Friday, April 11, 2025
ಸುದ್ದಿ

ಲಾಟರಿಯಲ್ಲಿ ಬರೊಬ್ಬರಿ 31 ಕೋಟಿ ಗೆದ್ದ ಮಹಿಳೆ – ಕಹಳೆ ನ್ಯೂಸ್

ಅಮೆರಿಕ: ಅಮೆರಿಕದ ಮಿಚಿಗನ್ ನಗರದಲ್ಲಿ ಮಹಿಳೆಯೋರ್ವರು 31 ಕೋಟಿ ಲಾಟರಿ ಗೆದ್ದು ಸುದ್ದಿಯಾಗಿದ್ದಾರೆ.

ಕಾರಿಗೆ ಗ್ಯಾಸ್ ಹಾಕುವ ಸಲುವಾಗಿ ಗ್ಯಾಸ್ ಸ್ಟೇಷನ್ ಬಳಿ ಮಹಿಳೆಯೊಬ್ಬಳು ನಿಂತಿದ್ದ ಸಂದರ್ಭ ವ್ಯಕ್ತಿಯೊಬ್ಬ, 30 ಡಾಲರ್ ಅಂದರೆ ಅಂದಾಜು 2300 ರೂಪಾಯಿ ಕೊಟ್ಟು ಲಾಟರಿ ಟಿಕೆಟ್ ಖರೀದಿ ಮಾಡಿ ಖಂಡಿತಾ ನಿಮಗೆ ಜಾಕ್ ಪಾಟ್ ಹೊಡೆಯುತ್ತೆ ಎಂದು ಒತ್ತಾಯ ಮಾಡಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಹಿಳೆ ಟಿಕೆಟ್ ಬೇಡ ಎಂದರೂ ಕೇಳದ ವ್ಯಕ್ತಿ ಒತ್ತಾಯ ಮಾಡಿ ಆ ಮಹಿಳೆಗೆ ಟಿಕೆಟ್ ಕೊಳ್ಳುವಂತೆ ಆಗ್ರಹಿಸಿದ್ದಾನೆ. ಕೊನೆಗೆ ಮನಸ್ಸಿಲ್ಲದಿದ್ರೂ ಒತ್ತಾಯಕ್ಕೆ ಮಣಿದು ಮಹಿಳೆ 30 ಡಾಲರ್ ಕೊಟ್ಟು ಲಾಟರಿ ಟಿಕೆಟ್ ಖರೀದಿಸಿದ ಮಹಿಳೆ ಕಾರಿನಲ್ಲಿ ಮನೆಗೆ ತೆರಳುವಾಗ ಟಿಕೆಟ್ ಸ್ಕ್ರ್ಯಾಚ್ ಮಾಡಿದ್ದು, ಲಾಟರಿ ತನಗೆ ಬಂದಿರುವುದು ಕಂಡು ಅಚ್ವರಿಗೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಮೆರಿಕದ ಜೆನೆಸೀ ಕೌಂಟಿಯ ಮಹಿಳೆ ಇವರಾಗಿದ್ದು, ಗ್ರ್ಯಾಂಡ್ ಬ್ಲಾಕ್‍ನಲ್ಲಿರುವ ಗ್ಯಾಸ್ ಸ್ಟೇಷನ್‍ನಿಂದ ಲಾಟರಿ ಟಿಕೆಟ್ ಖರೀದಿಸಿದ್ದರು. ಬಳಿಕ ಮಹಿಳೆಯು ಲಾಟರಿ ಟಿಕೆಟ್ ಹಿಡಿದು ಮಿಚಿಗನ್ ಲಾಟರಿ ಕೇಂದ್ರ ಕಚೇರಿಗೆ ತೆರಳಿದ್ದು, ಅಲ್ಲಿಯೂ ಕೂಡ ತಾವು ಗೆದ್ದಿರುವ ಹಣದ ಬಗ್ಗೆ ಖಚಿತಪಡಿಸಿಕೊಂಡಿದ್ದಾರೆ. ತಕ್ಷಣಕ್ಕೆ ಆಕೆ 19 ಕೋಟಿಯನ್ನು ತೆಗೆದುಕೊಂಡು ಹೋಗಬಹುದು ಎಂದು ಆಕೆಗೆ ತಿಳಿಸಲಾಗಿದೆ. ಉಳಿದ ಹಣ ಕಂತಿನಲ್ಲಿ ನೀಡುವುದಾಗಿ ಹೇಳಲಾಗಿದೆ.

 

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