Monday, January 20, 2025
ಕ್ರೈಮ್ದಕ್ಷಿಣ ಕನ್ನಡಪುತ್ತೂರುಬೆಂಗಳೂರುರಾಜಕೀಯಸುದ್ದಿ

ಯುವ ಉದ್ಯಮಿ ಗುಣರಂಜನ್ ಶೆಟ್ಟಿ ಹತ್ಯೆಗೆ ಸಂಚು…!! ಬೆಂಗಳೂರು, ಮಂಗಳೂರು ಪೊಲೀಸರಿಂದ ತನಿಖೆ – ಬಂಟ್ವಾಳ ಬಡಾ ಬಾಯ್ ಗೆ ಪೋಲೀಸ್ ಕ್ಲಾಸ್..! ಪುತ್ತೂರಿನ ‘ ಚೋಟಾ ಸೆಟಲ್ವೆಂಟ್ ‘ ಮ್ಯಾನ್ ಇನ್ ಟ್ರಬಲ್..! – ಕಹಳೆ ನ್ಯೂಸ್

ಪ್ರತಿಷ್ಠಿತ ಮಾಧ್ಯಮ ಸಂಸ್ಥೆಯ ಪಾಲುದಾರ, ಪರಿಸರವಾದಿ, ಬೆಳ್ಳಿಪಾಡಿ ಮನೆತನದ ಯುವ-ಉದ್ಯಮಿ, ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕರೂ ಆಗಿರುವ ಗುಣರಂಜನ್ ಶೆಟ್ಟಿ ಹತ್ಯೆಗೆ ಗ್ಯಾಂಗ್‌ಸ್ಟರ್‌ಗಳ ಗುಂಪೊಂದು ಸಂಚು ರೂಪಿಸಿರುವ ಬಗ್ಗೆ ಬೆಂಗಳೂರು ಮತ್ತು ಮಂಗಳೂರು ಪೊಲೀಸರು ಜಂಟಿ ತನಿಖೆ ಆರಂಭಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ, ಗುಣರಂಜನ್ ಶೆಟ್ಟಿಯವರಿಗೂ ಮಾಹಿತಿ ನೀಡಿ ಎಚ್ಚರಿಕೆಯಿಂದಿರುವಂತೆ ಸೂಚಿಸಿದೆ. ಅಗತ್ಯವಿದ್ದಲ್ಲಿ ಪೊಲೀಸ್ ರಕ್ಷಣೆ ಒದಗಿಸುವ ಭರವಸೆಯೂ ದೊರೆತಿದೆ. ಗುಣರಂಜನ್ ಈಗಾಗಲೇ ನಾಲ್ವರು ಶಸ್ತ್ರ ಸಹಿತ ಖಾಸಗಿ ಅಂಗರಕ್ಷಕರನ್ನು ನೇಮಿಸಿಕೊಂಡಿದ್ದಾರೆ. ಯಾರು- ಯಾವ ಕಾರಣಕ್ಕಾಗಿ ಈ ಹತ್ಯೆಗೆ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಬಗ್ಗೆ ಪೊಲೀಸರು ಈಗಾಗಲೇ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದಾರೆ.

ಇದುವರೆಗಿನ ತನಿಖೆಯ ಪ್ರಕಾರ ಪುತ್ತೂರಿನ ಮನ್ಮಿತ್ ರೈ ಮತ್ತು ಸಹಚರರು ಗುಣರಂಜನ್ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ಮುತ್ತಪ್ಪ ರೈಯೊಂದಿಗೆ ಗುರುತಿಸಿಕೊಂಡಿದ್ದ ಮನ್ಮಿತ್ ಎರಡು ತಿಂಗಳುಗಳ ಹಿಂದೆ ವಿದೇಶಕ್ಕೆ ತೆರಳಿದ್ದಾನೆ. ಅದಾದ ನಂತರ ನಡೆದ ಬೆಳವಣಿಗೆಗಳಲ್ಲಿ ಗುಣರಂಜನ್ ಮತ್ತು ಬಿಜೆಪಿ ದ.ಕ. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ, ಬಂಟ್ವಾಳದ ಶ್ರೀಕಾಂತ್ ಶೆಟ್ಟಿ ಹತ್ಯೆಗೆ ಸಂಚು ರೂಪಿಸಿರುವ ಬಗ್ಗೆ ಇಲಾಖೆಗೆ ಮಾಹಿತಿ ದೊರೆತಿದೆ’ ಎಂದು ಅಧಿಕಾರಿ ತಿಳಿಸಿದ್ದಾರೆ.. ಶ್ರೀಕಾಂತ ಶೆಟ್ಟಿ ಹತ್ಯೆಗೆ ಸಂಚು ರೂಪಿಸಿರುವ ಕುರಿತಂತೆ ಸಮಗ್ರ ತನಿಖೆ ನಡೆಸಬೇಕೆಂದು ಜಿಲ್ಲೆಯ ಶಾಸಕರೊಬ್ಬರು ಐಪಿಎಸ್ ಅಧಿಕಾರಿಯೊಬ್ಬರಿಗೆ ಈಗಾಗಲೇ ಸೂಚನೆ ನೀಡಿದ್ದಾರೆ. ಮುತ್ತಪ್ಪ ರೈ ನೇತೃತ್ವದ ಜಯ ಕರ್ನಾಟಕ ಸಂಘಟನೆಯಲ್ಲಿ ಗುಣರಂಜನ್ ಶೆಟ್ಟಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ.
ರೈ ನಿಧನದ ಬಳಿಕ ಸಂಘಟನೆಯಿಂದ ಬೇರ್ಪಟ್ಟ ಹಲವು ಪದಾಧಿಕಾರಿಗಳು ಅವರದೇ ನೇತೃತ್ವದಲ್ಲಿ ಜಯಕರ್ನಾಟಕ ಜನಪರ ವೇದಿಕೆ ಎಂಬ ಸಂಘಟನೆಯನ್ನು ಆರಂಭಿಸಿದ್ದಾರೆ. ಹಲವು ಜನಪರ ಹೋರಾಟಗಳಲ್ಲಿ ಮತ್ತು ಪರಿಸರ ರಕ್ಷಣೆ ಅಭಿಯಾನದಲ್ಲೂ ಅವರು ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ತೆಲುಗು ಚಿತ್ರರಂಗದ ಪುತ್ತೂರು ಮೂಲದ ಅನುಷ್ಕಾ ಶೆಟ್ಟಿ ಸಹೋದರನಾಗಿರುವ ಗುಣರಂಜನ್ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಅಥವಾ ಭೂಗತ ಕೃತ್ಯಗಳಲ್ಲಿ ಗುರುತಿಸಿಕೊಂಡಿಲ್ಲ. ಎಂಬುದನ್ನು ಪೊಲೀಸರು ಈಗಾಗಲೇ ದೃಢಪಡಿಸಿದ್ದಾರೆ. ಆದರೂ ಅವರ ಹತ್ಯಾಯತ್ನಕ್ಕೆ ಪ್ರಯತ್ನಗಳು ನಡೆಯುತ್ತಿರುವುದಕ್ಕೆ ಕಾರಣಗಳೇನು ಎಂಬ ಬಗ್ಗೆ ಗಂಭೀರ ತನಿಖೆ ನಡೆಸಲಾಗುತ್ತಿದೆ ಎಂದು ಹೆಸರು ಬಹಿರಂಗಗೊಳಿಸಲು ಇಚ್ಛಿಸದ ಐಪಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭವಿಷ್ಯದ ದಿಬಗಳಲ್ಲಿ ಭೂಗತ ಚಟುವಟಿಕೆಗಳು ಸಕ್ರಿಯವಾಗಲು ಪೊಲೀಸ್ ಇಲಾಖೆ ಅವಕಾಶ ನೀಡುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗುಣರಂಜನ್ ಶೆಟ್ಟಿ ಹತ್ಯೆಗೆ ಗ್ಯಾಂಗ್‌ಸ್ಟರ್‌ಗಳ ತಂಡವೊಂದು ನಡೆಸಿರುವ ಸಂಚಿಗೆ ಜಯ ಕರ್ನಾಟಕ ಜನಪರ ವೇದಿಕೆಯ ಹಲವು ನಾಯಕರು ಮತ್ತು ಪದಾಧಿಕಾರಿಗಳು ಮತ್ತು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಇಲಾಖೆಯ ದಕ್ಷ ಅಧಿಕಾರಿಗಳಿಂದ ಪ್ರಕರಣದ ಆರೋಪಿಗಳ ಬಂಧನವಾಗುವ ವಿಶ್ವಾಸ ತಮಗಿದೆ ಎಂದು ಸಂಘಟನೆಯ ವಕ್ತಾರರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯುವ-ಉದ್ಯಮಿ ಗುಣ ರಂಜನ್ ಶೆಟ್ಟಿ ಹತ್ಯೆಗೆ ಸಂಚು? ನಾನವನಲ್ಲ : ಮನ್ಮಿತ್ ರೈ ಥಾಲ್ಯಾಂಡ್‌ನಲ್ಲಿದ್ದೇನೆ ಎಂದು ಹೇಳಿಕೊಂಡು ‘ಖಾಸಗೀ ಪತ್ರಿಕೆಯೊಂದಿಗೆ ಮಾತನಾಡಿದ ಮನ್ಮಿತ್, ‘ಕ್ರಿಮಿನಲ್ ಚಟುವಟಿಕೆಗಳಲ್ಲಿ ನಾನು ಈ ಹಿಂದೆ-ಯೂ ಗುರುತಿಸಿಕೊಂಡಿಲ್ಲ. ಭವಿಷ್ಯದ ದಿನಗಳಲ್ಲೂ ಭೂಗತ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಿಲ್ಲ,’ ಎಂದು ಸ್ಪಷ್ಟಪಡಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ನನ್ನ ಹೆಸರನ್ನು ಪ್ರಸ್ತಾಪಿಸಿರುವುದು ನಿಜ. ಆದರೆ ಯಾವುದೇ ಕಾರಣಕ್ಕೂ ನಾನು ಸಂಚಿನಲ್ಲಿ ಒಳಗೊಂಡಿಲ್ಲ ಗುಣರಂಜನ್ ಶೆಟ್ಟಿಯವರಿಗೂ ಈ ಕುರಿತು ಮನವರಿಕೆ ಮಾಡಿರುವುದಾಗಿ ಮನ್ಮಿತ್ ಹೇಳಿದ್ದಾರೆ.
ನಾನು ಉದ್ಯಮ ಆರಂಭಿಸುವ ಉದ್ದೇಶದಿಂದ ಮಾತ್ರ ಥಾಲ್ಯಾಂಡಿಗೆ ಬಂದಿದ್ದೇನೆ ಎಂದು ಭೂಗತ ದೊರೆ ಮುತ್ತಪ್ಪ ರೈ ನಿಕಟ ಸಂಬಂಧಿಯೂ ಆಗಿರುವ ಅವರು ಸ್ಪಷ್ಟಪಡಿಸಿದ್ದಾರೆ.
ಪುತ್ತೂರು ತಾಲೂಕಿನಲ್ಲಿ ನಾನು ಹಲವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೆ. ಕೊರೋನಾ ಸಂಕಷ್ಟದ ದಿನಗಳಲ್ಲಿ ಲಕ್ಷಾಂತರ ರೂ.ಗಳನ್ನು ವ್ಯಯಿಸಿ ಆರ್ಥಿಕವಾಗಿ ಹಿಂದುಳಿದವರಿಗೆ ನೆರವಾಗಿದ್ದೇನೆ. ಇದನ್ನು ಸಹಿಸದ ಕೆಲವರು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಮಾದಕವಸ್ತು ಪ್ರಕರಣದಲ್ಲೂ ನನ್ನ ಹೆಸರನ್ನು ಎಳೆದು ತರುವ ಪ್ರಯತ್ನಗಳು ನಡೆದಿತ್ತು. ಇವೆಲ್ಲದರಿಂದ ಮನನೊಂದು ನಾನು ವಿದೇಶಕ್ಕೆ ಬಂದಿದ್ದೇನೆ. ಕೊಲೆಗೆ ಸಂಚು ರೂಪಿಸಿರುವ ಪ್ರಕರಣದ ಬಗ್ಗೆ ಪೊಲೀಸರು ಸ್ಪಷ್ಟ ತನಿಖೆ ನಡೆಸಿದ್ದೇ ಆದಲ್ಲಿ ಸತ್ಯ ಹೊರಬರಲಿದೆ ಎಂದು ಮನ್ವಿತ್ ರೈ ತಿಳಿಸಿದ್ದಾರೆ.
