Tuesday, January 21, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕುದ್ರೆಬೆಟ್ಟು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ದಾನಿಗಳ ಸಹಕಾರದೊಂದಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ – ಕಹಳೆ ನ್ಯೂಸ್

ಕಲ್ಲಡ್ಕ : ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ದಾನಿಗಳ ಸಹಕಾರದೊಂದಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುದ್ರೆಬೆಟ್ಟು ಇಲ್ಲಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶಿವರಾಜ್ ಇವರ ಅಧ್ಯಕ್ಷತೆಯಲಿ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.

ಶಾಲಾ ಮುಖ್ಯಶಿಕ್ಷಕಿ ದೇವಿಕಾ ಟೀಚರ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು . ಕಾರ್ಯಕ್ರಮದಲ್ಲಿ ಮಾತನಾಡಿದ ಜನಶಕ್ತಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಜಿನ್ನಪ್ಪ ಏಳ್ತಿಮಾರ್ ರವರು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಭವಿಷ್ಯದಲ್ಲಿ ದೇಶದ ಸುಸಂಸ್ಕತ ಪ್ರಜೆಗಳಾಗಿ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಕಲ್ಲಡ್ಕ ರೈತರ ಸೇವಾ ಸಹಕರಿ ಸಂಘ ಇದರ ನಿರ್ದೇಶಕರಾದ ಲೋಕನಂದ ಎಳ್ತಿಮಾರ್, ಸಿದ್ದಿ ದೇವತಾ ಸೇವಾ ಸಮಿತಿ ಇದರ ಕೊರಗಪ್ಪ ಪಂಡಿತ್ , ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ವಿಠಲ್ ನಾಯ್ಕ್ , ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಂದರ ಸಾಲಿಯಾನ್, ಸಹ ಶಿಕ್ಷಕಿ ಚೇತನಾ ಟೀಚರ್, ಅಶ್ವಿನಿ, ಹಿರಿಯ ವಿದ್ಯಾಸಂಘದ ಗೌರವ ಸಲಹೆಗಾರರಾದ ಸುಂದರ ಪಾಧೆ, ಶಂಕರ ದರ್ಖಾಸ್, ಹಿರಿಯ ವಿದ್ಯಾರ್ಥಿಗಳಾದ ಕೇಶವ ಕುದ್ರೆಬೆಟ್ಟು, ಸುನಿಲ್ ಕುಮಾರ್ , ಪ್ರಶಾಂತ್, ಪ್ರಜ್ವಲ್ ಕೋಟ್ಯಾನ್ , ನವೀನ್, ದಯಾನಂದ, ಆಶಾ ಕಾರ್ಯಕರ್ತೆ ಸುಜಾತ ಎಂ, ಶಾಲಾ ಮೇಲುಸ್ತುವಾರಿ ಸಮಿತಿ ಸದಸ್ಯರು, ಪೆÇೀಷಕರು ,ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಾಲಾ ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷರಾದ ರಮೇಶ್ ಕುದ್ರೆಬೆಟ್ಟು ಸ್ವಾಗತಿಸಿ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ನಿತಿನ್ ಅಮಿನ್ ಮಿತಬೈಲು ವಂದಿಸಿದರು .ಸಂತೋμï ಕುಮಾರ್ ಬೊಲ್ಟಡಿ ಕಾರ್ಯಕ್ರಮ ನಿರೂಪಿಸಿದರು.