Monday, January 20, 2025
ದಕ್ಷಿಣ ಕನ್ನಡಪುತ್ತೂರುರಾಜ್ಯ

ಕಾರ್ತಿಕ್ ಮೇರ್ಲ ಕೊಲೆಯ ಆರೋಪಿ ಚರಣ್ ರಾಜ್ ರೈ ಹತ್ಯೆ ಪ್ರಕರಣ ; ಪ್ರಮುಖ ಆರೋಪಿ ಕಿಶೋರ್ ಕಲ್ಲಡ್ಕ, ರೇಮಂತ್, ರಾಕೇಶ್ ಪಂಚೋಡಿ ಸೇರಿ ಮತ್ತೆ ಮೂರು ಮಂದಿ ಬಂಧನ – ಕಹಳೆ ನ್ಯೂಸ್

ಪುತ್ತೂರು: 2019ರ ಸೆಪ್ಟೆಂಬರ್ 3ರಂದು ರಾತ್ರಿ ಆರ್ಯಾಪು ಗ್ರಾಮದ ಸಂಪ್ಯದಲ್ಲಿರುವ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಶ್ರೀ ಗಣೇಶೋತ್ಸವದ ವೇಳೆ ಯಕ್ಷಗಾನ ವೀಕ್ಷಿಸುತ್ತಿದ್ದಾಗ ಪೆಂಡಾಲ್ ಒಳಗಡೆ ನಡೆದಿದ್ದ ಹಿಂದು ಜಾಗರಣ ವೇದಿಕೆಯ ಪುತ್ತೂರು ತಾಲೂಕು ಕಾರ್ಯದರ್ಶಿ, ಸಂಪ್ಯ ಮೇರ್ಲ ನಿವಾಸಿ ಕಾರ್ತಿಕ್ ಸುವರ್ಣ(27ವ)ರವರ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಸಂಪ್ಯ ನಿವಾಸಿ ಚರಣ್‌ರಾಜ್ ರೈ(29ವ)ಯವರನ್ನು ಕೊಳ್ತಿಗೆ ಸಮೀಪದ ಪೆರ್ಲಂಪಾಡಿಯ ರಸ್ತೆ ಬದಿಯಲ್ಲಿ ಜೂನ್ ೪ರಂದು ಸಂಜೆ ಕೊಚ್ಚಿ ಕೊಲೆ ಮಾಡಿದ ಘಟನೆಯಲ್ಲಿ ಪ್ರಮುಖ ಆರೋಪಿಯಾಗಿರುವ ರೌಡಿಶೀಟರ್ ಕಿಶೋರ್ ಕುಮಾರ್
ಕಲ್ಲಡ್ಕರವರನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು
ಯಶಸ್ವಿಯಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಕಿಶೋರ್ ಪೂಜಾರಿ ಜತೆ ಈಶ್ವರಮಂಗಲದ ರಾಕೇಶ್ ಪಂಚೋಡಿ ಮತ್ತು ಬಲ್ನಾಡಿನ ರೆಮಂತ್ ಎಂಬವರನ್ನೂ ಪೊಲೀಸರು ಖೆಡ್ಡಾಗೆ ಕೆಡವಿದ್ದಾರೆ ಎಂದು ಹೇಳಲಾಗುತ್ತಿದೆ.

