Recent Posts

Sunday, January 19, 2025
ರಾಜಕೀಯ

Breaking News : ನಮೋ ಚಾಣಕ್ಯರ ಕುಟಿಲ ನೀತಿ ; ಜಮ್ಮುಕಾಶ್ಮೀರದಲ್ಲಿ ಪಿಡಿಪಿ ಜತೆ ಮೈತ್ರಿ ಮುರಿದ ಬಿಜೆಪಿ – ಕಹಳೆ ನ್ಯೂಸ್

ಜಮ್ಮುಕಾಶ್ಮೀರ (ಜೂನ್​ 19): ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಜತೆ ಮೈತ್ರಿಯನ್ನು ಬಿಜೆಪಿ ಮುರಿದಿದೆ. ಪಿಡಿಪಿಗೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದ್ದೇವೆ ಎಂಬ ನಿರ್ಧಾರವನ್ನು ಬಿಜೆಪಿ ನಾಯಕ ರಾಮ್​ ಮಾದವ್​ ನವದೆಹಲಿಯಲ್ಲಿ ಬಹಿರಂಗ ಪಡಿಸಿದ್ದಾರೆ. ಕದನ ವಿರಾಮ ಉಲ್ಲಂಘನೆ ಸಂಬಂಧ ಬಿಜೆಪಿ ಮತ್ತು ಪಿಡಿಪಿ ನಡುವೆ ಭಿನ್ನಮತ ಆರಂಭವಾಗಿತ್ತು. ಇದೀಗ ಭಿನ್ನಮತದ ಬೆನ್ನಲ್ಲೇ ಬಿಜೆಪಿ ಬೆಂಬಲವನ್ನು ಹಿಂಪಡೆಯುವ ಮೂಲಕ ತನ್ನ ನಿರ್ಧಾರವನ್ನು ಸ್ಪಷ್ಟಪಡಿಸಿದೆ.

ಜಮ್ಮು ಕಾಶ್ಮೀರದಲ್ಲಿ ಒಟ್ಟೂ 87 ವಿಧಾನಸಭಾ ಕ್ಷೇತ್ರಗಳಿದ್ದು ಸರ್ಕಾರ ರಚನೆಗೆ 45 ಶಾಸಕರ ಬಲ ಬೇಕು. ಕಳೆದ ಚುನಾವಣೆಯಲ್ಲಿ ಪಿಡಿಪಿ 28 ಮತ್ತು ಬಿಜೆಪಿ 25 ಕ್ಷೇತ್ರಗಳಲ್ಲಿ ಜಯ ಸಾಧಿಸಿ ಸಮ್ಮಿಶ್ರ ಸರ್ಕಾರ ರಚಿಸಿತ್ತು. ಕಾಂಗ್ರೆಸ್​ ಕೇವಲ 12 ಸ್ಥಾನಕ್ಕೆ ತೃಪ್ತಿ ಪಟ್ಟಿದ್ದರೆ ಎನ್​ಸಿ 15 ಸ್ಥಾನಗಳನ್ನು ಗಳಿಸಿತ್ತು. ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆಯ ಅಧಿಕಾರಾವಧಿ ದೇಶದ ಇತರೆ ರಾಜ್ಯಗಳಿಗಿಂತ ಒಂದು ವರ್ಷ ಹೆಚ್ಚು. 6 ವರ್ಷಗಳ ವಿಧಾನಸಭೆ ಜಮ್ಮು ಮತ್ತು ಕಾಶ್ಮೀರದಲ್ಲಿರುತ್ತದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್​, ಪಿಡಿಪಿ ಮತ್ತು ಪಕ್ಷೇತರ ಅಭ್ಯರ್ಥಿಗಳ ಜತೆಗೂಡಿ ಸರ್ಕಾರ ರಚನೆಗೆ ಕೈಹಾಕುವ ಸಾಧ್ಯತೆಯಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಂಗ್ರೆಸ್​ ಬೆಂಬಲದೊಂದಿಗೆ ಪಿಡಿಪಿ ಸರ್ಕಾರ ರಚಿಸಲು ಮುಂದಾಗದಿದ್ದರೆ, ವಿಧಾನ ಸಭೆ ವಿಸರ್ಜನೆ ಮಾಡಿ, ಹೊಸ ಚುನಾವಣೆಗೆ ಕಾಶ್ಮೀರ ಸಾಕ್ಷಿಯಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಂಜಾನ್​ ವೇಳೆ ಕಣಿವೆ ರಾಜ್ಯದಲ್ಲಿ ಕದನ ವಿರಾಮವನ್ನು ಕೇಂದ್ರ ಸರ್ಕಾರ ಘೊಷಿಸಿತ್ತು. ಆದರೆ ಗೃಹ ಇಲಾಖೆಯ ಮಾಹಿತಿ ದಾಖಲೆಗಳ ಪ್ರಕಾರ ಈ ಸಮಯದಲ್ಲಿ ಪ್ರತ್ಯೇಕತಾವಾದಿಗಳ ಅಟ್ಟಹಾಸ ಹೆಚ್ಚಗಿತ್ತು. ಜತೆಗೆ ರಂಜಾನ್​ ಕಡೆಯ ದಿನ ರೈಸಿಂಗ್​ ಕಾಶ್ಮೀರ್​ ಪತ್ರಿಕೆಯ ಸಂಪಾದಕ ಶುಜಾತ್​ ಬುಖಾರಿಯವರನ್ನು ಹತ್ಯೆ ಮಾಡಲಾಗಿತ್ತು. ಇದರಿಂದ ಕಣಿವೆ ರಾಜ್ಯದಲ್ಲಿ ಘೋಷಿಸಿದ್ದ ಕದನ ವಿರಾಮಕ್ಕೆ ಕೇಂದ್ರ ಅಂತ್ಯ ಹಾಡಿತ್ತು. ಜತೆಗೆ ಪ್ರತ್ಯೇಕತಾವಾದಿಗಳು ಮತ್ತು ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗಿಯಾದವರನ್ನು ಹುಡುಕಲು ಆದೇಶಿಸಲಾಗಿತ್ತು.

