Monday, January 20, 2025
ಸುದ್ದಿ

2ವರ್ಷದ ಹಿಂದೆ ಸಂಪ್ಯ ಗಣೇಶೋತ್ಸವದಲ್ಲಿ ನಡೆದ ಹಿಂದೂ ಕಾರ್ಯಕರ್ತ ಕಾರ್ತಿಕ್ ಮೆರ್ಲ ಕೊಲೆ ಪ್ರಕರಣ; ಆರೋಪಿ ಚರಣ್ ರಾಜ್ ನನ್ನು ಹಾಡುಹಗಲೇ ಕಡಿದು ಕೊಲೆ- ಕಹಳೆ ನ್ಯೂಸ್

ಪುತ್ತೂರು: ಕೆಲ ವರ್ಷಗಳ ಹಿಂದೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಪ್ರಮುಖ ಆರೋಪಿ ಆರ್ಯಾಪು ನಿವಾಸಿ ಚರಣ್ ರಾಜ್ ರೈ(28) ನನ್ನು ಪೆರ್ಲಂಪಾಡಿ ಸಮೀಪ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
2019 ಸೆ.3 ರಂದು ರಾತ್ರಿ ಸಂಪ್ಯದ ಸಾರ್ವಜನಿಕ ಶ್ರೀ
ಗಣೇಶೋತ್ಸವದ ಬಳಿ ಹಿಂದೂ ಜಾಗರಣ ವೇದಿಕೆಯ
ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಮೇರ್ಲ(27) ರವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಪುತ್ತೂರಿನ ಹೊರವಲಯ ಸಂಪ್ಯದಲ್ಲಿರುವ ಪುತ್ತೂರು
ಗ್ರಾಮಾಂತರ ಪೊಲೀಸ್ ಠಾಣೆಯ ಮುಂಭಾಗದಲ್ಲಿಯೇ ಈ ಹತ್ಯೆ ನಡೆದಿತ್ತು.
ಕಾರ್ತಿಕ್ ಮೇರ್ಲ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚರಣ್ ರಾಜ್ ರೈ, ಕಿರಣ್ ರೈ, ಪ್ರೀತೇಶ್ ಶೆಟ್ಟಿ ಎಂಬವರನ್ನು ಬಂಧಿಸಲಾಗಿತ್ತು.
ಚರಣ್ ರಾಜ್ ರೈ ರವರ ಮೆಡಿಕಲ್ ಶಾಪ್ ನಾಳೆ
ಪೆರ್ಲಂಪಾಡಿಯಲ್ಲಿ ಆರಂಭಗೊಳ್ಳಲಿದ್ದು, ಈ ಹಿನ್ನೆಲೆ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ, ದ್ವಿಚಕ್ರ ವಾಹನದಲ್ಲಿ ಬಂದು ತಲ್ವಾರಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ
ಎನ್ನಲಾಗುತ್ತಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು