ಬಾಕ್ಸ್ ಆಫೀಸಲ್ಲಿ ಧೂಳೆಬ್ಬಿಸುತ್ತಿದೆ “ವಿಕ್ರಂ” ಸಿನಿಮಾ; ಹತ್ತೇ ದಿನಗಳಲ್ಲಿ 300 ಕೋಟಿ ಕಲೆಕ್ಷನ್- ಕಹಳೆ ನ್ಯೂಸ್
ಕಮಲ್ ಹಾಸನ್ ಅಭಿನಯದ “ವಿಕ್ರಂ” ಸಿನಿಮಾ ಬಾಕ್ಸ್ ಆಫೀಸಲ್ಲಿ ಧೂಳೆಬ್ಬಿಸುತ್ತಿದೆ. ಈಗಾಗಲೇ ಚಿತ್ರ ಪ್ರೇಮಿಗಳಿಂದ ಭೇμï ಎನಿಸಿಕೊಂಡ ಈ ಚಿತ್ರ ಅತಿ ಹೆಚ್ಚು ಗಳಿಕೆಯ ತಮಿಳು ಚಲನಚಿತ್ರಗಳಲ್ಲಿ ಒಂದಾಗುವ ಹಾದಿಯತ್ತ ಸಾಗುತ್ತಿದೆ. ಇದೀಗ ಬಿಡುಗಡೆಯಾದ ಕೇವಲ ಹತ್ತು ದಿನಗಳಲ್ಲಿ, ವಿಜಯ್ ಸೇತುಪತಿ, ಫಹದ್ ಫಾಸಿಲ್ ಮತ್ತು ಸೂರ್ಯ ಒಳಗೊಂಡಿರುವ ಆಕ್ಷನ್-ಪ್ಯಾಕ್ಡ್ ಮಲ್ಟಿ-ಸ್ಟಾರರ್ ವಿಕ್ರಂ ಸಿನಿಮಾ, ವಿಶ್ವಾದ್ಯಂತ ₹ 300 ಕೋಟಿ ಕಲೆಕ್ಷನ್ ಮಾಡಿದೆ. ಯುಎಸ್‍ನಲ್ಲಿ, ವಿಕ್ರಮ್ ತನ್ನ ಎರಡನೇ ವಾರಾಂತ್ಯದ ಕೊನೆಯಲ್ಲಿ $2.5 ಮಿಲಿಯನ್ ಕ್ಲಬ್‍ಗೆ ಸೇರಿಕೊಂಡಿದೆ.
ಲೋಕೇಶ್ ಕನಕರಾಜ್ ನಿರ್ದೇಶನದ ವಿಕ್ರಮ್ ಚಿತ್ರದಲ್ಲಿ ಕಮಲ್ ಹಾಸನ್ ಅವರು ಮಾಜಿ ಏಜೆಂಟ್ ವಿಕ್ರಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ನಾರ್ಕೋಟಿಕ್ ಬ್ಯೂರೋದಲ್ಲಿ ರಹಸ್ಯ ಅಧಿಕಾರಿಯಾಗಿದ್ದ ತಮ್ಮ ಮಗನ ಸಾವಿಗೆ ಸೇಡು ತೀರಿಸಿಕೊಳ್ಳಲು ಹೊರಟಿದ್ದಾರೆ.ಇಂಡಸ್ಟ್ರಿ ಟ್ರ್ಯಾಕರ್ ರಮೇಶ್ ಬಾಲಾ ಅವರು ವಿಕ್ರಮ್ ವಿಶ್ವಾದ್ಯಂತ ₹ 300 ಕೋಟಿ ಕ್ಲಬ್‍ಗೆ ಈ ಚಿತ್ರ ಸೇರಿದೆ ಎಂದು ಟ್ವಿಟರ್‍ನಲ್ಲಿ ಬಹಿರಂಗಪಡಿಸಿದ್ದಾರೆ. ಕಮಲ್ ಹಾಸನ್ ಅವರ ವೃತ್ತಿಜೀವನದಲ್ಲಿ ಇದು ಮೊದಲ ₹300 ಕೋಟಿ ಗಳಿಕೆಯಾಗಿದೆ ಎಂದು ರಮೇಶ್ ಸೇರಿಸಿದ್ದಾರೆ.
ಚಿತ್ರದ ಯಶಸ್ಸಿನಿಂದ ಇಡೀ ಚಿತ್ರ ತಂಡ ಸಂಭ್ರಮದಲ್ಲಿದೆ. ಕಳೆದ ವಾರ, ಕಮಲ್ ಹಾಸನ್ ಅವರು ಚೆನ್ನೈನಲ್ಲಿ ಮಾಧ್ಯಮಗಳನ್ನು ಭೇಟಿ ಮಾಡಿದರು ಮತ್ತು ಚಿತ್ರದ ಪ್ರತಿಕ್ರಿಯೆಯಿಂದ ಥ್ರಿಲ್ ಆಗಿದ್ದೇನೆ ಎಂದು ಹೇಳಿದರು. ಈ ಯಶಸ್ಸು ಮುಂದಿನ ಕೆಲಸಗಳಿಗೆ ಹೆಚ್ಚು ಶ್ರಮಿಸಲು ಪ್ರೇರೇಪಿಸುತ್ತದೆ ಎಂದು ಅವರು ಹೇಳಿದರು. ಚಿತ್ರದಲ್ಲಿ 10 ನಿಮಿಷಗಳ ಅತಿಥಿ ಪಾತ್ರದಲ್ಲಿ ನಟಿಸುವ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದಕ್ಕಾಗಿ ಅವರು ನಟ ಸೂರ್ಯ ಅವರಿಗೆ ಧನ್ಯವಾದ ಹೇಳಿದರು. ಚಿತ್ರದಲ್ಲಿ ವಿಲನ್ ಆಗಿ ಬರುವ ಸೂರ್ಯ, ರೋಲೆಕ್ಸ್ ಎಂಬ ಪಾತ್ರವನ್ನು ನಿರ್ವಹಿಸುತ್ತಾರೆ.