Tuesday, January 21, 2025
ಸುದ್ದಿ

ಬಂಟ್ವಾಳ : ಶೀಟ್ ಲೋಡ್ ಆಗುತ್ತಿದ್ದ ಟೆಂಪೋಗೆ ಕಾರು ಢಿಕ್ಕಿ – ಟೆಂಪೋ ಚಾಲಕ ಮೃತ್ಯು– ಕಹಳೆ ನ್ಯೂಸ್

ಬಂಟ್ವಾಳ : ರಿಕ್ಷಾ ಟೆಂಪೋಗೆ ಸಿಮೆಂಟ್ ಸೀಟು ಲೋಡ್ ಆಗುತ್ತಿದ್ದ ವೇಳೆ ಹಿಂಬದಿಯಿAದ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಟೆಂಪೋ ಚಾಲಕ ಮೃತಪಟ್ಟ ಘಟನೆ ಕಲ್ಲಡ್ಕ ಪೂರ್ಲಿಪ್ಪಾಡಿಯಲ್ಲಿ ನಡೆದಿದೆ.

ಸುರಿಬೈಲು ನಿವಾಸಿ ನೌಶಾದ್ (28) ಮೃತಪಟ್ಟ ಟೆಂಪೋ ಚಾಲಕ. ಇಂದು ಬೆಳಗ್ಗೆ ಕಲ್ಲಡ್ಕ ಪೂರ್ಲಿಪ್ಪಾಡಿಯ ಕೆ.ಎನ್. ಬೇಕರಿ ಬಳಿಯ ರಸ್ತೆ ಬದಿಯಲ್ಲಿ ರಿಕ್ಷಾ ಟೆಂಪೋ ನಿಲ್ಲಿಸಿ ಸಿಮೆಂಟ್ ಸೀಟು ಲೋಡು ಮಾಡುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹಿಂಬದಿಯಿAದ ನೌಶಾದ್ ಅವರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ನೌಶಾದ್ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.  ಈ ಬಗ್ಗೆ ಮೆಲ್ಕಾರ್ ಟ್ರಾಫಿಕ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು