Recent Posts

Sunday, January 19, 2025
ಕುಂದಾಪುರಸುದ್ದಿ

ಲವ್ ಜಿಹಾದ್ : ಶಿಲ್ಪಾಳ ಸಾವು ಆತ್ಮಹತ್ಯೆ ಅಲ್ಲ. ಇದೊಂದು ವ್ಯವಸ್ಥಿತವಾದ ಕೊಲೆ : ಶಿಲ್ಪಾ ಸಾವಿನ ನ್ಯಾಯಕ್ಕಾಗಿ ಆಗ್ರಹಿಸಿ ಕುಂದಾಪುರದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಜನಜಾಗೃತಿ ಸಭೆ –ಕಹಳೆ ನ್ಯೂಸ್

ಉಡುಪಿ: ಶಿಲ್ಪಾಳ ಸಾವು ಆತ್ಮಹತ್ಯೆ ಅಲ್ಲ. ಇದೊಂದು ವ್ಯವಸ್ಥಿತವಾದ ಕೊಲೆ. ಇಂದು ಶಿಲ್ಪಾ ದೇವಾಡಿಗ ಎಂದು ಸುಮ್ಮನಾದರೇ ನಾಳೆ ಲವ್ ಜಿಹಾದ್ ನಮ್ಮ ಮನೆಯ ಅಂಗಳಕ್ಕೆ ಬರುತ್ತದೆ. ಈ ರೀತಿಯ ದೌರ್ಜನ್ಯ ನಡೆಯಬಾರದು ಎಂದಾದರೆ ಹಿಂದೂ ಸಮಾಜ ಎಚ್ಚೆತ್ತುಕೊಳ್ಳಲೇಬೇಕು. ಖಂಡಿತವಾಗಿಯೂ ಈ ಮೌನ ಕುಂದಾಪುರಕ್ಕೆ ಒಳ್ಳೇಯದಲ್ಲ. ಇಂತಹ ಗಂಭೀರ ಪ್ರಕರಣದ ವಿರುದ್ದ ಕುಂದಾಪುರದ ಹಿಂದೂ ಸಮಾಜ ಸೆಟೆದು ನಿಂತು ರಸ್ತೆಗಿಳಿದು ಪ್ರತಿಭಟಿಸಬೇಕಿತ್ತು ಎಂದು ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‍ವೆಲ್ ಹೇಳಿದರು.

