವೀಣ್ ಗೌಡ ಮತ್ತಿಲಾರು , ಬಾಲಕೃಷ್ಣ ಗೌಡ ಗ್ರಾಮ ಪಂಚಾಯತ್ ಸದಸ್ಯರು ಬಂದಾರು, ಗಂಗಾಧರ ಪೂಜಾರಿ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಬಂದಾರು, ಶ್ರೀ ರಾಮ ಶಿಶುಮಂದಿರದ ಎಲ್ಲಾ ಆಡಳಿತ ಮಂಡಳಿ ಸದಸ್ಯರು ಹಾಗೂ ಊರಿನ ಅನೇಕ ಗಣ್ಯರು ಭಾಗವಹಿಸಿದರು.