ಚರಣ್‌ರಾಜ್ ರೈ ಕೊಲೆ ಪ್ರಕರಣದ ಹಂತಕರನ್ನು ಬಂಧಿಸಲು ರಚಿಸಲಾಗಿರುವ ವಿಶೇಷ ತನಿಖಾ ತಂಡದಲ್ಲಿರುವ ಪುತ್ತೂರು ಗ್ರಾಮಾಂತರ, ಸುಳ್ಯ ಮತ್ತು ಬೆಳ್ಳಾರೆ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಕೊಲೆ ಪ್ರಕರಣದ ಎಲ್ಲಾ ಆರು ಆರೋಪಿಗಳನ್ನು ಬಲೆಗೆ ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಿಶೋರ್ ಕುಮಾರ್ ಕಲ್ಲಡ್ಕರವರು ತನ್ನ ಆಪ್ತ ಒಡನಾಡಿ,
ಸಂಬಂಧಿಕನೂ ಆಗಿದ್ದ ಮೇರ್ಲ ಕುಟುಂಬದ ಕಾರ್ತಿಕ್
ಸುವರ್ಣರ ಕೊಲೆಗೆ ಪ್ರತಿಯಾಗಿ ದ್ವೇಷದಿಂದ ಚರಣ್‌ರಾಜ್ ರೈಯವರನ್ನು ಕೊಲೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬಹುತೇಕ ಖಚಿತವಾಗಿದೆ.
ಚರಣ್‌ರಾಜ್ ಕೊಲೆ ಪ್ರಕರಣದ ಪ್ರಮುಖ
ಆರೋಪಿಯಾಗಿದ್ದು ಪೊಲೀಸ್ ವಶವಾಗಿರುವ ರೌಡಿಶೀಟರ್ ಕಿಶೋರ್ ಪೂಜಾರಿ ಮೂಲತಃ ಬಂಟ್ವಾಳ ತಾಲೂಕಿನ ಕಲ್ಲಡ್ಕ ನಿವಾಸಿಯಾಗಿದ್ದು ಬೆಂಗಳೂರು ಮತ್ತು ದರ್ಬೆಯಲ್ಲಿ ಬಟ್ಟೆ ಶಾಪ್ ಹೊಂದಿದ್ದರು. ಕಿಶೋರ್ ಪೂಜಾರಿ ಮತ್ತು ಆತನ ಐವರು ಸಹಚರರು ಕೆಲವು ತಿಂಗಳ ಹಿಂದೆ ದರ್ಬೆಯಲ್ಲಿ ನಡೆದಿದ್ದ ತಾರಿಗುಡ್ಡೆಯ ರಾಧಾಕೃಷ್ಣ ಪೂಜಾರಿ ಎಂಬವರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಜೈಲು ಸೇರಿದ್ದವರು ಜಾಮೀನಿನಲ್ಲಿ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದರು. ಕಾರ್ತಿಕ್
ಸುವರ್ಣ ಕೊಲೆ ಬಳಿಕ ಪ್ರತೀಕಾರದ ಪ್ರತಿಜ್ಞೆ
ಮಾಡಿದ್ದರೆನ್ನಲಾದ ಕಿಶೋರ್ ಪೂಜಾರಿ ಕಲ್ಲಡ್ಕ ಮತ್ತು ಆತನ ಸಹಚರರು ಹಾಡಹಗಲೇ ಚರಣ್‌ರಾಜ್ ರೈಯವರನ್ನು ಹತ್ಯೆ ಮಾಡಿದ್ದಾರೆ. ಈ ಮೂಲಕ ರಿವೇಂಜ್ ಮರ್ಡ‌್ರಗೆ ಪುತ್ತೂರು ಸಾಕ್ಷಿಯಾಗಿದೆ.
ಚರಣ್ ರಾಜ್ ರೈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ
ಆರೋಪಿಗಳ ಪೈಕಿ ಕೆಯ್ಯರು ನೂಜಿ ಮುತ್ತಪ್ಪ ರೈಯವರ
ಪುತ್ರ ನರ್ಮೇಶ್ ರೈ(೨೯ವ), ಕೆಯ್ಯರು ಗ್ರಾಮದ ಮಾಡಾವು ನಿವಾಸಿ ಯತೀಶ ಎಂಬವರ ಪುತ್ರ ನಿತಿಲ್ ಶೆಟ್ಟಿ (೨೩ವ.) ಹಾಗೂ ಕಡಬ ತಾಲೂಕಿನ ಬೆಳಂದೂರು ಮರಕಲ ನಿವಾಸಿರಾಮ ಎಂಬವರ ಪುತ್ರ ವಿಜೇಶ್ (೨೨ವ.) ಎಂಬವರನ್ನು ಪೊಲೀಸರು ಕೆಯ್ಯರು ಗ್ರಾಮದ ಪಲ್ಲತ್ತಡ್ಕದಲ್ಲಿರುವ ಗೇರುಬೀಜದ ಕಾಡಿನಲ್ಲಿ ವಶಕ್ಕೆ ಪಡೆದುಕೊಂಡಿದ್ದರು. ಇದೀಗ ಅವರು ನೀಡಿದ ಮಾಹಿತಿಯ ಆಧಾರದಲ್ಲಿ ಕಿಶೋರ್ ಪೂಜಾರಿ
ಕಲ್ಲಡ್ಕ ರಾಕೇಶ್ ಪಂಚೋಡಿ ಮತ್ತು ರೆಮಂತ್
ಬಲ್ನಾಡುರವರು ಪೊಲೀಸ್ ವಶವಾಗಿದ್ದಾರೆ ಎಂದು
ಮೂಲಗಳಿಂದ ತಿಳಿದು ಬಂದಿದೆ.
ಕೊಲೆ ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನಾವನೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್‌ಚಂದ್ರ ಮತ್ತು ಡಿವೈಎಸ್ಪಿ ಡಾ. ಗಾನಾ ಪಿ. ಕುಮಾರ್ ಅವರ ನೇತೃತ್ವದಲ್ಲಿ ಸುಳ್ಯ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ, ಬೆಳ್ಳಾರೆ ಪೊಲೀಸ್ ಠಾಣೆಯ ಎಸ್.ಐ ರುಕ್ಕ ನಾಯ್ಕ ಸಂಪ್ಯ ಪೊಲೀಸ್ ಠಾಣೆಯ ಎಸ್.ಐ ಉದಯರವಿ ಅವರ ತಂಡ ರಚಿಸಲಾಗಿತ್ತು. ವಿಶೇಷ ತನಿಖಾ ತಂಡ ಕೊಲೆ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು