Monday, January 20, 2025
ಸುದ್ದಿ

ಒಂದೇ ರಾತ್ರಿಗೆ 48 ಲಕ್ಷ ಖರ್ಚು ಮಾಡಿದ ಹಾಲಿವುಡ್‌ನ ಖ್ಯಾತ ನಟ ಜಾನಿ ಡೆಪ್- ಕಹಳೆ ನ್ಯೂಸ್

ಹಾಲಿವುಡ್‌ನ ಖ್ಯಾತ ನಟ ಜಾನಿ ಡೆಪ್ ಈಗ ಬಹಳ ಖುಷಿಯಲ್ಲಿದ್ದಾರೆ. ತಮ್ಮ ಮಾಜಿ ಪತ್ನಿ ಅಂಬರ್ ಹರ್ಡ್ ವಿರುದ್ಧ ಕೇಸು ಗೆದ್ದಿರುವ ಜಾನಿ, ಭಾರಿ ಮೊತ್ತದ ಪರಿಹಾರ ಹಣವನ್ನೂ ಸಹ ಪಡೆಯಲಿದ್ದಾರೆ.

ಜಾನಿ ಡೆಪ್ ವಿರುದ್ಧ ಗೃಹ ದೌರ್ಜನ್ಯ, ಲೈಂಗಿಕ ಕಿರುಕುಳಗಳಂಥ ಗಂಭೀರ ಆರೋಪವನ್ನು ಅಂಬರ್ ಹರ್ಡ್ ಮಾಡಿದ್ದರು. ಇಂಥಹಾ ಗಂಭೀರ ಪ್ರಕರಣಗಳಿಂದ ಪಾರಾಗಿ ಗೆದ್ದಿರುವ ಜಾನಿ ಡೆಪ್ ಈ ಗೆಲುವನ್ನು ಅದ್ಧೂರಿಯಾಗಿ ಸಂಭ್ರಮಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇAಗ್ಲೆAಡ್‌ನಲ್ಲಿ ಜಾನಿ ಡೆಪ್, ತಮ್ಮ ಈ ಗೆಲುವನ್ನು ಗೆಳೆಯರೊಟ್ಟಿಗೆ ಅದ್ಧೂರಿಯಾಗಿ ಸಂಭ್ರಮಿಸಿದ್ದು, ಇಂಗ್ಲೆAಡ್‌ನ ಬರ್ಮಿಂಗ್‌ಹ್ಯಾಮ್‌ನ ಭಾರತೀಯ ರೆಸ್ಟೊರೆಂಟ್ ಒಂದರಲ್ಲಿ ಅದ್ಧೂರಿ ಪಾರ್ಟಿ ಮಾಡಿದ್ದಾರೆ.
ಬರ್ಮಿಂಗ್‌ಹ್ಯಾಮ್‌ನಲ್ಲಿ ‘ವಾರಣಾಸಿ’ ಹೆಸರಿನ ಭಾರತೀಯ ರೆಸ್ಟೊರೆಂಟ್‌ನಲ್ಲಿ ಗೆಳೆಯರೊಟ್ಟಿಗೆ ಕೆಲ ದಿನಗಳ ಹಿಂದೆ ಪಾರ್ಟಿ ಮಾಡಿರುವ ಜಾನಿ ಡೆಪ್, ಒಂದೇ ರಾತ್ರಿಗೆ ಸುಮಾರು 48 ಲಕ್ಷ ರುಪಾಯಿ ಬಿಲ್ ಪಾವತಿಸಿದ್ದಾರೆ.
ವಾರಣಾಸಿ ರೆಸ್ಟೊರೆಂಟ್‌ನಲ್ಲಿ ‘ಕರ್ರಿ ಪಾರ್ಟಿ’ಯನ್ನು ಜಾನಿ ಡೆಪ್ ಹಾಗೂ ಗೆಳೆಯರು ಮಾಡಿದ್ದಾರೆ. ಪಾರ್ಟಿಯಲ್ಲಿ ವಿಧ ವಿಧವಾದ ಕಾಕ್‌ಟೇಲ್‌ಗಳು, ರೋಸ್ ಶಾಂಪೇನ್ ಸೇರಿದಂತೆ ವಿವಿಧ ಮಾದರಿಯ ಮದ್ಯವನ್ನು ಸರ್ವ್ ಮಾಡಲಾಗಿದೆ. ಜೊತೆಗೆ ಅತಿಥಿಗಳೆಲ್ಲರಿಗೂ ಭಾರತೀಯ ಆಹಾರವನ್ನು ಉಣಬಡಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾನಿ ಡೆಪ್ ನೀಡಿದ ಪಾರ್ಟಿಯಲ್ಲಿ ಸಂಗೀತ ನಿರ್ದೇಶಕ ಜೆಫ್ ಬೆಕ್ ಸೇರಿದಂತೆ ಸುಮಾರು 20 ಮಂದಿ ಇದ್ದರು. ಕೇವಲ 20 ಜನರಿಗೆ ನೀಡಿದ ಪಾರ್ಟಿಗೆ 48.22 ಲಕ್ಷ ರುಪಾಯಿಯನ್ನು (62,000 ಡಾಲರ್) ಜಾನಿ ಡೆಪ್ ಖರ್ಚು ಮಾಡಿದ್ದಾರೆ.