ಮಂಗಳವಾರ ಸಂಜೆ ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕುಂದಾಪುರ ಪ್ರಖಂಡ ವತಿಯಿಂದ ಲವ್ ಜಿಹಾದ್ ಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಉಪ್ಪಿನಕುದ್ರು ಯುವತಿ ಶಿಲ್ಪಾ ಸಾವಿನ ನ್ಯಾಯಕ್ಕಾಗಿ ಆಗ್ರಹಿಸಿ ನಡೆದ ಬೃಹತ್ ಪ್ರತಿಭಟನೆ ಹಾಗೂ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಭಯೋತ್ಪಾದಕ ಜಿಹಾದಿ ಅಜೀಜ್‍ನ ಮೋಸದ ಷಡ್ಯಂತರಕ್ಕೆ ಹಿಂದೂ ಯುವತಿ ಶಿಲ್ಪಾ ಬಲಿಯಾಗಿರುವುದು ಖೇದಕರ. ಇμÉ್ಟೂಂದು ದೊಡ್ಡ ಘಟನೆ ನಡೆದಿದ್ದರೂ ಕುಂದಾಪುರ ಶಾಂತವಾಗಿದೆ. ಓರ್ವ ಹಿಂದೂ ಹೆಣ್ಣು ಮಗಳು ಮುಸ್ಲಿಂ ಯುವಕನ ದೌರ್ಜನ್ಯಕ್ಕೆ ಕುಗ್ಗಿ ಸಾವನ್ನಪ್ಪಿದ್ದಾಳೆ ಎಂದಾದರೂ ಯಾರೂ ಮಾತನಾಡದೇ ಇರುವುದು ಖೇದಕರ. ಕಳೆದ ಆರು ವರ್ಷಗಳಿಂದ ಆರೋಪಿ ಪ್ರೇಮದ ಹೆಸರಲ್ಲಿ ಅಶ್ಲೀಲ ಫೆÇೀಟೊಗಳನ್ನು ತೆಗೆದು ಶಿಲ್ಪಾಳನ್ನು ಬ್ಲಾಕ್‍ಮೇಲ್ ಮಾಡಿ ಅವಳನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ದಾನೆ. ಕಳೆದ 20 ವರ್ಷಗಳಿಂದ ಹಿಂದೂ ಸಂಘಟನೆಗಳು ಲವ್ ಜಿಹಾದ್ ವಿರುದ್ದ ಸಾಕಷ್ಟು ಪ್ರತಿಭಟನೆಗಳನ್ನು ಮಾಡುತ್ತಿದ್ದರೂ,ಇಂದಿಗೂ ಲವ್ ಜಿಹಾದ್ ನಿಂತ ಲಕ್ಷಣ ಕಾಣುತ್ತಿಲ್ಲ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಜರಂಗದಳ ರಾಜ್ಯ ಸಂಚಾಲಕ ಸುನಿಲ್ ಕೆ.ಆರ್, ವಿಹಿಂಪ ಉಡುಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಮಾತನಾಡಿ, ವಶೀಕರಣ, ಆಸೆ-ಆಮೀಷಗಳ ಮೂಲಕ ಹಿಂದೂ ಹೆಣ್ಣುಮಕ್ಕಳನ್ನು ವ್ಯವಸ್ಥಿತವಾಗಿ ಇಸ್ಲಾಂಗೆ ಪರಿವರ್ತನೆ ಮಾಡುವಂತಹ ವ್ಯವಸ್ಥಿತ ಷಡ್ಯಂತರವೇ ಈ ಲವ್ ಜಿಹಾದ್. ಆರೋಪಿ ಅಜೀಜ್ ನ ಪತ್ನಿ ಸಲ್ಮಾಳನ್ನು ಶೀಘ್ರವಾಗಿ ಬಂಧಿಸಬೇಕು, ಅಲ್ಲದೇ ಕುಂದಾಪುರದ ಹಿಂದೂ ಸಮುದಾಯದ ವಕೀಲರೆಲ್ಲರೂ ಒಗ್ಗಟ್ಟಿನಿಂದ ಅಜೀಜ್ ಪರವಾಗಿ ವಕಾಲತು ವಹಿಸಿಕೊಳ್ಳಬಾರದು. ಇದು ಅವರಿಗೆ ಮೊದಲ ಪಾಠವಾಗಬೇಕು. ಅಜೀಜ್‍ನ ಪರ ವಕಾಲತು ವಹಿಸದೆ ಶಿಲ್ಪಾಳ ಸಾವಿಗೆ ನ್ಯಾಯ ಒದಗಿಸುವ ಎಂದು ಬಜರಂಗದಳ ರಾಜ್ಯ ಸಂಚಾಲಕ ಸುನೀಲ್ ಕೆ.ಆರ್ ಹೇಳಿದರು

ವಿಹಿಂಪ ಕೇಂದ್ರ ವಿಶ್ವಸ್ಥ ಮಂಡಳಿ ಸದಸ್ಯ ಪ್ರೇಮಾನಂದ ಶೆಟ್ಟಿ ಕಟ್ಕೆರೆ, ಬಜರಂಗದಳ ವಿಭಾಗ ಸಂಯೋಜಕ ಭುಜಂಗ ಕುಲಾಲ್, ವಿಹಿಂಪ ಜಿಲ್ಲಾ ಉಪಾಧ್ಯಕ್ಷ ಶ್ರೀಧರ ಬಿಜೂರು, ಮಾತೃಶಕ್ತಿ ಪ್ರಮುಖ್ ಪೂರ್ಣಿಮಾ ಸುರೇಶ್, ಮೃತ ಶಿಲ್ಪಾಳ ಸಹೋದರ ರಾಘವೇಂದ್ರ ದೇವಾಡಿಗ, ಮುಖಂಡರಾದ ಗಿರೀಶ್ ಕುಂದಾಪುರ, ಸುಧೀರ್ ಮೇರ್ಡಿ, ಗುರುರಾಜ್ ಸಂಗಮ್, ವಸಂತ ಸಂಗಮ್, ಪ್ರದೀಪ್ ಮಾರ್ಕೋಡು, ಸುರೇಂದ್ರ ಕೋಟೇಶ್ವರ ಇದ್ದರು.
ಜನಜಾಗೃತಿ ಸಭೆಗೂ ಮುನ್ನ ಹೊಸ ಬಸ್ ನಿಲ್ದಾಣದಿಂದ ಶಾಸ್ತ್ರಿ ಸರ್ಕಲ್ ವರೆಗೆ ಮೆರವಣಿಗೆ ನಡೆಯಿತು. ಪ್ರತಿಭಟನಾ ಸಭೆಯ ಬಳಿಕ ಕುಂದಾಪುರ ಉಪ ವಿಭಾಗದ ಡಿವೈಎಸ್ಪಿ ಶ್ರೀಕಾಂತ ಕೆ ಅವರಿಗೆ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಹಾಗೂ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ ಮನವಿ ನೀಡಲಾಯಿತು.