ಜಮ್ಮು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮತ್ತು ಕೇಂದ್ರ ಬಿಜೆಪಿ ನಾಯಕರ ನಡುವೆ ಇದೇ ವಿಚಾರವಾಗಿ ಭಿನ್ನಾಭಿಪ್ರಾಯ ಹೆಚ್ಚಾಗಿತ್ತು. ಮುಫ್ತಿ ಕದನ ವಿರಾಮವನ್ನು ಮುಂದುವರೆಸುವಂತೆ ಮತ್ತು ಪ್ರತ್ಯೇಕತಾವಾದಿಗಳ ಜತೆ ಮಾತುಕತೆಗೆ ಮುಂದಾಗುವಂತೆ ಬಿಜೆಪಿಯನ್ನು ಆಗ್ರಹಿಸಿದ್ದರು. ಆದರೆ ಕದನ ವಿರಾಮ ಮುಂದುವರೆಸಲು ಬಿಜೆಪಿ ಒಪ್ಪಲಿಲ್ಲ. ಈ ಭಿನ್ನಮತದ ಬೆನ್ನಲ್ಲೇ, ಬಿಜೆಪಿ ಶಾಸಕರ ಜತೆ ಮಾತನಾಡಿದ ಅಮಿತ್​ ಶಾ ಮೈತ್ರಿಕೂಟದಿಂದ ಹೊರ ಬರುವ ನಿರ್ಧಾರ ಮಾಡಿದ್ದಾರೆ.

“ಜಮ್ಮು ಕಾಶ್ಮೀರ ಮತ್ತು ಕೇಂದ್ರ ನಾಯಕರ ಜತೆ ಚರ್ಚೆ ಮಾಡಿದ ನಂತರ ಬಿಜೆಪಿ ಈ ನಿರ್ಧಾರ ಪ್ರಕಟಿಸುತ್ತಿದೆ. ಪಿಡಿಪಿ ಜತೆ ಮೈತ್ರಿಕೂಟದಲ್ಲಿ ಮುಂದುವರೆಯುವುದು ಅಸಾಧ್ಯ. ಯಾವುದೇ ಕಾರಣಕ್ಕೂ ಪಿಡಿಪಿ ಜತೆ ಬಿಜೆಪಿ ಮುಂದುವರೆಯುವುದಿಲ್ಲ,” ಪತ್ರಿಕಾಗೋಷ್ಠಿಯಲ್ಲಿ ರಾಮ್​ ಮಾದವ್​ ಮೈತ್ರಿ ಕಡಿದುಕೊಂಡ ಬಗ್ಗೆ ಅಧಿಕೃತ ಘೋಷಣೆ ಮಾಡಿದರು.