20,000 ಚದರ ಅಡಿಯ ವಾರಣಾಸಿ ರೆಸ್ಟೊರೆಂಟ್ ಅನ್ನು ಒಂದು ರಾತ್ರಿಗೆ ಬಾಡಿಗೆ ಪಡೆದಿದ್ದರು.
ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ವಾರಣಾಸಿ ರೆಸ್ಟೊರೆಂಟ್‌ನ ಮ್ಯಾನೇಜರ್ ಮೊಹಮ್ಮದ್ ಹುಸೇನ್, ಭಾನುವಾರ ಮಧ್ಯಾಹ್ನ ನಮಗೆ ಇದ್ದಕ್ಕಿದ್ದಂತೆ ಕರೆ ಬಂತು, ‘ಜಾನಿ ಡೆಪ್ ತಮ್ಮ ಗೆಳೆಯರೊಟ್ಟಿಗೆ ನಿಮ್ಮ ರೆಸ್ಟೊರೆಂಟ್‌ಗೆ ಬಂದು ಭೋಜನ ಸವಿಯಲಿದ್ದಾರೆ” ಎನ್ನಲಾಯಿತು. ನಾವು ಮೊದಲು ಇದನ್ನು ನಂಬಿರಲಿಲ್ಲ. ಆದರೆ ಬಳಿಕ ಜಾನಿ ಡೆಪ್‌ನ ಭದ್ರತಾ ತಂಡ ಬಂದಾಗಲೇ ನಮಗೆ ಖಾತ್ರಿಯಾಗಿದ್ದು”
”ಜಾನಿ ಡೆಪ್‌ನ ಭದ್ರತಾ ತಂಡ ಬಂದು ರೆಸ್ಟೊರೆಂಟ್‌ನ ಹೊರಗೆ, ಒಳಗೆ ಪರಿಶೀಲನೆ ನಡೆಸಿ, ಜಾನಿ ಡೆಪ್ ಯಾವ ಸಮಯಕ್ಕೆ ಎಷ್ಟು ಜನರೊಟ್ಟಿಗೆ ಬರಲಿದ್ದಾರೆ ಎಂಬ ಮಾಹಿತಿ ನೀಡಿದರು. ನಾವು ಜಾನಿ ಡೆಪ್‌ಗಾಗಿ ಇತರ ಗ್ರಾಹಕರಿಗೆ ರೆಸ್ಟೊರೆಂಟ್ ಅನ್ನು ಬಂದ್ ಮಾಡಿದೆವು. ಕೇವಲ ಜಾನಿ ಡೆಪ್ ಹಾಗೂ ಅವರ ಗೆಳೆಯರು ಮಾತ್ರವೇ ರೆಸ್ಟೊರೆಂಟ್‌ನಲ್ಲಿ ಭೋಜನ ಸವಿದರು.
”ನಾವು ಕಳೆದ ಒಂದು ವಾರದಲ್ಲಿ ಮಾಡಿದ ಬ್ಯುಸಿನೆಸ್ ಅನ್ನು ಜಾನಿ ಡೆಪ್ ಬಂದ ಒಂದೇ ದಿನದಲ್ಲಿ ಮಾಡಿದೆವು. ಐದು ಅಂಕೆಗಳ ಬಿಲ್ ಅನ್ನು ಅವರು ನೀಡಿ ಹೋದರು. ಒಂದು ವಾರ ನಾವು ಗಳಿಸಿದ ಬಿಲ್‌ಗಿಂತಲೂ ಎಷ್ಟೋ ಪಾಲು ಹೆಚ್ಚು ಅದು. ಅವರೊಬ್ಬ ಅದ್ಭುತ ವ್ಯಕ್ತಿ ಬಹಳ ಪ್ರೀತಿ, ಗೌರವದಿಂದ ನಮ್ಮನ್ನೆಲ್ಲ ಕಂಡರು. ಬಹಳ ಪ್ರೀತಿಯಿಂದ ಮಾತನಾಡಿದರು. ಅವರು ನನ್ನೊಟ್ಟಿಗೆ ನನ್ನ ಆಫೀಸ್‌ನಲ್ಲಿ ಕುಳಿತು ಮಾತನಾಡುತ್ತಾರೆ ಎಂದು ನಾನು ಎಣಿಸಿಯೇ ಇರಲಿಲ್ಲ” ಎಂದಿದ್ದಾರೆ.