Sunday, January 19, 2025
ರಾಷ್ಟ್ರೀಯಸುದ್ದಿ

ತನ್ನನ್ನೇ ತಾನು ವಿವಾಹವಾಗಲಿರುವ ಗುಜರಾತ್ ಯುವತಿ ; ಗೋವಾದಲ್ಲಿ ಹನಿಮೂನ್.! – ಕಹಳೆ ನ್ಯೂಸ್

ವಡೋರ, ಜೂ 02 : ಗುಜರಾತ್‌ನ ವಡೋರದ 24ವರ್ಷದ ಕ್ಷಮಾ ಎಂಬ ಯುವತಿಯೊಬ್ಬಳು ತನ್ನನ್ನೇ ತಾನು ವಿವಾಹವಾಗಲು ಮುಂದಾಗಿದ್ದು, ಗೋವಾದಲ್ಲಿ ಹನಿಮೂನ್ ಎಂದು ತಿಳಿಸಿದ್ದಾರೆ.

“ನಾನು ಎಂದಿಗೂ ಮದುವೆಯಾಗಲು ಬಯಸಲಿಲ್ಲ. ಬದಲಾಗಿ ವಧು ಆಗಲು ಬಯಸಿದ್ದೆ. ಹಾಗಾಗಿ ನಾನೇ ಮದುವೆಯಾಗಲು ನಿರ್ಧರಿಸಿದ್ದೇನೆ. ನನ್ನ ಪೋಷಕರು ನನಗೆ ಬೆಂಬಲ ನೀಡಿದ್ದಾರೆ” ಎಂದು ಕ್ಷಮಾ ಹೇಳಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಕ್ಷಮಾ, ತನ್ನಂತೆಯೇ ಏಕಾಂಗಿಯಾಗಿ ಮದುವೆಯಾಗಲಿಚ್ಚಿಸುವ ಮಹಿಳೆಯನ್ನು ಹುಡುಕಲು ಪ್ರಯತ್ನಿಸಿದೆ. ಆದರೆ ಯಾರೂ ಸಿಗಲಿಲ್ಲ ಹಾಗಾಗಿತನ್ನನ್ನೇ ತಾನು ವಿವಾಹವಾಗುತ್ತಿದ್ದೇನೆ ಎಂದು ತಿಳಿಸಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ದೇಶದಲ್ಲಿ ತನ್ನನ್ನೇ ತಾನು ವಿವಾಹವಾಗಲಿರುವ ಮೊದಲ ಯುವತಿ ಕ್ಷಮಾ ಆಗಿದ್ದಾಳೆ ಎಮ್ದು ತಿಳಿದು ಬಂದಿದೆ.