Sunday, January 19, 2025
ಕ್ರೈಮ್ಮಂಡ್ಯರಾಜ್ಯಸುದ್ದಿ

ವಿದ್ಯಾರ್ಥಿನಿ ಜೊತೆ ಮದುವೆಯ ನಾಟಕವಾಡಿ ದೈಹಿಕ ಸಂಪರ್ಕ ಬೆಳೆಸಿ ಕೈ ಕೊಟ್ಟ ಹಾಸ್ಟೆಲ್ ವಾರ್ಡನ್ – ಕಹಳೆ ನ್ಯೂಸ್

ಮದ್ದೂರು: ವಿವಾಹವಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡು ನಂತರ ನಿಶ್ಚಿತಾರ್ಥವೂ ಮುಗಿದ ಬಳಿಕ ಮದುವೆಗೆ ನಿರಾಕರಿಸಿದ ಹಾಸ್ಟೆಲ್ ವಾರ್ಡನ್ ವಿರುದ್ಧ ವಿದ್ಯಾರ್ಥಿನಿಯೊಬ್ಬಳು ಮದ್ದೂರು ಠಾಣೆಗೆ ದೂರು ನೀಡಿರುವ ಘಟನೆ ನಡೆದಿದೆ.

ಏನಿದು ಘಟನೆ?:
ತಾಲೂಕಿನ ಕೊಪ್ಪ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ನಿಲಯ ಪಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬೆಕ್ಕಳಲೆ ಗ್ರಾಮದ ಸತೀಶ್, ಕಳೆದ ೪ ವರ್ಷದಿಂದ ಅದೇ ಹಾಸ್ಟೆಲ್‌ನಲ್ಲಿದ್ದ ಪಟ್ಟಣದ ವಿದ್ಯಾರ್ಥಿನಿಯೊಬ್ಬಳನ್ನು ಪುಸಲಾಯಿಸಿ ಪ್ರೀತಿಸುತ್ತಿದ್ದು, ಮದುವೆಯಾಗುತ್ತೇನೆ ಎಂದು ನಂಬಿಸಿ ನಿಶ್ಚಿತಾರ್ಥ ಮಾಡಿಕೊಂಡು ದೈಹಿಕವಾಗಿ ಬಳಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

 

ನಿಶ್ಚಿತಾರ್ಥ ನಾಟಕವಾಡಿ ಗರ್ಭಪಾತ:
ಪ್ರೀತಿಸುತ್ತಿದ್ದ ಸಂದರ್ಭದಲ್ಲಿ ವಿವಾಹವಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಈ ಸಂದರ್ಭದಲ್ಲಿ ಯುವತಿಯು ಗರ್ಭಿಣಿಯಾಗಿದ್ದಾಳೆ. ಆಗ ನಿಶ್ಚಿತಾರ್ಥದ ನಾಟಕವಾಡಿ ಆಕೆಯನ್ನು ಪುಸಲಾಯಿಸಿದ ಆರೋಪಿ ಸತೀಶ್ ಮೂರು ಬಾರಿ ಗರ್ಭಪಾತ ಮಾಡಿಸಿದ್ದಾನೆ. ಈ ನಡುವೆ ನಿಶ್ಚಿತಾರ್ಥವೂ ಮಾಡಿಕೊಂಡು ಮದುವೆ ಮಾತುಕತೆ ನಡೆಸಿದ್ದರೆನ್ನಲಾಗಿದೆ.

ಮದುವೆ ಆಗಲ್ಲ ಎಂದು ಉಡಾಫೆ:
ಕಳೆದ ಕೆಲ ದಿನಗಳಿಂದ ಸತೀಶ್ ನಾನು ನಿನ್ನನ್ನು ಮದುವೆಯಾಗುವುದಿಲ್ಲ. ಸರ್ಕಾರಿ ನೌಕರಿಯಲ್ಲಿರುವವರನ್ನು ಮದುವೆಯಾಗುತ್ತೇನೆ ಎಂದು ಉಡಾಫೆ ಉತ್ತರ ನೀಡುತ್ತಾ, ಇಲ್ಲಸಲ್ಲದ ನೆಪವೊಡ್ಡಿ ತಪ್ಪಿಸಿಕೊಳ್ಳುತ್ತಿದ್ದಾನೆ. ಇದರಿಂದ ನನಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ನೊಂದ ಸಂತ್ರಸ್ತೆ ಸತೀಶ್ ವಿರುದ್ಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ.

ಕ್ರಮ ಕೈಗೊಳ್ಳದ ಪೊಲೀಸರು:
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತೆಯ ಪೋಷಕರು ಆರೋಪಿಸಿದ್ದಾರೆ. ಆರೋಪಿ ಸತೀಶ್‌ನ ಬಳಿ ಹಣ ಪಡೆದುಕೊಂಡು ಪೊಲೀಸರು ಆತನನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ಪೊಲೀಸರ ವಿರುದ್ಧ ಆರೋಪ ಮಾಡಿದ್ದಾರೆ.