‘ಗುಣರಂಜನ್ ಶೆಟ್ಟಿ ಮತ್ತು ಶ್ರೀಕಾಂತ್ ಹತ್ಯೆಗೆ ಸಂಚು ನಡೆದಿದೆಯೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ. ಈ ಪ್ರಕರಣದಲ್ಲಿ ನನ್ನ ಕೈವಾಡವಂತೂ ಇಲ್ಲವೇ ಇಲ್ಲ’ ಎಂದು ಮನ್ಮಿತ್ ರೈ ಪ್ರತಿಕ್ರಿಯಿಸಿದ್ದಾರೆ.

ಆದರೆ, ಮನ್ಮಿತ್ ಆಪ್ತನೊಬ್ಬ ಈಗಾಗಲೇ ಮುಂಬೈನಲ್ಲಿ ಭೂಗತ ಆಗಿರುವ ಬಗ್ಗೆಯೂ ಪೋಲೀಸರಿಗೆ ಅನುಮಾನ ಮೂಡಿದ್ದು, ಭೂಗತ ಪ್ರಪಂಚದ ಕೆಲವು ವ್ಯಕ್ತಿಗಳನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದುಕೊಂಡು ಬೆಂಡೆತಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಹಾಗೂ ಬಂಟ್ವಾಳ ಮೂಲದ, ಒಂದು ಕಾಲದ ಮುತ್ತಪ್ಪ ರೈ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ವ್ಯಕ್ತಿಯೊಬ್ಬರನ್ನೂ ಪೋಲೀಸರು ಕರೆಸಿಕೊಂಡು ಕ್ಲಾಸ್ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿಯೂ ಮಾಧ್ಯಮಗಳಿಗೆ ಲಭಿಸಿದೆ. ಇನ್ನು ಮನ್ಮಿತ್ ರೈ ಸಹ ಅದೇ ವ್ಯಕ್ತಿಯ ಅಂಕೆಯಲ್ಲಿ ಕುಣಿಯುವ ಗೊಂಬೆಯಾಗಿದ್ದು, ಆ ವ್ಯಕ್ತಿಯ ನಿರ್ದೇಶನದಂತೆ ಕೆಲಸ ಮಾಡುತ್ತಿರುವುದು ಹಾಗೂ ಸಣ್ಣ ಪುಟ್ಟ ‘ ಚೋಟಾ ಸೆಟಲ್ವೆಂಟ್ ‘ ಮಾಡಿಕೊಂಡು ಜೀವನ ನಡೆಸುತ್ತಿದ್ದರೂ ಶೋಕಿಗೇನು ಕಮ್ಮಿ ಇಲ್ಲ ಎಂಬಂತೆ ಒಂದೆರದು ಬ್ಲಾಕ್ ಅಂಗಿ ಧರಿಸಿದ ವ್ಯಕ್ತಿಗಳನ್ನು ಜೊತೆಗಿರಿಸಿಕೊಂಡು ಅಮಾವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ ಪುತ್ತೂರಿನಲ್ಲಿ ಕಾಣಿಸಿಕೊಳ್ಳುವ ಕಯಾಲಿ ಹೊಂದಿದ್ದಾನೆಯೇ ಹೊರತು ಇನ್ನೇನು ಇಲ್ಲ ಎಂಬಂತೆ ಒಂದಿಷ್ಟು ಪೋಲೀಸ್ ಹಿರಿಯ ಅಧಿಕಾರಿಗಳು ಮನ್ಮಿತ್ ಬಗ್ಗೆ ಹೇಳುತ್ತಾರೆ. ಆದರೆ ಈ ಪ್ರಕರಣದಲ್ಲಿ ತನ್ನ ಕೈವಾಡ ಇಲ್ಲ ಎಂದು ಸ್ವತಃ ಮನ್ಮಿತೇ ಹೇಳಿರುತ್ತಾನೆ. ಒಟ್ಟಿನಲ್ಲಿ ತನಿಖೆ ಮುಂದುವರಿದಿದೆ ಎಂದು ಪೋಲೀಸ್ ಮೂಲಗಳು ಮಾಹಿತಿ ನೀಡಿದೆ.