Monday, January 20, 2025
ಕ್ರೈಮ್ದಕ್ಷಿಣ ಕನ್ನಡಪುತ್ತೂರುರಾಜ್ಯಸುದ್ದಿ

ಪುತ್ತೂರು ಕೊಂಬೆಟ್ಟು ರಸ್ತೆ ಬದಿ ಬಿದ್ದ ಯುವಕನ ಮೈತುಂಬಾ ರಕ್ತ ಸುರಿಯುತ್ತಿದ್ದ ಬ್ಯಾಂಡೇಜ್ ಬಟ್ಟೆ ; ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರಿಗೆ ಸಾರ್ವಜನಿಕರಿಗೆ ಶಾಕ್..! – ಕಹಳೆ ನ್ಯೂಸ್

ಪುತ್ತೂರು: ಗದಗ ಮೂಲದ ವ್ಯಕ್ತಿಯೋರ್ವ ರಸ್ತೆಯಲ್ಲಿ ಬಿದ್ದು ಹೈ ಡ್ರಾಮಾ ಸೃಷ್ಟಿಸಿದ ಘಟನೆ ಪುತ್ತೂರಿನ ಕೊಂಬೆಟ್ಟು ರಸ್ತೆಯಲ್ಲಿ ನಡೆದಿದೆ.

ಗದಗ ಮೂಲದ ವ್ಯಕ್ತಿಯೋರ್ವ ಕಂಠಪೂರ್ತಿ ಕುಡಿದು ಕೈಗೆ, ಹೊಟ್ಟೆಗೆಲ್ಲಾ ಬ್ಯಾಂಡೇಜ್ ಸುತ್ತಿ ಪ್ರಜ್ಞೆ ಇಲ್ಲದ ರೀತಿ ರಸ್ತೆಯಲ್ಲಿ ಬಿದ್ದು ಹೈ ಡ್ರಾಮಾ ಸೃಷ್ಟಿಸಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈತನ ಡ್ರಾಮಾಕ್ಕೆ ಕಂಗಾಲಾದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಸಾರ್ವಜನಿಕರ ಸಹಾಯದಿಂದ ಆಟೋ ರಿಕ್ಷಾದಲ್ಲಿ ವ್ಯಕ್ತಿಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು, ಆಸ್ಪತ್ರೆಯಲ್ಲಿ ಆತ ಸುತ್ತಿಕೊಂಡಿದ್ದ ಬ್ಯಾಂಡೇಜ್ ಅನ್ನು ತೆಗೆದು ನೋಡಿದಾಗ ಯಾವುದೇ ಗಾಯ ಕಾಣಿಸಿಲ್ಲ., ಬಿಳಿ ಬಣ್ಣದ ಬ್ಯಾಂಡೇಜ್ ಬಟ್ಟೆಗೆ ಬಣ್ಣವನ್ನು ಸುರಿದು ಬ್ಯಾಂಡೇಜ್ ಸುತ್ತಿಕೊಂಡಿದ್ದಾನೆ ಎನ್ನಲಾಗಿದೆ.

ಅಷ್ಟೇ ಅಲ್ಲದೇ ಯುವಕ ಕೈಯಲ್ಲಿ ಹಚ್ಚೆ ಹಾಕಿಸಿಕೊಂಡಿದ್ದು, ಒಂದು ಕೈಯಲ್ಲಿ ಅಶ್ರಿತಾ ಇನ್ನೊಂದು ಕೈಯಲ್ಲಿ ಭೀಮ ಎಂಬ ಹೆಸರಿನ ಹಚ್ಚೆಗಳಿವೆ. ಈತ ಯಾವ ಕಾರಣಕ್ಕಾಗಿ ಈ ರೀತಿಯಾಗಿ ನಾಟಕವಾಗಿದ್ದಾನೆ. ಈತನ ಎಲ್ಲಿ ವಾಸವಾಗಿದ್ದಾನೆ ಎಂಬ ಮಾಹಿತಿ ತನಿಖೆ ನಂತರವಷ್ಟೇ ತಿಳಿಯಬೇಕಿದೆ. ಆದರೆ ಈತನ ಹೈಡ್ರಾಮಾದಿಂದ ಸಾರ್ವಜನಿಕರು ಪೇಚಿಗೆ ಸಿಲುಕ್ಕಿದ್ದಂತು ನಿಜವಾಗಿದೆ..