Monday, January 20, 2025
ಸುದ್ದಿ

ಸಾಂಪ್ರದಾಯಿಕವಾಗಿ ತನ್ನನ್ನು ತಾನೇ ಸ್ವಯಂ ಮದುವೆಯಾದ ಕ್ಷಮಾ ಬಿಂದು – ಕಹಳೆ ನ್ಯೂಸ್

ಗುಜರಾತ್: ಸ್ವಯಂ ಮದುವೆಯಾಗುವುದಾಗಿ ಘೋಷಿಸಿ ಭಾರೀ ಸುದ್ದಿ ಮಾಡಿದ್ದ ಗುಜರಾತ್ ನ ಕ್ಷಮಾ ಬಿಂದು ತನ್ನ ನಿವಾಸದಲ್ಲಿ ಸ್ವಯಂ ವಿವಾಹವಾಗುವ ಮೂಲಕ ಭಾರತದಲ್ಲಿ ಮೊದಲ ಸ್ವಯಂ ವಿವಾಹ ನಡೆದಂತಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಜೂನ್ 11 ರಂದು ಸ್ವಯಂ ಮದುವೆಯಾಗುವುದಾಗಿ ಕ್ಷಮಾ ಬಿಂದು ತಿಳಿಸಿದ್ದರು, ಆದರೆ ಇದು ಭಾರೀ ವಿವಾದಕ್ಕೆ ಕಾರಣವಾಗಿ, ಬಿಜೆಪಿಯ ಮುಖಂಡರು ದೇವಸ್ಥಾನದಲ್ಲಿ ಮದುವೆಯಾಗುವುದನ್ನು ವಿರೋಧಿಸಿದ್ದರು. ಈ ಹಿನ್ನಲೆ ಕ್ಷಮಾ ಬಿಂದು ತನ್ನ ಮನೆಯಲ್ಲೇ ಮೂರು ದಿನಗಳ ಮೊದಲೆ ಮದುವೆಯಾಗಿದ್ದಾರೆ. ಈ ವಿವಾಹ ಸಮಾರಂಭಕ್ಕೆ ಯಾವುದೇ ಪುರೋಹಿತರು ಹಾಜರಾಗಿರಲಿಲ್ಲ ಎಂದು ವರದಿಗಳು ತಿಳಿಸಿವೆ.

ಕ್ಷಮಾ ಬಿಂದು ಅವರು ಮದುವೆಯ ಎಲ್ಲಾ ವಿಧಿ ವಿಧಾನಗಳನ್ನು ಅನುಸರಿಸಿ ದೇವಸ್ಥಾನದಲ್ಲಿ ಮದುವೆಯಾಗುವುದಾಗಿ ಹೇಳಿದ್ದರು ಆದರೆ ಸ್ಥಳೀಯ ಬಿಜೆಪಿ ನಾಯಕಿ ಸುನೀತಾ ಶುಕ್ಲಾರಿಂದ ಪ್ರತಿರೋಧವನ್ನು ಎದುರಿಸಿದರು , ಹಿಂದೂ ಧರ್ಮದಲ್ಲಿ ತನ್ನನ್ನು ಮದುವೆಯಾಗಲು ಅನುಮತಿಯಿಲ್ಲದ ಕಾರಣ ದೇವಸ್ಥಾನದಲ್ಲಿ ಮದುವೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಈ ಹಿಂದೆ ಕ್ಷಮಾ ಬಿಂದುವನ್ನು ತನ್ನೊಂದಿಗೆ ಮದುವೆಯಾಗಲು ಒಪ್ಪಿಕೊಂಡಿದ್ದ ಅರ್ಚಕನು ಸಹ ಹಿಂದೆ ಸರಿದಿದ್ದು, ಕ್ಷಮಾ ಅವರ ನಿವಾಸದಲ್ಲಿ ಪುರೋಹಿತರಿಲ್ಲದೆ ಮದುವೆಯಾಗಿದ್ದಾರೆ.

ಈ ಮದುವೆಯಲ್ಲಿ ಕ್ಷಮಾ ಎಲ್ಲಾ ಸಂಪ್ರದಾಯಗಳನ್ನು ಪಾಲನೆ ಮಾಡಿದ್ದರು. ಹಳದಿ ಕಾರ್ಯಕ್ರಮ, ಮೆಹಂದಿಯೂ ಇತ್ತು. ವಿವಾಹದ ಬಳಿಕ ಎರಡು ವಾರ ಕಾಲ ಗೋವಾಗೆ ಹನಿಮೂನ್‍ಗೆ ತೆರಳುವುದಾಗಿ ಕ್ಷಮಾ ಹೇಳಿದ್ದರು.

ವಿವಾಹದ ಬಳಿಕ ಫೇಸ್ಬುಕ್‍ನಲ್ಲಿ ವೀಡಿಯೋ ಹರಿಬಿಟ್ಟಿರುವ ಕ್ಷಮ, ಎಲ್ಲರ ಬೆಂಬಲ ಮತ್ತು ಪೆÇ್ರೀತ್ಸಾಹಕ್ಕೆ ಧನ್ಯವಾದಗಳು. ವಿವಾಹಕ್ಕೆ ಶುಭ ಕೋರಿದ ಎಲ್ಲರಿಗೂ ನಾನು ಕೃತಜ್ಞಳು ಎಂದು ಹೇಳಿದ್ದಾರೆ.