Monday, January 20, 2025
ಕ್ರೈಮ್ದಕ್ಷಿಣ ಕನ್ನಡಪುತ್ತೂರುರಾಜಕೀಯಸುದ್ದಿ

” ಆಳೆನ ಬುಡೋರ್ಚಿ ಆಳ್ ಬ್ಯಾರ್ಥಿ ಆಳೇನ ಶಾಲ್ ಒಯ್ಪು.. ” ವರದಿ ಮಾಡಲು ತೆರಳಿದ ಪತ್ರಕರ್ತರನ್ನು ಕೂಡಿಹಾಕಿ, ಹಲ್ಲೆಗೆ ಯತ್ನಿಸಿ, ವಿಡಿಯೋ ಡಿಲೀಟ್ ಮಾಡಿಸಿದ ಮುಸ್ಲಿಂ ವಿದ್ಯಾರ್ಥಿಗಳು ಸೇಫ್..!? ಪತ್ರಕರ್ತರ ಮೇಲೆ ಬ್ಯಾರ್ಥಿ ಶಾಲ್ ಏಳೆದ ಕೇಸ್…! ಉಪ್ಪಿನಂಗಡಿ ಕಾಲೇಜ್ ಹಿಜಾಬ್ ವಿವಾದದಲ್ಲೊಂದು ಬ್ಯಾರ್ಥಿ ಶಾಲು ಎಳಿದ ಸುಳ್ಳು ಕೇಸ್..!? – ಕಹಳೆ ನ್ಯೂಸ್

ಉಪ್ಪಿನಂಗಡಿ: ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿಗೆ ಹಿಜಾಬ್ ಧರಿಸಿ ಬಂದ 6 ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಿ ಪ್ರಾಂಶುಪಾಲರು ಆದೇಶ ಹೊರಡಿಸಿದ ಬೆನ್ನಲ್ಲೇ ಒಂದು ಕೋಮಿನ ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆ ನಡೆಯುತ್ತಿರುವ ವೇಳೆ ವರದಿ ಮಾಡಲು ಬಂದ ಮಾಧ್ಯಮ ಪ್ರತಿನಿಧಿಗಳ ಮೇಲೆ ವಿದ್ಯಾರ್ಥಿಗಳಿಂದ ಹಲ್ಲೆಗೆ ಯತ್ನಿಸಿ, ವರದಿಗಾರರನ್ನು ಕೊಠಡಿಯೊಳಗೆ ಕೂಡಿ ಹಾಕಿ ವಿಕೃತಿ ಮೆರೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವರದಿ ಮಾಡದಂತೆ ವಿದ್ಯಾರ್ಥಿಗಳು ತಾಕೀತು ಮಾಡಿದ್ದಾರೆ. ವರದಿಗಾಗಿ ಮಾಡಿದ ವಿಡಿಯೋಗಳನ್ನು ವಿದ್ಯಾರ್ಥಿಗಳು ಬಲತ್ಕಾರವಾಗಿ ಡಿಲೀಟ್ ಮಾಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಜಾಬ್‌ ವಿವಾದ ಹಿನ್ನೆಲೆ ಕಾಲೇಜಿನಲ್ಲಿ ಉಪ್ಪಿನಂಗಡಿ ಪೊಲೀಸರು ಭದ್ರತೆಯ ದೃಷ್ಟಿಯಿಂದ ನಿಯೋಜಿಸಲಾಗಿದ್ದು, ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆಗೆ ಮುಂದಾದ ವಿದ್ಯಾರ್ಥಿಗಳ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗೂ ಈ ಘಟನೆಯ ಕುರಿತು ಪೋಲೀಸರಿಗೆ ಪತ್ರಕರ್ತರು ದೂರೂ ನೀಡಿದರೂ ಯಾವುದೇ ಕ್ರಮ ಕೈಗೊಳ್ಳದೆ ಪೋಲೀಸರು ಸುಮ್ಮನೆ ಇದ್ದದ್ದು ವಿಪರ್ಯಾಸವೇ ಸರಿ.

ಈ ನಡುವೆ ಇಂದು ಸಂಜೆ ಮುಸ್ಲಿಂ ವಿದ್ಯಾರ್ಥಿನಿಯರು ಪತ್ರಕರ್ತರು ಶಾಲು ಎಳೆದಿದ್ದಾರೆ ಎಂದು ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದು, ಪೋಲೀಸರು ಎಫ್‌ಐ.ಆರ್. ದಾಖಲಿಸಿದ್ದಾರೆ.

ಏನಿದೆ ಎಫ್.ಐ.ಆರ್ ನಲ್ಲಿ..!?

1. ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 70/2022 ಕಲಂ: 447,354,504,506 ಜೊತೆಗೆ 34 ಐಪಿಸಿ

2.ಕೃತ್ಯ ನಡೆದ ದಿನಾಂಕ: 02.06.2022 ರಂದು 11.30 ಗಂಟೆಯಿಂದ 11.55 ಗಂಟೆಯ ಮದ್ಯೆ

3.ವರದಿ ದಿನಾಂಕ: 03.06.2022 ರಂದು 18.30 ಗಂಟೆಗೆ

4.ಕೃತ್ಯ ನಡೆದ ಸ್ಥಳ: ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು

6.ಆರೋಪಿಗಳು: 1.ಅಜಿತ್ ಕುಮಾರ್ ಕೆ 2.ಪ್ರವೀಣ್ ಕುಮಾರ್ 3.ಸಿದ್ದೀಕ್ ನಿರಾಜೆ

7.ಪ್ರಕರಣದ ಸಾರಾಂಶ: ಪಿರ್ಯಾದಿ ರವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿ 2ನೇ ವರ್ಷದ ಬಿಕಾಂ ವಿದ್ಯಾಭ್ಯಾಷ ಮಾಡುತ್ತಿದ್ದವರು, ದಿನಾಂಕ:02.06.2022ರಂದು ಸಮಯ ಸುಮಾರು 09.30 ಗಂಟೆಗೆ ಕಾಲೇಜಿಗೆ ಬಂದಿದ್ದು, ಸುಮಾರು 11.30 ಗಂಟೆಗೆ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಲ್ಲದ ಅಪರಿಚಿತ ಅಜಿತ್ ಕುಮಾರ್ ಕೆ. ಪ್ರವೀಣ್ ಕುಮಾರ್ ಮತ್ತು ಸಿದ್ದೀಕ್ ನಿರಾಜೆ ಎಂಬ ಮೂರು ಮಂದಿ ಅಕ್ರಮವಾಗಿ ಪ್ರವೇಶ ಮಾಡಿ. ಅಜಿತ್ ಕುಮಾರ್ ಎಂಬಾತನು ಬ್ಯಾರಿಗಳು ಯಾಕೆ ಕಾಲೇಜಿಗೆ ಬಂದಿದ್ದು. “ಅಕ್ಲೆಗ್ ಪಳ್ಳಿಗೆ ಪೊಯರ್ ಆಪುಜ್ಜಾ” ಎನ್ನುತ್ತಾ ಪಿರ್ಯಾದಿ ಬಳಿ ಬಂದು ಶಾಲನ್ನು ಎಳೆಲು ಯತ್ನಿಸಿದಾಗ ಪಿರ್ಯಾದಿ ಗಾಬರಿಯಿಂದ ತಪ್ಪಿಸುತ್ತಿದಂತೆ, ಪ್ರವೀಣ್ ಎಂಬಾತನು “ಆಳೆನ ಬುಡೋರ್ಚಿ ಆಳ ಬ್ಯಾರ್ಥಿ ಆಲೇನ ಶಾಲ್ ಒಯ್ಪು” ಎಂಬಿತ್ಯಾದಿಯಾಗಿ ಸಹಚರರಾದ ಸಿದ್ದೀಕ್ ನಿರಾಜೆ ಎಂಬವರಲ್ಲಿ ಹೇಳುತ್ತಾ ಬಂದು ಅಜಿತ್ ಕುಮಾರ್ ನು ಪಿರ್ಯಾದಿಯ ವಿಡಿಯೋ ಮಾಡುತ್ತೀದ್ದಾಗ ಪಿರ್ಯಾದಿ ನೀವು ಯಾರು ಇಲ್ಲಿ ಯಾಕೆ ಬಂದಿದ್ದೀರಿ ಎಂದು ಕೇಳಿದಾಗ ಪಿಯಾಧಿಯನ್ನು ಉದ್ದೆಶಿಸಿ ನೀನು ನಾಳೆಯಿಂದ ಹೇಗೆ ಕಾಲೇಜಿಗೆ ಬರುತ್ತೀ ಎಂದು ನಾವು ನೋಡುತ್ತೇವೆ ವಿಡಿಯೋ ವೈರಲ್ ಮಾಡುತ್ತೇವೆ. ಎಂದಾಗ ಪಿರ್ಯಾದಿ ಕ್ಲಾಸ್ ರೂಮ್ ಗೆ ಹೋಗಿ ಮೌಖಿಕವಾಗಿ ಪ್ರಾಶುಂಪಾಲರಲ್ಲಿ ದೂರು ನೀಡಿದಾಗ ಆ ವ್ಯಕ್ತಿಗಳನ್ನು ಕರೆಯಿಸಿ ಅವರು ಮಾಡಿದ ವಿಡಿಯೋವನ್ನು ಡಿಲಿಟ್ ಮಾಡಿಸಿದ್ದು, ಈ ಸಂದರ್ಭ ಆ ಮೂರು ಜನರು ಪತ್ರಕರ್ತರೆಂದು ತಿಳಿಯಿತು, ಇದರಿಂದ ಪಿರ್ಯಾದಿ ಹೆದರಿ ಜೀವ ಭಯದಿಂದ ಮನೆಯವರಲ್ಲಿ ವಿವರಿಸಿ ಈ ದಿನ ತಡವಾಗಿ ದೂರು ನೀಡುತ್ತೀರುವುದಾಗಿದೆ. ಎಂಬಿತ್ಯಾದಿ…..