Monday, January 20, 2025
ಕ್ರೈಮ್ದಕ್ಷಿಣ ಕನ್ನಡಪುತ್ತೂರುರಾಜ್ಯಸುದ್ದಿ

ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ಕಾರ್ತಿಕ್ ಮೇರ್ಲ ಕೊಲೆಯ ರಿವೇಂಜ್ ; ಪ್ರಕರಣದ ಪ್ರಮುಖ ಆರೋಪಿ ಚರಣ್ ರಾಜ್ ರೈ ಹತ್ಯೆ – ‘ ಆನಿದ ವಿಚಾರ ಗೊತ್ತುಂಡತ್ತಾ ಬೊಕ್ಕ ಎಂಕುಲು ಇಂಬ್ಯನ್ ಬುಡ್ಪೊನಾ’ ಕಿಶೋರ್ ಪೂಜಾರಿ ತಂಡದಿಂದ ಕೃತ್ಯ – ಕಹಳೆ ನ್ಯೂಸ್

ರೌಡಿಸಂ ಫೀಲ್ಡ್‌ಗೆ (Rowdyism Field) ಇಳಿಯೋನು‌ ಮತ್ತು ಹರಕೆಯ ಕುರಿ ಈ ಎರಡರ ಸಾವು ಬಲಿಯ ಮೂಲಕವೇ ನಡೆಯುತ್ತೆ ಎನ್ನೋದು ಹಿರಿಯರ ಮಾತು. ಅದೇ ರೀತಿ ಈವರೆಗೆ ರೌಡಿಸಂ ಫೀಲ್ಡ್ ನಲ್ಲಿ ಕೊಲೆಯಾದವರು (Murder) ಮತ್ತು ಕೊಲೆಗಡುಕರು ಹರಕೆ ಕುರಿಯಂತೆ ಬಲಿಯಾಗಿದ್ದಾರೆ.

ಈ ಸಾಲಿಗೆ ಇದೀಗ ಮತ್ತೊಂದು ಹೆಸರು ಸೇರ್ಪಡೆಗೊಂಡಿದೆ‌. ಎರಡು ವರ್ಷ ಹಿಂದೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನ ಸಂಪ್ಯದಲ್ಲಿ (Sampya, Puttur) ನಡೆದ ಕಾರ್ತಿಕ್ ಮೇರ್ಲ ಎಂಬ ಯುವಕನ ಕೊಲೆಯ ಪ್ರಮುಖ ಆರೋಪಿ (Murder Accused) ಇದೀಗ ಕೊಲೆಗಡುಕರ ಸೇಡಿಗೆ ಬಲಿಯಾಗಿದ್ದಾನೆ. ಎರಡು ವರ್ಷದ ಹಿಂದೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ಕಾರ್ತಿಕ್ ಮೇರ್ಲ ಕೊಲೆ (Kartik Merla Murder Case) ಪ್ರಕರಣದ ಪ್ರಮುಖ ಆರೋಪಿಯಾದ ಚರಣ್ ರಾಜ್ ರೈ ಹತ್ಯೆ ಜೂನ್ 4 ರಂದು ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಎಂಬಲ್ಲಿ ಆರ್ಯಾಪು ಗ್ರಾಮದ ಸಂಪ್ಯ ಬಾಲಕೃಷ್ಣ ರೈ ಪುತ್ರ ಚರಣ್ ರಾಜ್ ರೈ ( 28 ) ಎಂಬವರನ್ನು ಹಾಡುಹಗಲೇ ಕೊಚ್ಚಿ ಕೊಲೆ ನಡೆಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೆಡಿಕಲ್ ಶಾಪ್ ಆರಂಭಕ್ಕೆ ಮುಂದಾಗಿದ್ದ ಚರಣ್ ರಾಜ್

ಈ ಬಗ್ಗೆ ಚರಣ್ ಸ್ನೇಹಿತ ನವೀನ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದು, ಚರಣರಾಜ್ ಪತ್ನಿಯ ತಂದೆ ಕಿಟ್ಟಣ್ಣ ರೈ ಎಂಬುವರು ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಎಂಬಲ್ಲಿ ಮೆಡಿಕಲ್ ಶಾಪ್ ಪ್ರಾರಂಭಿಸುವವರಿದ್ದು ಈ ಮೆಡಿಕಲ್ ಶಾಪ್ ನ ಪೂರ್ವತಯಾರಿ ಕೆಲಸಕ್ಕೆ ಚರಣ್ ರಾಜ್ ಪುತ್ತೂರಿನಿಂದ ಆಗಾಗ ಪೆರ್ಲಂಪಾಡಿ ಗೆ ಬಂದು ಹೋಗುತ್ತಿದ್ದ. ಚರಣ್ ರಾಜ್‌ ಗೆ ಆತನ ಸ್ನೇಹಿತನಾದ ನವಿನ್ ಕುಮಾರ್‌ ಸಾಥ್ ನೀಡುತ್ತಿದ್ದ.

ಎಂದಿನಂತೆ ಜೂ.4 ರಂದು ಸ್ನೇಹಿತ ಚರಣ್ ರಾಜ್ ನ ಜೊತೆಗೆ ಆತನ ಮಾರುತಿ ರಿಡ್ಜ್ ಕಾರ್ KA19 MF1185 ಯಲ್ಲಿ 11 ಗಂಟೆಗೆ ಪೆರ್ಲಂಪಾಡಿ ಬಂದು ಮೆಡಿಕಲ್ ಶಾಪ್ ನ ಕೆಲಸ ಕಾರ್ಯಗಳಲ್ಲಿ ನವಿನ್ ತೊಡಗಿದ್ದರು.

ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು

ಸಂಜೆ ಸಮಯ ಸುಮಾರು 04:15 ಗಂಟೆಗೆ ಮೆಡಿಕಲ್ ಶಾಪ್ ನ ಒಳಗೆ ಕೆಲಸಕಾರ್ಯಗಳಲ್ಲಿ ನಿರತರಾಗಿದ್ದ ವೇಳೆ ಮೆಡಿಕಲ್ ಶಾಪ್ ನ ಹೊರಗೆ ಕಾರಿನ ಬಳಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಚರಣ್ ರಾಜ್ ನ ಮೇಲೆ ಬೈಕ್ ನಲ್ಲಿ ಬಂದ‌ ದುಷ್ಕರ್ಮಿಗಳ ತಂಡ ಎರಗಿ ಬಿದ್ದಿದೆ.

ನಾವು ಇವನನ್ನ ಬಿಡ್ತೀವಾ

ಮೂವರು ದುಷ್ಕರ್ಮಿಗಳ ತಂಡ ಕೈಯಲ್ಲಿ ತಲವಾರು ಹಿಡಿದುಕೊಂಡು ನೆಲದಲ್ಲಿ ಬಿದ್ದಿದ್ದ ಚರಣ್ ರಾಜ್ ಮೇಲೆ ಎರಗಿದೆ. ಘಟನೆಯನ್ನು ದೂರದಿಂದ ಗಮನಿಸಿದ ಚರಣ್ ರಾಜ್ ಸ್ನೇಹಿತ ನವೀನ್ ಕುಮಾರ್ ದುಷ್ಕರ್ಮಿಗಳನ್ನು ತಡೆಯಲು ಹೋದ ಸಮಯದಲ್ಲಿ, ಆತನಿಗೆ ಪರಿಚಯ ಇರುವ ಕಲ್ಲಡ್ಕದ ಕಿಶೋರ್ ಪೂಜಾರಿ ಯವರು ಮುಂದೆ ಬಂದು ನವೀನ್ ರನ್ನು ಮುಂದಕ್ಕೆ ಹೋಗದಂತೆ ತಡೆದು ನವೀನರಲ್ಲಿ ತುಳುಭಾಷೆಯಲ್ಲಿ “ಆಣಿದ ವಿಚಾರ ಗೊತ್ತುಂಡತ್ತಾ ಬೊಕ್ಕ ಎಂಕುಲು ಇಂಬ್ಯನ್ ಬುಡ್ಪೊನಾ” ( ಆವತ್ತಿನ ವಿಚಾರ ಗೊತ್ತಿದೆಯಲ್ಲ, ಮತ್ತೆ ನಾವು ಇವನನ್ನು ಬಿಡ್ತೇವಾ) ಎಂಬುದಾಗಿ ಹೇಳಿ ಬೈಕ್ ಏರಿ ಪರಾರಿಯಾಗಿದೆ.

ಆರೋಪಿಗಳು ತಲವಾರು ಹಾಗೂ ರಾಡ್ ನಿಂದ ಹಲ್ಲೆ ಮಾಡಿದ ಪರಿಣಾಮ ಚರಣ್ ರಾಜನ ಕುತ್ತಿಗೆಗೆ ತೀವ್ರತರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುತ್ತಾನೆ.

ದ್ವೇಷದ ಕೊಲೆ

ಎರಡು ವರ್ಷದ ಹಿಂದೆ ಆರ್ಯಾಪು ಗ್ರಾಮದ ಮೇರ್ಲ ವಾಸಿ ಕಾರ್ತಿಕ್ ಎಂಬಾತನನ್ನು ಸಂಪ್ಯ ಪೊಲೀಸ್ ಠಾಣೆಯ ಮುಂಭಾಗ ಗಣೇಶೋತ್ಸವ ಪೆಂಡಲ್ ಒಳಗಡೆ ಕೊಲೆ ನಡೆಸಿದ ಪ್ರಕರಣದಲ್ಲಿ ಚರಣ್ ರಾಜ್ ಆರೋಪಿಯಾಗಿದ್ದು ಇದೇ ದ್ವೇಷದಿಂದ ಕಾರ್ತಿಕನ ಸ್ನೇಹಿತ ಕಿಶೋರ್ ಹಾಗೂ ಇತರರು ಈ ಕೃತ್ಯ ನಡೆಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮೂವರನ್ನು ವಶಕ್ಕೆ ಪಡೆದ ಪೊಲೀಸರು-ಕಿಶೋರ್ ಪೂಜಾರಿಗಾಗಿ ಶೋಧ

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನರ್ಮೇಶ್ ರೈ(29), ನಿತಿಲ್ ಶೆಟ್ಟಿ(23), ವಿಜೇಶ್(22) ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪುತ್ತೂರಿನ ಕೆಯ್ಯೂರು ಪಲ್ಲತ್ತಡ್ಕದಿಂದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ ಆರೋಪಿಗಳ ಪತ್ತೆಗೆ ಪೊಲೀಸರ ಶೋಧ ಕಾರ್ಯ ಮುಂದುವರೆಸಿದ್ದಾರೆ. ಇನ್ನು ಇದೊಂದು ಪೂರ್ವ ದ್ವೇಷದ ಕಾರಣದಿಂದ ಹತ್ಯೆ ಎಂಬ ಬಗ್ಗೆ ಮಾಹಿತಿ ಲಭಿಸಿದೆ. ಪುತ್ತೂರು ಗ್ರಾಮಾಂತರ ಠಾಣಾ ಪಿಎಸ್‌ಐ ಉದಯ ರವಿ, ಬೆಳ್ಳಾರೆ ಠಾಣಾ ಪಿಎಸ್‌ಐ ರುಕ್ಮ ನಾಯ್ಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.