Monday, January 20, 2025
ಸುದ್ದಿ

ಯುವಶಕ್ತಿ ಸೇವಾಪಥದ ಆಶ್ರಯದಲ್ಲಿ ತುಳುನಾಡ ಕಾರಣಿಕ ಕ್ಷೇತ್ರ ಕೊಂಡಾಣದಲ್ಲಿ ಹಮ್ಮಿಕೊಂಡಿದ್ದ ಸೇವಾನಿಧಿ ಯೋಜನೆ ಸಂಪನ್ನ – ಕಹಳೆ ನ್ಯೂಸ್

ಯುವಶಕ್ತಿ ಸೇವಾಪಥದ ಆಶ್ರಯದಲ್ಲಿ ತುಳುನಾಡ ಕಾರಣಿಕ ಕ್ಷೇತ್ರ ಕೊಂಡಾಣದಲ್ಲಿ ಹಮ್ಮಿಕೊಂಡಿದ್ದ ಕೊಂಡಾಣ ಸೇವಾಸಿಂಚನ ಸೇವಾನಿಧಿ ಯೋಜನೆ ಫಲಾನುಭವಿಗಳಿಗೆ ಮೊತ್ತ ಹಸ್ತಾಂತರಿಸುವ ಮೂಲಕ ಸಂಪನ್ನಗೊ0ಡಿತು.

   

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಥಳೀಯ ಸಂಘಟನೆಗಳ ಸಹಯೋಗದೊಂದಿಗೆ ಕೊಂಡಾಣ ಬಂಡಿ ಜಾತ್ರೆಯಂದು ಹಮ್ಮಿಕೊಂಡಿದ್ದ ಈ ಸೇವಾಸಿಂಚನಕ್ಕೆ ಭಕ್ತಾಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸುಮಾರು 2,60,000 (ಎರಡು ಲಕ್ಷದ ಅರುವತ್ತು ಸಾವಿರ ಸಂಗ್ರಹವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಹಾಯೋಜನೆಗಳಡಿಯಲ್ಲಿ ಅಂಗವೈಕಲ್ಯದ ಸಮಸ್ಯೆಯ ಅಪೇಕ್ಷಾ ಕಿನ್ಯ ಎಂಬ ಮಗುವಿಗೆ ಒಂದು ಲಕ್ಷ ಹಾಗೂ ಕಿಡ್ನಿ ವೈಫಲ್ಯದ ಸ್ವಾತಿ ಕಾವೂರು ಎಂಬವರಿಗೆ ಎಪ್ಪತ್ತು ಸಾವಿರ ಹಸ್ತಾಂತರಿಸಲಾಯಿತು.
ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನಿಧಿ ಯೋಜನೆಯಡಿ ಬಂಟ್ವಾಳದ ದೀಪಾ, ಲಿಖಿತ್ ಕೊಲ್ಯದ ಪ್ರಜ್ಞಾ, ಹೊಸಂಗಡಿಯ ಸಾನ್ವಿ ರವರಿಗೆ ಮೂವತ್ತ ಮೂರು ಸಾವಿರ ನೀಡಲಾಗಿದೆ.

ಅದೇ ರೀತಿ ತುರ್ತು ಚಿಕಿತ್ಸಾ ನಿಧಿಯ ಮೂಲಕ ವಿದ್ಯಾಶ್ರೀ ತೆಂಕಕಜೆಕ್ಕಾರು,ರತ್ನಾವತಿ ಮಾಡೂರು,ಮುಖೇಶ್ ಬಗಂಬಿಲ,ನಾರಾಯಣ ಕಿನ್ಯ ರವರಿಗೆ ತಲಾ ಹತ್ತುಸಾವಿರ ಹಸ್ತಾಂತರಿಸಲಾಯಿತು. ಸೇವಾಪಥ ಕ್ಷೇಮನಿಧಿಗೆ ರೂ ಹದಿನೈದು ಸಾವಿರ ಮೀಸಲಿಡಲಾಗಿದೆ.
ಕೊಂಡಾಣ ದೈವಸ್ಥಾನದ ಆಡಳಿತ ಮಂಡಳಿ, ಸೇವಾಪಥದ ಕಾರ್ಯಕರ್ತರು,ಸಹಯೋಗದಲ್ಲಿ ಕೈಜೋಡಿಸಿದ ಸಂಸ್ಥೆಗಳ ಸದಸ್ಯರು ಊರ ಪ್ರಮುಖರು ಉಪಸ್ಥಿತರಿದ್ದರು.