Recent Posts

Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಚತುಷ್ಪಥ ರಸ್ತೆ ಕಾಮಗಾರಿ : “ಮನೆ ದಾರಿ ಕಾಣದಾಗಿದೆ” – ಹೆದ್ದಾರಿ ಬದಿ ನಿವಾಸಿಗಳಿಂದ ಸಿಎಂಗೆ ಪತ್ರ – ಕಹಳೆ ನ್ಯೂಸ್

ಕಲ್ಲಡ್ಕ: ರಸ್ತೆ ಅಗಲಗೊಳಿಸುವ ಕಾರ್ಯದ ವೇಳೆ ತಮ್ಮ ಮನೆಗೆ ತೆರಳುವ ರಸ್ತೆಗಳು ಬಂದ್ ಆಗುತ್ತಿದೆ ಮನೆಗೆ ತೆರಳಲು ದಾರಿ ತೋರಿಸಿ ಎಂದು ಸೂರಿಕುಮೇರು ನಿವಾಸಿ ಗೋಪಾಲ ಶಾಸ್ತ್ರಿ ಎಂಬವರು ಸಿಎಂಗೆ ಪತ್ರ ಬರೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಷ್ಟ್ರೀಯ ಹೆದ್ದಾರಿ ರಸ್ತೆ ನಂಬರ್ 75ರ ಚತುಷ್ಪಥ ಕಾಮಗಾರಿಯನ್ನು ಪ್ರಾರಂಭಿಸಿದ್ದು, ಈಗ ಗುಡುಗು ಸಿಡಿಲು ಮಳೆ ಈ ಭಾಗದಲ್ಲಿ ಪ್ರಾರಂಭ ಆಗಿದೆ ಇದರಿಂದ ಸಂಪರ್ಕ ರಸ್ತೆ ಸಂಪೂರ್ಣ ಬಂದ್ ಆಗಿದ್ದಲ್ಲದೆ, ಮೊನ್ನೆ ಸುರಿದ ಮಳೆಗೆ ಅಡಿಕೆ ತೋಟದಲ್ಲಿ ಮಳೆ ನೀರು ಕೆಸರು ತುಂಬಿ ಸಂಪೂರ್ಣ ಅಡಿಕೆ ಫಸಲು ನೆಲಕಚ್ಚುವ ಭೀತಿ ಎದುರಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ತಮ್ಮ ಪತ್ರದಲ್ಲಿ ತಿಳಿಸಿರುವ ಶಾಸ್ತ್ರಿ, ಕೂವೆಕೋಡಿ ನಿವಾಸಕ್ಕೆ ಹೋಗುವ ಸಂಪೂರ್ಣ ರಸ್ತೆ ಸಂಪರ್ಕಯನ್ನ ಕಳೆದು ಕೊಂಡುದ್ದಲ್ಲದೆ, ಕೃಷಿಭೂಮಿಯಲ್ಲಿ ಇರುವ ಅಡಿಕೆ ತೆಂಗು ಬಾಳೆ , ಕರಿಮೆಣಸು ಕೃಷಿ ಮಳೆನೀರು ಕೆಸರು ತುಂಬಿ ಫಸಲು ನೆಲಕಚ್ಚುವ ಭೀತಿ ಎದುರಾಗಿದೆ ಎಂದಿದ್ದಾರೆ.
ಸುಮಾರು 20 ರಿಂದ 25 ಅಡಿ ಎತ್ತರಕ್ಕೆ ಸ್ಲೋಪ್ ನಿರ್ಮಾಣ ಮಾಡಲು ಹಾಕಿದ ಮಣ್ಣು ಅಡಿಕೆ, ತೆಂಗು, ಬಾಳೆ, ಕರಿಮೆಣಸು, ಬೆಳೆ ಬೆಳೆಯುವ ತೋಟಕ್ಕೆ ನೀರು ಕೆಸರು ತುಂಬಿ ಕುಸಿಯುವ ಭೀತಿ ಎದುರಾಗಿದ್ದು, ಈ ಬಗ್ಗೆ ಬಾಯ್ದೆರೆ, ಪತ್ರ ಮುಖೇನ ವಿನಂತಿಸಿದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಹಿರಿಯ ನಾಗರಿಕರಾಗಿರುವ ಗೋಪಾಲ ಶಾಸ್ತ್ರಿ ಸಿಎಂಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.